ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೈತರಿಗೆ ಬಾಕ್ಸರ್ ವಿಜೇಂದರ್ ಬೆಂಬಲ, ಖೇಲ್‌ರತ್ನ ವಾಪಸ್‌ಗೆ ನಿರ್ಧಾರ

Boxer Vijender Singh Says he Will Return Sports Award If Farm Laws Not Withdrawn

ಚಂಡೀಗಢ: ರೈತ ವಿರೋಧಿ ಕಾನೂನಿನ ವಿರುದ್ಧ ಭಾರತದ ರೈತರು ಮಾಡುತ್ತಿರುವ ಬೃಹತ್ ಪ್ರತಿಭಟನೆಗೆ ವಿದೇಶಗಳಲ್ಲಿ ಬೆಂಬಲ ವ್ಯಕ್ತವಾಗುತ್ತದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಇನ್ನಿತರ ದೇಶಗಳ ಪ್ರಮುಖರೂ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳು, ಕ್ರೀಡಾಪಟುಗಳೂ ಕೂಡ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ಎಫ್‌-2 ರೇಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಜೇಹನ್ ದಾರುವಾಲಎಫ್‌-2 ರೇಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಜೇಹನ್ ದಾರುವಾಲ

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ನಡೆದ ಪ್ರತಿಭಟನೆಯಷ್ಟೇ ತೀವ್ರತೆಯ ಮತ್ತು ದೊಡ್ಡ ಮಟ್ಟಿನ ಪ್ರತಿಭಟನೆಯಾಗಿ ರೈತರ ಪ್ರತಿಭಟನೆ ಗುರುತಿಸಿಕೊಳ್ಳುತ್ತಿದ್ದು, ವಿಶ್ವವೇ ಭಾರತದ ಆಡಳಿತ ಸರ್ಕಾರದತ್ತ ನೋಡುತ್ತಿದ್ದರೂ ನರೇಂದ್ರ ಮೋದಿ ಮುಂದಾಳತ್ವದ ಬಿಜೆಪಿ ಸರ್ಕಾರ ಈಗಲೂ ಕಿವುಡ, ಕುರುಡರಂತೆ ವರ್ತಿಸುತ್ತಿದೆ. ಸರ್ಕಾರದ ನಿಲುವಿಗೆ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರು ಬೇಕೆಂದು ಕೇಳದಿದ್ದರೂ, ರೈತರ ಉದ್ಧಾರಕ್ಕಾಗಿ ಎಂದು ನೆವ ನೀಡಿ ಒತ್ತಾಯಪೂರ್ವಕವಾಗಿ ಮೋದಿ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿರುವ 2008ರ ಒಲಿಂಪಿಕ್ ಪದಕ ವಿಜೇತ ಬಾಕ್ಸರ್, ಕಾಯ್ದೆ ವಾಪಸ್ ಪಡೆಯದಿದ್ದರೆ ತನಗೆ ನೀಡಲಾಗಿರುವ ಖೇಲ್ ರತ್ನ ಪ್ರಶಸ್ತಿ ವಾಪಸ್ ನೀಡಲಿದ್ದೇನೆ ಎಂದಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಯಾರೂ ಮಾಡದ ವಿಶಿಷ್ಠ ದಾಖಲೆ ಬರೆದ ಕೊಹ್ಲಿ!ಆಸ್ಟ್ರೇಲಿಯಾ ನೆಲದಲ್ಲಿ ಯಾರೂ ಮಾಡದ ವಿಶಿಷ್ಠ ದಾಖಲೆ ಬರೆದ ಕೊಹ್ಲಿ!

'ಕೆಟ್ಟ ಕಾನೂನುಗಳನ್ನು ಸರ್ಕಾರ ವಾಪಸ್ ಪಡೆದಿದ್ದರೆ, ನಾನು ನನ್ನ ರಾಜೀವ್‌ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಾಪಸ್ ನೀಡುತ್ತೇನೆ,' ಎಂದಿದ್ದಾರೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಈಗಾಗಲೇ ತನ್ನ ಪದ್ಮ ವಿಭೂಷಣ ಪ್ರಶಸ್ತಿ ವಾಪಸ್ ನೀಡಿದ್ದಾರೆ. ಬಾಕ್ಸಿಂಗ್ ದಂತಕತೆಗಳಾದ ಕೌರ್ ಸಿಂಗ್, ಜೈಪಾಲ್ ಸಿಂಗ್, ಗುರುಬಾಕ್ಸ್‌ ಸಿಂಗ್ ಕೂಡ ತಮ್ಮ ಖೇಲ್ ರತ್ನ ಪ್ರಶಸ್ತಿ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಸಾಧನೆಗಾಗಿ ಪಡೆದ ಪ್ರಶಸ್ತಿಗಳನ್ನು ಗೆದ್ದವರು ವಾಪಸ್ ನೀಡುತ್ತಿದ್ದಾರೆ ಎಂದರೆ ಆಡಳಿತ ಸರ್ಕಾರದ ನಡೆ ಜನಪರವಾಗಿಲ್ಲ ಎಂದೇ ಅರ್ಥವಾಗುತ್ತದೆ.

Story first published: Monday, December 7, 2020, 15:32 [IST]
Other articles published on Dec 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X