ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಸಾತ್ವಿಕ್‌ಸಾಯ್‌ರಾಜ್-ಚಿರಾಗ್ ಜೋಡಿಗೆ ಸೋಲು

Tokyo Olympics: Satwiksairaj and Chirag lose to Indonesians in Badminton-Mens Doubles

ಟೋಕಿಯೋ: ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲೂ ಭಾರತಕ್ಕೆ ನಿರಾಸೆಯಾಗಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ ಎರಡನೇ ಪಂದ್ಯದಲ್ಲಿ ಭಾರತೀಯ ಜೋಡಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋತಿದ್ದಾರೆ. ವಿಶ್ವ ನಂ.1 ಇಂಡೋನೇಶಿಯನ್ ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ಎದುರು ಭಾರತೀಯ ಜೋಡಿ ಸೋತಿದೆ.

ಟೋಕಿಯೋ ಒಲಿಂಪಿಕ್ಸ್ 2021: ಜುಲೈ 26ಕ್ಕೆ ಭಾರತೀಯರ ವೇಳಾಪಟ್ಟಿಟೋಕಿಯೋ ಒಲಿಂಪಿಕ್ಸ್ 2021: ಜುಲೈ 26ಕ್ಕೆ ಭಾರತೀಯರ ವೇಳಾಪಟ್ಟಿ

ಸೋಮವಾರ (ಜುಲೈ 26) ನಡೆದ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ ದ್ವಿತೀಯ ಪಂದ್ಯದಲ್ಲಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ದಂತಕತೆಗಳಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ವಿರುದ್ಧ 13-21, 12-21ರ ನೇರ ಸೆಟ್ ಸೋಲನುಭವಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಮೂಲಕ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದ ಸಾತ್ವಿಕ್ ಮತ್ತು ಚಿರಾಗ್ ಬಗ್ಗೆ ನಿರೀಕ್ಷೆಗಳಿದ್ದವು. ಆದರೆ ದ್ವಿತೀಯ ಪಂದ್ಯದಲ್ಲಿ ಇಂಡೋನೇಶಿಯನ್ ಜೋಡಿ ಎದುರಾದಾಗಲೇ ಪದಕದಾಸೆ ಮಂಕಾಗಿತ್ತು.

ಶ್ರೀಲಂಕಾದ ರಾಷ್ಟ್ರಗೀತೆ ಹಾಡಿದ ಹಾರ್ದಿಕ್ ಪಾಂಡ್ಯ: ವೈರಲ್ ವಿಡಿಯೋಶ್ರೀಲಂಕಾದ ರಾಷ್ಟ್ರಗೀತೆ ಹಾಡಿದ ಹಾರ್ದಿಕ್ ಪಾಂಡ್ಯ: ವೈರಲ್ ವಿಡಿಯೋ

ಭಾರತೀಯ ಜೋಡಿ ಮತ್ತು ಇಂಡೋನೇಶಿಯನ್ ಜೋಡಿಯ ಮಧ್ಯೆ 32 ನಿಮಿಷಗಳ ಕದನ ನಡೆದಿದ್ದು ಕಾಣಸಿಕ್ಕಿತು. ಈವರೆಗೆ ಭಾರತಕ್ಕೆ ಪದಕ ಬಂದಿದ್ದು ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮಾತ್ರ. 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದಿದ್ದು ಬಿಟ್ಟರೆ ಬೇರೆ ಪದಕಗಳು ಬಂದಿಲ್ಲ.

Story first published: Monday, July 26, 2021, 12:24 [IST]
Other articles published on Jul 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X