ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Commonwealth Games 2022: ಭಾರತಕ್ಕೆ ಪದಕ ಖಚಿತಪಡಿಸಿದ ಬಾಕ್ಸರ್ ಅಮಿತ್ ಪಂಗಲ್

Amit panghal

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಅಮಿತ್ ಪಂಗಲ್ ಪದಕ ಖಚಿತಪಡಿಸಿದ್ದಾರೆ. ಪುರುಷರ 51 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದರು. ಪಾಂಗ್ಲೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಥಾಮ್ ಲೆನ್ನನ್ ಮುಲ್ಲಿಗನ್ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿದರು. ಅವರು 2018 ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕೊನೆಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ.

ಮುಲ್ಲಿಗನ್ ವಿರುದ್ಧ ಹೆಚ್ಚಿನ ಸವಾಲಿಲ್ಲದೆ ಪಂಗಲ್‌ 5-0 ಅಂತರದಲ್ಲಿ ಪಂದ್ಯ ಗೆದ್ದರು. ಈ ಮೊದಲು ನಿರೀಕ್ಷಿಸಿದಷ್ಟು ಕಠಿಣ ಹೋರಾಟ ಇದಾಗಿರಲಿಲ್ಲ. 26ರ ಹರೆಯದ ಅಮಿತ್ ತನ್ನ ಕಿರಿಯ ಎದುರಾಳಿಯನ್ನು ಬಲಿಷ್ಠ ರಕ್ಷಣೆಯೊಂದಿಗೆ ಸೋಲಿಸಿದರು. ಜೊತೆಗೆ ರಕ್ಷಣಾತ್ಮಕ ಆಟವನ್ನು ಆಡಿದರು ಮತ್ತು ಕೆಲವು ತ್ವರಿತ ಪ್ರತಿದಾಳಿಗಳೊಂದಿಗೆ ಅಂಕಗಳನ್ನು ಗಳಿಸಿದರು. ಅವರು ಕೆಲವು ಸ್ಟ್ರೋಕ್‌ಗಳೊಂದಿಗೆ 20 ವರ್ಷದ ಸ್ಕಾಟ್ಲೆಂಡ್ ಎದುರಾಳಿಯನ್ನ ಸೋಲಿಸಿದರು.

ಬಾಕ್ಸಿಂಗ್‌ನಲ್ಲಿ ಪದಕ ಖಚಿತಪಡಿಸಿರುವ ಆರು ಬಾಕ್ಸರ್‌ಗಳಲ್ಲಿ ಒಬ್ಬರು

ಬಾಕ್ಸಿಂಗ್‌ನಲ್ಲಿ ಪದಕ ಖಚಿತಪಡಿಸಿರುವ ಆರು ಬಾಕ್ಸರ್‌ಗಳಲ್ಲಿ ಒಬ್ಬರು

ಪಂಗಲ್ ಅವರು ಈ ಕ್ರೀಡಾಕೂಟಗಳಲ್ಲಿ ಬಾಕ್ಸಿಂಗ್‌ನಲ್ಲಿ ಪದಕ ಖಚಿತಪಡಿಸಿರುವ ಭಾರತೀಯ ನಾಲ್ಕನೇ ಅಥ್ಲೀಟ್ ಆಗಿದ್ದಾರೆ. ಇದಕ್ಕೂ ಮುನ್ನ ಮಹಿಳಾ ಆಟಗಾರ್ತಿ ನಿಖತ್ ಝರೀನ್ 50 ಕೆಜಿ, ನೀತು ಗಮ್ಖಾಸ್ 48 ಕೆಜಿ ಮತ್ತು ಮುಹಮ್ಮದ್ ಹುಸಾಮುದ್ದೀನ್ ಪುರುಷರ 57 ಕೆಜಿಯಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತಪಡಿಸಿದ್ದಾರೆ. ಪಂಗಲ್ ಬಳಿಕ ಭಾರತದ ಜಾಸ್ಮಿನ್ ಲಂಬೋರಿಯಾ ಕೂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಮಹಿಳೆಯರ ವಿಭಾಗದಲ್ಲಿ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ಶೇ.50ರಷ್ಟು ಸ್ಪರ್ಧಿಗಳು ಈ 5 ರಾಜ್ಯದವರು!

