ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಗುದ್ದಾಡುತ್ತ ರಿಂಗ್‌ನಲ್ಲೇ ಅಸುನೀಗಿದ ಬಲ್ಗೇರಿಯನ್ ಬಾಕ್ಸರ್: ವೈರಲ್ ವಿಡಿಯೋ

Bulgarian boxer Boris Stanchov collapses and dies in the ring

ಸೋಫಿಯಾ, ಸೆಪ್ಟೆಂಬರ್ 25: ಬಾಕ್ಸಿಂಗ್‌ರಿಂಗ್‌ನಲ್ಲಿ ಕಾದಾಡುತ್ತಿದ್ದಾಗಲೇ ಕುಸಿದು ಬಿದ್ದು ಬಾಕ್ಸರ್ ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಕ್ಸಿಂಗ್‌ ನಲ್ಲಿ ಕಾದಾಡುತ್ತಿದ್ದ ಬಲ್ಗೇರಿಯನ್ ಸ್ಪರ್ಧಿ ಬೋರಿಸ್ ಸ್ಟ್ಯಾಂಚೋವ್ ಹೀಗೆ ಸಾವನ್ನಪ್ಪಿರುವ ದುರ್ದೈವಿ.

ಟಿ20ಐ ಸರಣಿಗಾಗಿ ಜಿಂಬಾಬ್ವೆ ಬದಲು ಶ್ರೀಲಂಕಾ ಆಹ್ವಾನಿಸಿದ ಬಿಸಿಸಿಐಟಿ20ಐ ಸರಣಿಗಾಗಿ ಜಿಂಬಾಬ್ವೆ ಬದಲು ಶ್ರೀಲಂಕಾ ಆಹ್ವಾನಿಸಿದ ಬಿಸಿಸಿಐ

ಅಲ್ಬೇನಿಯಾದಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್‌ ಸ್ಪರ್ಧೆಯ 5ನೇ ಸುತ್ತಿನಲ್ಲಿ ಅರ್ದಿತ್ ಮುರ್ಜಾ ಎದುರು ಗುದ್ದಾಡುತ್ತಿದ್ದ ಸ್ಟ್ಯಾಂಚೋವ್ ಇದ್ದಕ್ಕಿದ್ದಂತೆ ಕುಸಿದು ಕೊನೆಯುಸಿರು ಬಿಟ್ಟಿದ್ದಾರೆ. ಆರಂಭದಲ್ಲಿ 21ರ ಹರೆಯದ ಇಸುಸ್ ವೆಲಿಕೋವ್ ಹೃದಯಾಘಾತದಿಂದ ಮೃತರಾಗಿದ್ದಾರೆ ಎನ್ನಲಾಗಿತ್ತು.

ಆದರೆ ವರದಿಯೊಂದರ ಪ್ರಕಾರ ತನ್ನ ಸಹೋದರ ಸಂಬಂಧಿ ವೆಲಿಕೋವ್ ಪರವಾನಗಿಯಲ್ಲಿ ಸ್ಪರ್ಧಿಸಿದ್ದ ಬೋರಿಸ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದಿಂದ ತನ್ನ ಸೋದರ ಸಂಬಂಧಿ ವೆಲಿಕೋವ್ ಬಾಕ್ಸಿಂಗ್ ಪರವಾನಗಿ ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ ರಿಂಗ್‌ಗೆ ಬರುತ್ತಿದ್ದ ಸ್ಟ್ಯಾಂಚೋವ್ ಅಸುನೀಗಿದ್ದಾರೆ ಎಂದು ಬ್ಯಾಡ್‌ ಲೆಫ್ಟ್‌ ಹೂಕ್ ವೆಬ್‌ಸೈಟ್‌ ವರದಿ ಹೇಳಿದೆ.

Story first published: Wednesday, September 25, 2019, 23:35 [IST]
Other articles published on Sep 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X