ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥೈಲಾಂಡ್‌ನಲ್ಲಿ ದಾಖಲೆ ನಿರ್ಮಿಸಿ ದೇಶಕ್ಕೆ ಕೀರ್ತಿ ತಂದ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್

Actor Arun Sagars son Surya Sagar became the first Indian to win at Rajadamnern stadium of Thailand

ಸಾಮಾನ್ಯವಾಗಿ ನಟ ಮತ್ತು ನಟಿಯರ ಮಕ್ಕಳು ತಮ್ಮ ಪೋಷಕರ ರೀತಿಯೇ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಹಾಗೂ ಸ್ಟಾರ್ ಆಗಬೇಕು ಎಂಬ ಕನಸನ್ನು ಚಿಕ್ಕ ವಯಸ್ಸಿನಿಂದಲೇ ಹೊಂದಿರುತ್ತಾರೆ. ಆದರೆ, ಕೆಲ ಕಲಾವಿದರ ಮಕ್ಕಳು ಮಾತ್ರ ತಮ್ಮ ಪೋಷಕರ ಕ್ಷೇತ್ರವನ್ನು ಬಿಟ್ಟು ಇತರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಮಿಳು ನಟ ಮಾಧವನ್ ಪುತ್ರ ವೇದಾಂತ್ ಮಾಧವನ್ ತಮ್ಮ ತಂದೆಯ ಹಾದಿಯಲ್ಲೇ ಸಾಗದೇ ಕ್ರೀಡಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದೊಡ್ಡ ಸುದ್ದಿ ಮಾಡಿದ್ದರು. ಇನ್ನು ನಮ್ಮ ಕನ್ನಡ ಚಿತ್ರರಂಗದ ಹಾಸ್ಯನಟ ಅರುಣ್ ಸಾಗರ್ ಅವರ ಮಗ ಸೂರ್ಯ ಸಾಗರ್ ಈ ಹಿಂದೆಯೇ ಈ ರೀತಿಯ ವಿಭಿನ್ನವಾದ ಪ್ರಯತ್ನಕ್ಕೆ ಕೈಹಾಕಿ ಯಶಸ್ವಿಯಾಗಿದ್ದರು.

ಮಹಾರಾಜ ಟ್ರೋಫಿ 2022: 6 ತಂಡಗಳು ಸೆಣಸಾಡಲಿರುವ ಹೊಸ ಕೆಪಿಎಲ್‌ನ ವೇಳಾಪಟ್ಟಿ ಪ್ರಕಟಮಹಾರಾಜ ಟ್ರೋಫಿ 2022: 6 ತಂಡಗಳು ಸೆಣಸಾಡಲಿರುವ ಹೊಸ ಕೆಪಿಎಲ್‌ನ ವೇಳಾಪಟ್ಟಿ ಪ್ರಕಟ

ಬಾಕ್ಸಿಂಗ್ ಕ್ಷೇತ್ರದಲ್ಲಿ ಈಗಾಗಲೇ ಹಲವು ಸಾಧನೆಗಳನ್ನು ಮಾಡಿರುವ ಸೂರ್ಯ ಸಾಗರ್ ಇದೀಗ ಥೈಲ್ಯಾಂಡ್‌ನ ರಾಜದಾಮ್ನರ್ ಸ್ಟೇಡಿಯಂನಲ್ಲಿ ಹೋರಾಡಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಹೌದು, ಥೈಲ್ಯಾಂಡ್‌ನ ರಾಜದಾಮ್ನರ್ ಸ್ಟೇಡಿಯಂನಲ್ಲಿ ಸೆಣಸಾಡಿದ ಮೊದಲ ಭಾರತೀಯ ಹಾಗೂ ಇಲ್ಲಿ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆಯನ್ನು ಸೂರ್ಯ ಸಾಗರ್ ನಿರ್ಮಿಸಿದ್ದಾರೆ.

