ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಿಂಚಿದ ಪಿವಿ ಸಿಂಧು: ಊಬರ್ ಕಪ್ ಟೈನಲ್ಲಿ ಯುಎಸ್ಎ ವಿರುದ್ಧ ಗೆದ್ದ ಭಾರತ

Uber Cup: India beats USA in tie and entered to quarter finals

ಸದ್ಯ ನಡೆಯುತ್ತಿರುವ ಊಬರ್ ಕಪ್ ಟೂರ್ನಿಯ ಇಂದಿನ ಟೈನಲ್ಲಿ ಭಾರತ ಎದುರಾಳಿ ಯುಎಸ್ಎ ವಿರುದ್ಧ 4-1 ಅಂತರದ ಗೆಲುವನ್ನು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲಿಗೆ ಭಾರತದ ಪಿವಿ ಸಿಂಧು ಮತ್ತು ಯುಎಸ್ಎನ ಜೆನ್ನಿ ಗೈ ನಡುವೆ ನಡೆದ ಸೆಣಸಾಟದಲ್ಲಿ ಪಿವಿ ಸಿಂಧು 21-10, 21-11 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದರು. ಇಬ್ಬರ ನಡುವೆ 26 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಪಿವಿ ಸಿಂಧು 2-0 ಅಂತರದ ಮುನ್ನಡೆನಯನ್ನು ಗಳಿಸಿ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು. ನಂತರ ನಡೆದ ಡಬಲ್ಸ್ ಸುತ್ತಿನಲ್ಲಿ ಭಾರತದ ತನೀಶಾ ಕ್ಸಸ್ಟೋ ಮತ್ತು ತ್ರೀಸಾ ಜಾಲಿ ಎದುರಾಳಿ ಯುಎಸ್ಎ ತಂಡದ ಕಾರ್ಬೆಟ್ ಮತ್ತು ಲೀ ಜೋಡಿ ವಿರುದ್ಧ 21-19 ಮತ್ತ 21-10 ಸೆಟ್‌ಗಳ ಅಂತರದಲ್ಲಿ ಗೆಲುವನ್ನು ಕಂಡು 2-0 ಅಂತರದ ಮುನ್ನಡೆಯನ್ನು ಸಾಧಿಸಿದರು. ಈ ಗೆಲುವಿನ ಮೂಲಕ ಟೈನಲ್ಲಿ ಭಾರತ ಯುಎಸ್ಎ ವಿರುದ್ಧ 2-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿತ್ತು.

ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!

ನಂತರ ಟೈನ ಮೂರನೇ ಸುತ್ತಿನಲ್ಲಿ ಸಿಂಗಲ್ ಹಣಾಹಣಿ ನಡೆಯಿತು. ಭಾರತದ ಆಕರ್ಷಿ ಕಷ್ಯಪ್ ಯುಎಸ್ಎಯ ಎಸ್ತರ್ ಶಿ ವಿರುದ್ಧ 21-18 ಮತ್ತು 21-11 ಅಂತರದ ಸೆಟ್‌ಗಳಿಂದ ಗೆಲುವನ್ನು ಕಾಣುವ ಮೂಲಕ ತಂಡದ ಲೀಡ್‌ನ್ನು 3-0ಗೆ ಏರಿಸಿದರು. ನಂತರ ಟೈನ ನಾಲ್ಕನೇ ಸುತ್ತಿನಲ್ಲಿ ಭಾರತದ ಡಬಲ್ಸ್ ಜೋಡಿ ಸಿಮ್ರಾನ್ ಶಿಂಗಿ ಮತ್ತು ರಿತಿಕಾ ಠಾಕೇರ್ ಯುಎಸ್ಎ ಜೋಡಿ ಲಾಮ್/ಲೀ ವಿರುದ್ಧ 12-21, 21-17 ಮತ್ತು 13-21 ಸೆಟ್‌ಗಳ ಅಂತರದ ಸೋಲನ್ನು ಅನುಭವಿಸಿತು. ಈ ಮೂಲಕ ಯುಎಸ್ಎ ನಾಲ್ಕನೇ ಸುತ್ತಿನಲ್ಲಿ ಗೆಲುವಿನ ಖಾತೆಯನ್ನು ತೆರೆಯಿತು.

MI vs KKR: ಮೋಸದ ತೀರ್ಪಿಗೆ ಬಿತ್ತಾ ರೋಹಿತ್ ವಿಕೆಟ್?; ಮೋಸವೆನ್ನಲು ಇಲ್ಲಿದೆ ಬಲವಾದ ಕಾರಣ!MI vs KKR: ಮೋಸದ ತೀರ್ಪಿಗೆ ಬಿತ್ತಾ ರೋಹಿತ್ ವಿಕೆಟ್?; ಮೋಸವೆನ್ನಲು ಇಲ್ಲಿದೆ ಬಲವಾದ ಕಾರಣ!

ಆದರೆ, ಅಂತಿಮ ಸುತ್ತಿನಲ್ಲಿ ಭಾರತದ ಆಶ್ಮಿತಾ ಚಾಲಿಯಾ ಯುಎಸ್ಎಯ ನಟಾಲಿ ಚಿ ವಿರುದ್ಧ 21-18 ಮತ್ತು 21-13 ಸೆಟ್‌ಗಳ ಅಂತರದ ಗೆಲುವನ್ನು ಸಾಧಿಸಿದರು. ಈ ಮೂಲಕ ಅಂತಿಮವಾಗಿ ಐದು ಸುತ್ತುಗಳು ಮುಕ್ತಾಯವಾದ ಬಳಿಕ ಭಾರತ 4-1 ಅಂತರದ ಗೆಲುವನ್ನು ದಾಖಲಿಸಿದ್ದು, ಊಬರ್ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಹಾಗೂ ಕೊರಿಯನ್ ತಂಡ ಕೂಡ ಕ್ವಾರ್ಟರ್ ಫೈನಲ್ ಸುತ್ತನ್ನು ಪ್ರವೇಶಿಸಿದ್ದು, ಇತ್ತಂಡಗಳ ನಡುವಿನ ಸೆಣಸಾಟ ನಾಳೆ ( ಮೇ 11ರ ಬುಧವಾರ ) ನಡೆಯಲಿದೆ.

Story first published: Wednesday, May 11, 2022, 9:22 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X