ನಂಬರ್ 1 ಬ್ಯಾಡ್ಮಿಂಟನ್ ಆಟಗಾರ ಕೆಂಟೋ ಮೊಮೊಟಾ ಕಾರು ಅಪಘಾತ, ಡ್ರೈವರ್ ಸಾವು

ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ ಕೆಂಟೋ ಮೊಮೊಟಾ ಕಾರು ಅಪಘಾತಕ್ಕೀಡಾಗಿ ಸ್ವಲ್ಪದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಕಿಂಟೋ ಕಾರ್ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಕೆಂಟೋ ಸೇರಿದಂತೆ ಕಾರ್‌ನಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಲೇಷ್ಯಾದ ಕೌಲಲಾಂಪುರದಲ್ಲಿ ಈ ಅಪಘಾತ ಸಂಭವಿಸಿದ್ದು, ಪವಾಡ ರೀತಿಯಲ್ಲಿ ಜಪಾನ್‌ನ 25 ವರ್ಷದ ಸ್ಟಾರ್ ಆಟಗಾರ ಪಾರಾಗಿದ್ದಾರೆ. ಮಲೆಷ್ಯಾ ಮಾಸ್ಟರ್ಸ್‌ನಲ್ಲಿ ಮೊದಲ ಪಂದ್ಯ ಗೆದ್ದ ನಾಲ್ಕೇ ಗಂಟೆಯಲ್ಲಿ ಭೀಕರ ಅಪಘಾತ ಉಂಟಾಗಿದೆ.

ಕೆಕೆಆರ್‌ನ ಅತೀ ಹಿರಿಯ ಆಟಗಾರನಿಗೆ ಐಪಿಎಲ್ ಆಡಲು ಅವಕಾಶವೇ ಇಲ್ಲ!ಕೆಕೆಆರ್‌ನ ಅತೀ ಹಿರಿಯ ಆಟಗಾರನಿಗೆ ಐಪಿಎಲ್ ಆಡಲು ಅವಕಾಶವೇ ಇಲ್ಲ!

ಅಪಘಾತದ ಬಗ್ಗೆ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಮುಂಜಾನೆ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಿಧಾನಕ್ಕೆ ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು ಕಾರ್ ಡ್ರೈವರ್ ಮೃತಪಟ್ಟಿದ್ದಾರೆ. ಜಪಾನ್‌ನ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರನ ಮೂಗು ಮುರಿತಕ್ಕೊಳಗಾಗಿದ್ದು ಮುಖಕ್ಕೆ ಗಾಯಗಳಾಗಿದೆ. ಈ ಸಂದರ್ಭದಲ್ಲಿ ಕೆಂಟೋ ಮೊಮೊಟಾ ಜತೆಯಲ್ಲಿ ಅಸಿಸ್ಟೆಂಟ್ ಕೋಚ್, ಫಿಸಿಯೋ ಥೆರಫಿಸ್ಟ್, ಜಪಾನ್ ಬ್ಯಾಡ್ಮಿಂಟನ್ ಸಂಸ್ಥೆಯ ಅಧಿಕಾರಿಯೊಬ್ಬರುಬ ಕೂಡ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದು ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಕೆಂಟೋ ಮೊಮೊಟಾ ದಾಖಲಾಗಿದ್ದ ಆಸ್ಪತ್ರೆಗೆ ಮಲೇಷ್ಯಾ ಕ್ರೀಡಾ ಸಚಿವ ಸೈಯ್ಯದ್ ಸಿದ್ಧೀಕ್ ಭೇಟಿ ನೀಡಿ ಮಾತನಾಡಿದ್ದಾರೆ. 'ನಿಜಕ್ಕೂ ಇದೊಂದು ದುರಂತ. ಚಿಕಿತ್ಸೆಗೆ ಕೆಂಟೋ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಗಾಯಗೊಂಡ ನಾಲ್ವರ ಸ್ಥಿತಿಯೂ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಬಿಸಿಸಿಐ ಅವಾರ್ಡ್ಸ್ 2018-19: ವಿಜೇತ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿಬಿಸಿಸಿಐ ಅವಾರ್ಡ್ಸ್ 2018-19: ವಿಜೇತ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ

ಮಲೆಷ್ಯಾ ಮಾಸ್ಟರ್ಸ್‌ನಲ್ಲಿ ಪಾಲ್ಗೊಂಡ ಬಳಿಕ ಟೀಕಿಯೋ ಒಲಿಂಪಿಕ್ಸ್‌ಗಾಗಿ ತರಬೇತಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಸ್ಥಳೀಯ ಕಾಲಮಾನ ಮುಂಜಾನೆ 4:40ಕ್ಕೆ ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ತಕ್ಷಣವೇ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Monday, January 13, 2020, 16:05 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X