ಕಾಮನ್‍ವೆಲ್ತ್ 2022: 2ನೇ ದಿನ ಪದಕದ ಖಾತೆ ತೆರೆದ ಭಾರತ ಎಷ್ಟನೇ ಸ್ಥಾನದಲ್ಲಿದೆ? ಇಲ್ಲಿದೆ ಪದಕ ಪಟ್ಟಿಕಾಮನ್‍ವೆಲ್ತ್ 2022: 2ನೇ ದಿನ ಪದಕದ ಖಾತೆ ತೆರೆದ ಭಾರತ ಎಷ್ಟನೇ ಸ್ಥಾನದಲ್ಲಿದೆ? ಇಲ್ಲಿದೆ ಪದಕ ಪಟ್ಟಿ

ತಮ್ಮ ಮಗನ ಈ ಯಶೋಗಾಥೆಯನ್ನು ಖುದ್ದು ನಟ ಅರುಣ್ ಸಾಗರ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, 'ನನ್ನ ಮಗ ಸೂರ್ಯ ಸಾಗರ್ ಥೈಲ್ಯಾಂಡ್‌ನ ರಾಜದಾಮ್ನರ್ ಸ್ಟೇಡಿಯಂನಲ್ಲಿ ಹೋರಾಟ ನಡೆಸಿ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದಾನೆ, ನಿನ್ನ ಕುರಿತಾಗಿ ಬಹಳ ಹೆಮ್ಮೆಯಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಸೂರ್ಯ ಸಾಗರ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು

ಅರುಣ್ ಸಾಗರ್ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಅವರ ಇನ್ ಸ್ಟಾಗ್ರಾಮ್ ಅನುಯಾಯಿಗಳು ಕಾಮೆಂಟ್ ಮಾಡಿದ್ದು, ಶುಭಾಶಯ ಕೋರುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಜತೆಗೆ ಸಂಗೀತಗಾರ ಮತ್ತು ಗಾಯಕ ವಾಸುಕಿ ವೈಭವ್ ಹಾಗೂ ನಿರ್ದೇಶಕ ಕೆ ಎಂ ಚೈತನ್ಯ ಸೂರ್ಯ ಸಾಗರ್ ಸಾಧನೆ ಕುರಿತು ಕಾಮೆಂಟ್ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಥೈಲ್ಯಾಂಡ್‌ನಲ್ಲಿ ಮ್ಯಾಕ್ಸ್ ಮೌಥಾಯ್ ಗೆದ್ದಿದ್ದ ಸೂರ್ಯ ಸಾಗರ್

2019ರಲ್ಲಿ ಥೈಲ್ಯಾಂಡ್‌ನಲ್ಲಿ ಮ್ಯಾಕ್ಸ್ ಮೌಥಾಯ್ ಗೆದ್ದಿದ್ದ ಸೂರ್ಯ ಸಾಗರ್

ಇನ್ನು ಇದೇ ಥೈಲ್ಯಾಂಡ್‌ನಲ್ಲಿ 2019ರಲ್ಲಿಯೂ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿಶೇಷ ಸಾಧನೆಯೊಂದನ್ನು ಮಾಡುವುದರ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥೈಲ್ಯಾಂಡ್‌ನ ಪಟಾಯದಲ್ಲಿ 2019ರಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು ಹಾಗೂ ಸೂರ್ಯ ಭಾರತವನ್ನು ಪ್ರತಿನಿಧಿಸಿದ್ದರು. ವಿಶೇಷ ಅಂದರೆ, ಅದೇ ಮೊದಲ ಬಾರಿಗೆ ಭಾರತಕ್ಕೆ ಅಂದು ಗೆಲುವು ಸಿಕ್ಕಿತ್ತು. ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದರು.

2020ರಲ್ಲಿ ಮತ್ತೊಂದು ಜಯ

2020ರಲ್ಲಿ ಮತ್ತೊಂದು ಜಯ

2019ರಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದ ಸೂರ್ಯ ಸಾಗರ್ ನಂತರದ ವರ್ಷದಲ್ಲೂ ಗೆದ್ದಿದ್ದರು. 2020ರಲ್ಲಿ ಥೈಲ್ಯಾಂಡ್ ನ ಪಟ್ಟಾಯದಲ್ಲಿ ನಡೆದ ಮ್ಯಾಕ್ಸ್ ಮುಯೆಥಾಯ್ ಚಾಂಪಿಯನ್ ಷಿಪ್ ನಲ್ಲಿ ಎದುರಾಳಿ ರೋಬೋಕಾಪ್ ಸೋರ್ ಹೊಡೆದುರುಳಿಸಿ ಗೆಲುವು ಕಂಡಿದ್ದರು.

Story first published: Sunday, July 31, 2022, 16:14 [IST]
Other articles published on Jul 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X