ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Asian Boxing Championships: ಪದಕದ ಸನಿಹದಲ್ಲಿ ನಾಲ್ವರು ಭಾರತೀಯರು

Asian Boxing Championships: One step away from medal, four Indians in action on Day 2

ದುಬೈ: ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಸಿಮ್ರನ್‌ಜೀತ್‌ ಕೌರ್ ಮತ್ತು ಮೂವರು ಭಾರತೀಯ ಬಾಕ್ಸರ್‌ಗಳು ಪದಕ ಗೆಲ್ಲಲು ಒಂದೇ ಹೆಜ್ಜೆ ಹಿಂದಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ 2021ರ ಎಎಸ್‌ಬಿಸಿ ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಈ ನಾಲ್ವರೂ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

 ಕೋವಿಡ್-19 ಕೇಂದ್ರಗಳಿಗೆ ಆಮ್ಲಜನಕದ ಸಾಂದ್ರಕಗಳ ಕಳುಹಿಸಿದ ಪಾಂಡ್ಯ ಬ್ರದರ್ಸ್ ಕೋವಿಡ್-19 ಕೇಂದ್ರಗಳಿಗೆ ಆಮ್ಲಜನಕದ ಸಾಂದ್ರಕಗಳ ಕಳುಹಿಸಿದ ಪಾಂಡ್ಯ ಬ್ರದರ್ಸ್

ದುಬೈ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ 8ನೇ ಹಂತದಲ್ಲಿರುವ ಇತರ ಭಾರತೀಯ ಬಾಕ್ಸರ್‌ಗಳೆಂದರೆ ಸಾಕ್ಷಿ (54 ಕೆಜಿ ವಿಭಾಗ), ಜಾಸ್ಮಿನ್ (57 ಕೆಜಿ), ಸಂಜೀತ್ (91 ಕೆಜಿ). ಈ ಚಾಂಪಿಯನ್‌ಶಿಪ್‌ ಅನ್ನು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಮತ್ತು ಯುಎಇ ಬಾಕ್ಸಿಂಗ್ ಫೆಡರೇಶನ್ ಜಂಟಿಯಾಗಿ ಆಯೋಜಿಸುತ್ತಿದೆ.

60 ಕೆಜಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಟೋಕಿಯೋ ಒಲಿಂಪಿಕ್ಸ್ ಗೆ ಸಿದ್ಧತೆ ನಡೆಸುತ್ತಿರುವ ಬಾಕ್ಸರ್ ಸಿಮ್ರನ್‌ಜೀತ್‌ ಕ್ವಾರ್ಟರ್ ಫೈನಲ್‌ ಹಂತದಲ್ಲಿ ಉಜ್ಬೇಕಿಸ್ತಾನ್‌ನ ರೇಖೋನಾ ಕೊಡಿರೋವಾ ಸವಾಲು ಸ್ವೀಕರಿಸಲಿದ್ದಾರೆ.

ಯಾರಿಂದಲೂ ಮುರಿಯಲಾಗದ ಸಿಎಸ್‌ಕೆ ನಿರ್ಮಿಸಿರುವ 5 ದಾಖಲೆಗಳು!ಯಾರಿಂದಲೂ ಮುರಿಯಲಾಗದ ಸಿಎಸ್‌ಕೆ ನಿರ್ಮಿಸಿರುವ 5 ದಾಖಲೆಗಳು!

ಎರಡು ಬಾರಿ ಯೂತ್‌ ವರ್ಲ್ಡ್ ಚಾಂಪಿಯನ್‌ ಸಾಕ್ಷಿ ಅವರು ತಜಕೀಸ್ತಾನ್‌ನ ರುಹಾಫ್ಜೊ ಹಕಜರೋವಾ ಅವರನ್ನು ಎದುರಿಸಲಿದ್ದಾರೆ. ಮೊಹಮ್ಮದ್ ಹುಸಾಮುದ್ದೀನ್ (56 ಕೆಜಿ), ಶಿವ ತಾಪಗೆ (64 ಕೆಜಿ) ಸೋಮವಾರ (ಮೇ 24) ರಾತ್ರಿ ಮೊದಲ ಹಂತದ ಪಂದ್ಯ ನಡೆಯಲಿದೆ. ಅಲ್ಲಿ ಗೆದ್ದರೆ ಅವರೂ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Story first published: Monday, May 24, 2021, 20:48 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X