ಮಹಿಳೆಯರ 60 ಕೆಜಿ ವಿಭಾಗದಲ್ಲಿ ಪದಕ ಖಚಿತಪಡಿಸಿರುವ ಜಾಸ್ಮಿನ್‌

ಮಹಿಳೆಯರ 60 ಕೆಜಿ ವಿಭಾಗದಲ್ಲಿ ಪದಕ ಖಚಿತಪಡಿಸಿರುವ ಜಾಸ್ಮಿನ್‌

ಮಹಿಳೆಯರ 60 ಕೆಜಿ ಲೈಟ್ ವೇಟ್ ವಿಭಾಗದಲ್ಲಿ ಜಾಸ್ಮಿನ್ 4-1ರಲ್ಲಿ ನ್ಯೂಜಿಲೆಂಡ್ ನ ಟ್ರಾಯ್ ಟಾರ್ಟನ್ ಅವರನ್ನು ಸೋಲಿಸಿದರು. ಈ ಮೂಲಕ ಮಹಿಳೆಯರ 60 ಕೆಜಿ ಲೈಟ್‌ವೇಟ್‌ನಲ್ಲಿ ಜಾಸ್ಮಿನ್ ಸೆಮಿಫೈನಲ್‌ಗೆ ಪ್ರವೇಶಿಸಿದರು.

ಇವರಷ್ಟೇ ಅಲ್ಲದೆ ಪುರುಷರ ಸೂಪರ್ ಹೆವಿವೇಯ್ಟ್ ಕ್ವಾರ್ಟರ್ ಫೈನಲ್‌ನಲ್ಲಿ ಸಾಗರ್ ಅಹ್ಲಾವತ್ ಸೀಶೆಲ್ಸ್‌ನ ಕೆಡ್ಡಿ ಇವಾನ್ಸ್ ಆಗ್ನೆಸ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಇದೀಗ ಆರು ಬಾಕ್ಸರ್ ಗಳ ಪದಕ ಖಚಿತವಾಗಿದೆ.

2022ರ ಕಾಮನ್‌ವೆಲ್ತ್‌ನಲ್ಲಿ ಭಾರತ ಪರ ಪದಕ ಗೆದ್ದವರು

2022ರ ಕಾಮನ್‌ವೆಲ್ತ್‌ನಲ್ಲಿ ಭಾರತ ಪರ ಪದಕ ಗೆದ್ದವರು

1 ಸಂಕೇತ್ ಸರ್ಗರ್: ಬೆಳ್ಳಿ (ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್)
2 ಗುರುರಾಜ ಪೂಜಾರಿ: ಕಂಚು (ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್)
3 ಮೀರಾಬಾಯಿ : ಚಿನ್ನ (ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ )
4 ಬಿಂದ್ಯಾರಾಣಿ ದೇವಿ: ಬೆಳ್ಳಿ (ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ )
5 ಜೆರೆಮಿ ಲಾಲ್ರಿನ್ನುಂಗಾ: ಚಿನ್ನ (ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ )
6 ಅಚಿಂತಾ ಶೆಯುಲಿ: ಚಿನ್ನ (ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್ )
7 ಸುಶೀಲಾ ದೇವಿ ಲಿಕ್ಮಾಬಮ್: ಬೆಳ್ಳಿ (ಮಹಿಳೆಯರ 48 ಕೆಜಿ ಜೂಡೋ)
8 ವಿಜಯ್ ಕುಮಾರ್ ಯಾದವ್ :ಕಂಚು (ಪುರುಷರ 60 ಕೆಜಿ ಜೂಡೋ)
9 ಹರ್ಜಿಂದರ್ ಕೌರ್ :ಕಂಚು (ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್)
10 ಭಾರತೀಯ ಮಹಿಳಾ ತಂಡ: ಚಿನ್ನ (ಮಹಿಳೆಯರ ನಾಲ್ಕು ಲಾನ್ ಬೌಲ್‌ಗಳು)
11 ವಿಕಾಸ್ ಠಾಕೂರ್ :ಬೆಳ್ಳಿ (ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್)
12 ಭಾರತೀಯ ಪುರುಷರ ತಂಡ: ಚಿನ್ನ (ಪುರುಷರ ತಂಡ ಟೇಬಲ್ ಟೆನಿಸ್)
13 ಭಾರತೀಯ ಮಿಶ್ರ ತಂಡ: ಬೆಳ್ಳಿ (ಮಿಶ್ರ ತಂಡ ಬ್ಯಾಡ್ಮಿಂಟನ್)
14 ಲವ್‌ಪ್ರೀತ್ ಸಿಂಗ್: ಕಂಚು (ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್)
15 ಸೌರವ್ ಘೋಸಲ್ :ಕಂಚು (ಪುರುಷರ ಸಿಂಗಲ್ಸ್ ಸ್ಕ್ವಾಷ್)
16 ತುಲಿಕಾ ಮಾನ್ :ಬೆಳ್ಳಿ (ಮಹಿಳೆಯರ +78 ಕೆಜಿ ಜೂಡೋ)
17 ಗುರ್ದೀಪ್ ಸಿಂಗ್: ಕಂಚು (ಪುರುಷರ +109 ಕೆಜಿ ವೇಟ್ ಲಿಫ್ಟಿಂಗ್)
18 ತೇಜಸ್ವಿನ್ ಶಂಕರ್: ಕಂಚು (ಪುರುಷರ ಹೈಜಂಪ್ ಅಥ್ಲೆಟಿಕ್ಸ್)

Story first published: Thursday, August 4, 2022, 21:04 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X