ಬಾಕ್ಸರ್ ದುರ್ಯೋಧನ್ ಸಿಂಗ್ ನೇಗಿಗೆ ಕೋವಿಡ್-19 ಪಾಸಿಟಿವ್

ಭಾರತದ ಪ್ರಮುಖ ಬಾಕ್ಸರ್ ಆಗಿರುವ ದುರ್ಯೋಧನ್ ಸಿಂಗ್ ನೇಗಿ ಅವರಿಗೆ ಕೊರೊನಾ ವೈರಸ್ ದೃಢವಾಗಿದೆ. ಹೀಗಾಗಿ ನೇಗಿ ಅವರನ್ನು ಪಾಟಿಯಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಯೋಧನ್ ನೆಗಿ ಅವರು ಪಾಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(SAI)ದ ತರಬೇತಿ ಕೇಂದ್ರದಲ್ಲಿ ಅಭ್ಯಾಸದಲ್ಲಿದ್ದರು.

ದುರ್ಯೋದನ್ ಸಿಂಗ್ ನೇಗಿ ಅವರಲ್ಲಿ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳು ಇಲ್ಲ ಹಾಗೂ ಅವರು ಆರೊಗ್ಯವಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

6ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಮುಂದೂಡಿಕೆ

ದೀಪಾವಳಿ ಹಿನ್ನೆಲೆಯಲ್ಲಿ ತರಬೇತಿಯಿಂದ ದುರ್ಯೋಧನ್ ಸಿಂಗ್ಅವರು ವಿರಾಮವನ್ನು ಪಡೆದುಕೊಂಡಿದ್ದರು. ಈ ವಿರಾಮದ ಬಳಿಕ ಎನ್‌ಎಸ್‌ಎನ್‌ಐಎಸ್‌ ತರಬೇತಿ ಕೇಂದ್ರಕ್ಕೆ ಅವರು ಮರಳಿದ್ದರು. ಹೀಗಾಗಿ ಅವರು ಕ್ವಾರಂಟೈನ್‌ನಲ್ಲಿದ್ದರು. ಕ್ಯಾಂಪ್‌ಗೆ ಮರಳಿದ ಆರನೇ ದಿನದಲ್ಲಿ ಅವರು ಕೊರೊನಾ ವೈರಸ್‌ಗೆ ತುತ್ತಾಗಿರುವುದು ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ದುರ್ಯೋಧನ್ ಸಿಂಗ್ ಅವರ ಶೀಘ್ರ ಚೇತರಿಕೆಗಾಗಿ ಎಲ್ಲಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. 27 ಸದಸ್ಯರ ಭಾರತೀಯ ಬಾಕ್ಸರ್‌ಗಳ ತಂಡ ಮಿಲನ್‌ನಲ್ಲಿ 52 ದಿನಗಳ ತರಬೇತಿ ಶಿಬಿರ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, November 30, 2020, 12:57 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X