ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜುಲೈ-ಆಗಸ್ಟ್‌ನಲ್ಲಿ ಚೊಚ್ಚಲ ಆವೃತ್ತಿಯ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌

BFI set to launch inaugural three-week boxing league

ಹೊಸದಿಲ್ಲಿ, ಏಪ್ರಿಲ್‌ 30: ಭಾರತೀಯ ಬಾಕ್ಸಿಂಗ್‌ ಒಕ್ಕೂಟವು (ಬಿಎಫ್‌ಐ) ಮುಂಬರುವ ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ವಾರಗಳ ಕಾಲ ಚೊಚ್ಚಲ ಆವೃತ್ತಿಯ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌ ಆಯೋಜಿಸಲು ಸಜ್ಜಾಗಿದೆ.

 ವಿನೇಶ್‌, ಬಜರಂಗ್‌ಗೆ ರಾಜೀವ್‌ ಗಾಂಧಿ ಖೇಲ್‌ ರತ್ನಕ್ಕೆ ಡಬ್ಲ್ಯುಎಫ್‌ಐ ಶಿಫಾರಸು ವಿನೇಶ್‌, ಬಜರಂಗ್‌ಗೆ ರಾಜೀವ್‌ ಗಾಂಧಿ ಖೇಲ್‌ ರತ್ನಕ್ಕೆ ಡಬ್ಲ್ಯುಎಫ್‌ಐ ಶಿಫಾರಸು

ಈ ಕುರಿತಾಗಿ ಬಾಕ್ಸಿಂಗ್‌ ಒಕ್ಕೂಟದ ಅಧ್ಯಕ್ಷ ಅಜಯ್‌ ಸಿಂಗ್‌ ಮತ್ತು ಲೀಗ್‌ನ ನಿರ್ದೇಶಕರಾದ ಅತುಲ್‌ ಪಾಂಡೆ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಾತ್ರಿ ಪಡಿಸಿದ್ದಾರೆ. ಅಲ್ಲದೆ ಲೀಗ್‌ನಲ್ಲಿ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಗಳು ಮತ್ತು ಭಾರತದ ಬಾಕ್ಸರ್‌ಗಳೆಲ್ಲರೂ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಟೂರ್ನಿ ಅಧಿಕೃತವಾಗಿ ಘೋಷಣೆಯಾಗಲಿದೆ.

 ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚು

"ಬಾಕ್ಸಿಂಗ್‌ ಲೀಗ್‌ ಕೂಡ ಉಳಿದ ಕ್ರೀಡೆಯ ಲೀಗ್‌ಗಳ ಸರಣಿ ಸಾಲಿನಲ್ಲೇ ಬರಲಿದೆ,'' ಎಂದು ಅಜಯ್‌ ಸಿಂಗ್‌ ಹೇಳಿದ್ದಾರೆ. ಇದೇ ವೇಳೆ ಹೆಚ್ಚಿನ ವಿವರ ನಿಡಿದ ನಿರ್ದೇಶಕ ಪಾಂಡೆ, ಸ್ಪೋಟ್ಸ್‌ ಲೈವ್‌ ಸಂಸ್ಥೆಯು ಐಬಿಎಲ್‌ ನಡೆಯಲಿದೆ ಎಂದಿದ್ದಾರೆ.

"ಲೀಗ್‌ ಆಯೋಜನೆಗೆ ಪ್ರಾಯೋಜಕರು ಮತ್ತು ಫ್ರಾಂಚೈಸಿಗಳ ಹುಡುಕಾಟದಲ್ಲಿದ್ದೇವೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ಎಚ್‌ಡಿ ಚಾನಲ್‌ಗಳಲ್ಲಿ ಲೀಗ್‌ ನೇರ ಪ್ರಸಾರವಾಗಲಿದ್ದು, ಜುಲೈ ಮತ್ತು ಆಗಸ್ಟ್‌ನಲ್ಲಿಸಂಜೆ 7ರಿಂದ ರಾತ್ರಿ 9ರವರೆಗೆ ಆಯೋಜಿಸಲಾಗುತ್ತದೆ,'' ಎಂದು ಪಾಂಡೆ ಹೇಳಿದ್ದಾರೆ.

 ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ

"ಮುಂದಿನ 3-4 ವಾರಗಳಲ್ಲಿ ಲೀಗ್‌ ಆರಂಭದ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಚುನಾವಣೆ ಮುಗಿದ ಬಳಿಕ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ. ಲೀಗ್‌ ಆಯೋಜನೆಯ ವೇಳಾಪಟ್ಟಿಯನ್ನೂ ಘೋಷಿಸಲಾಗುವುದು,'' ಎಂದು ವಿವರಿಸಿದ್ದಾರೆ.

Story first published: Tuesday, April 30, 2019, 18:21 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X