ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಊಬರ್ ಕಪ್: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು: ಕ್ವಾ. ಫೈನಲ್‌ಗೆ ಸಿಂಧು ಪಡೆಯ ಹೋರಾಟ ಅಂತ್ಯ

Uber cup: After defeat against Thailand, Indias PV Sindhu-led team eliminated in the quarter-finals

ಊಬರ್ ಕಪ್ 2022ರಲ್ಲಿ ಭಾರತ ಮಹಿಳಾ ತಂಡದ ಅಭಿಯಾನ ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯಗೊಂಡಿದೆ. ಮೇ 12 ರಂದು ಗುರುವಾರ ಬ್ಯಾಂಕಾಕ್‌ನಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಆತಿಥೇಯ ಥಾಯ್ಲೆಂಡ್‌ ವಿರುದ್ಧ 0-3 ಅಂತರದಲ್ಲಿ ಸೋಲು ಅನುಭವಿಸುವುದರೊಂದಿಗೆ ಭಾರತದ ಊಬರ್ ಕಪ್ 2022ರ ಅಭಿಯಾನ ಮುಕ್ತಾಯವಾಗಿದೆ. ಕ್ವಾರ್ಟರ್-ಫೈನಲ್ ಸೆಣೆಸಾಟದಲ್ಲಿ ಭಾರತಕ್ಕೆ ಖಾತೆ ತೆರೆಯಲು ಸಾಧ್ಯವಾಗದೆ ನಿರಾಸೆ ಅನುಭವಿಸಿದೆ. ಈ ಮೂಲಕ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ಅವಕಾಶವನ್ನು ಭಾರತ ಕಳೆದುಕೊಂಡಿತು.

ಭಾರತದ ಮಹಿಳೆಯರು 2014 ಮತ್ತು 2016 ರಲ್ಲಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕಳೆದ 2 ಆವೃತ್ತಿಗಳಲ್ಲಿ ಭಾರತ ಮಹಿಳಾ ತಂಡ ಟೀಮ್ ಈವೆಂಟ್‌ನ ಸೆಮಿಫೈನಲ್ ಹಂತವನ್ನು ತಲುಪಲು ಯಶಸ್ವಿಯಾಗಿಲ್ಲ. ಊಬರ್ ಕಪ್ ಗ್ರೂಪ್ ಹಂತದಲ್ಲಿ ಭಾರತ ಕೊರಿಯಾ ವಿರುದ್ಧ 0-5 ಅಂತರದ ಸೋಲು ಅನುಭವಿಸಿದ್ದರೂ ಕೆನಡಾ ಮತ್ತು ಯುಎಸ್‌ಎ ತಂಡಗಳನ್ನು ಸೋಲಿಸಿ ಭಾರತ ಡಿ ಗುಂಪಿನಲ್ಲಿ 2ನೇ ಸ್ಥಾನ ಗಳಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು.

ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ಭಾರತ ಪ್ರಮುಖ ಆಟಗಾರ್ತಿ ಪಿವಿ ಸಿಂಧು ತನ್ನ ಎದುರಾಳಿ ರಚನೋಕ್ ಇಂಟನಾನ್ ವಿರುದ್ಧ ಮೂರು ಗೇಮ್‌ಗಳಲ್ಲಿ ಸೋಲು ಅನುಭವಿಸಿದ್ದರಿಂದ ತಂಡ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಮುಖಾಮುಖಿಯಲ್ಲಿ ಸಿಂಧು ಮೊದಲ ಗೇಮ್ ಅನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದರು ಆದರೆ ಎರಡು ಬಾರಿಯ ಒಲಂಪಿಕ್ ಪದಕ ವಿಜೇತೆ ಇಂಟಾನಾನ್ ಮುಂದಿನ ಎರಡು ಗೇಮ್‌ಗಳಲ್ಲಿಯೂ ಮೇಲುಗೈ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು.

ಸಿಂಧು ಈ ಪಂದ್ಯದಲ್ಲಿ 21-19, 17-21, 12-21 ಅಂತರದಿಂದ 59 ನಿಮಿಷಗಳಲ್ಲಿ ಸೋಲು ಅನುಭವಿಸಿದರು. ನಂತರ ಯುವ ಮತ್ತು ಅನನುಭವಿ ಭಾರತೀಯ ಶಟ್ಲರ್‌ಗಳಿಗೆ ಥಾಯ್ಲೆಂಡ್ ವಿರುದ್ಧ ವಿಶೇಷವಾಗಿ ಡಬಲ್ಸ್ ಪಂದ್ಯಗಳಲ್ಲಿ ಹೋರಾಟ ನಡೆಸುವುದು ಕಠಿಣವಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಪೋರ್ನ್‌ಪಾವೀ ಚೊಚುವಾಂಗ್ ಅವರು ಆಕರ್ಷಿ ಕಶ್ಯಪ್ ಅವರ ಸವಾಲನ್ನು 16-21, 11-21 ಅಂತರದಿಂದ 42 ನಿಮಿಷಗಳಲ್ಲಿ ಸೋಲಿಸಿದರು.

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ಬ್ಯಾಂಕಾಕ್‌ನಲ್ಲಿ ನಡೆಯುವ ಥಾಮಸ್ ಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಮಲೇಷ್ಯಾವನ್ನು ಎದುರಿಸಲಿದೆ. ಕಿಡಂಬಿ ಶ್ರೀಕಾಂತ್ ನೇತೃತ್ವದ ತಂಡ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು.

Story first published: Thursday, May 12, 2022, 19:21 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X