ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಬಣ್ಣ ಬದಲಾಯಿಸುತ್ತೇನೆಂಬ ಭರವಸೆಯಿದೆ'

Confident of changing colour of medal at Paris Olympics: says boxer Lovlina Borgohain

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಮೂರನೇ ಬಾಕ್ಸರ್ ಎಂಬ ಹೆಗ್ಗಳಿಗೆ ಭಾರತದ ಲವ್ಲಿನಾ ಬೊರ್ಗೊಹೈನ್ ಪಾತ್ರರಾಗಿದ್ದರು. ಆಗಸ್ಟ್ 8ರಂದಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ ಕಂಚಿನ ಪದಕ ಗೆದ್ದಿದ್ದರು. ಇದಕ್ಕೂ ಮುನ್ನ ಒಲಿಂಪಿಕ್ಸ್‌ ಪದಕ ಗೆದ್ದ ಬಾಕ್ಸರ್‌ಗಳೆಂದರೆ ವಿಜೇಂದರ್ ಸಿಂಗ್ (2008ರ ಬೀಜಿಂಗ್ ಒಲಿಂಪಿಕ್ಸ್), ಮೇರಿ ಕೋಮ್ (ಲಂಡನ್ ಒಲಿಂಪಿಕ್ಸ್ 2012).

ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

ಮಹಿಳೆಯರ 69 ಕೆಜಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಲವ್ಲಿನಾ ಬೊರ್ಗೊಹೈನ್, ದೇಶ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆಲ್ಲುವಲ್ಲಿ ಕೈ ಜೋಡಿಸಿದ್ದರು. ಟೋಕಿಯೋದಲ್ಲಿ ಲವ್ಲಿನಾಗೆ ಕಂಚು ಸಿಕ್ಕಿತ್ತಾದರೂ ಅದು ಅವರಿಗೆ ಸಂಪೂರ್ಣವಾಗಿ ತೃಪ್ತಿ ನೀಡಿಲ್ಲ. ಯಾಕೆಂದರೆ ಟೋಕಿಯೋದಲ್ಲಿ ಬಂಗಾರ ಗೆಲ್ಲುವ ಗುರಿಯಿಟ್ಟಿದ್ದ ಲವ್ಲಿನಾ ಸೋತು ನಿರಾಸೆ ಅನುಭವಿಸಿದ್ದರು.

ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ ಲವ್ಲಿನಾ ಗೆಲ್ಲುತ್ತಲೇ ಭಾರತಕ್ಕೆ ಕಂಚಿನ ಪದಕ ಖಾತ್ರಿಯಾಗಿತ್ತು. ಆದರೆ ಸೆಮಿಫೈನಲ್‌ನಲ್ಲಿ ಲವ್ಲಿನಾ ಅವರು ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಎದುರು ಸೋತು ನಿರಾಸೆ ಅನುಭವಿಸಿದ್ದರು. ಇಲ್ಲದಿದ್ದರೆ ಲವ್ಲಿನಾಗೆ ಬಂಗಾರ ಗೆಲ್ಲಲು ಅವಕಾಶವಿತ್ತು.

ಭಾರತ vs ಇಂಗ್ಲೆಂಡ್: ಸಿರಾಜ್ ಪ್ರದರ್ಶನಕ್ಕೆ ಮನಸೋತ ಪಾಕಿಸ್ತಾನದ ಪತ್ರಕರ್ತೆಭಾರತ vs ಇಂಗ್ಲೆಂಡ್: ಸಿರಾಜ್ ಪ್ರದರ್ಶನಕ್ಕೆ ಮನಸೋತ ಪಾಕಿಸ್ತಾನದ ಪತ್ರಕರ್ತೆ

ಟೈಮ್ಸ್ ಆಫ್‌ ಇಂಡಿಯಾ ಜೊತೆ ಸಂದರ್ಶನದಲ್ಲಿ ಮಾತನಾಡಿದ ಲವ್ಲಿನಾ ಬೊರ್ಗೊಹೈನ್, "ಪದಕ ಗೆದ್ದಿದ್ದಕ್ಕೆ ಖುಷಿಯಿದೆ. ಟೋಕಿಯೋ ಒಲಿಂಪಿಕ್ಸ್‌ನ ಸಂಪೂರ್ಣ ಪ್ರಯಾಣವನ್ನು ನಾನು ಎಂಜಾಯ್ ಮಾಡಿದ್ದೇನೆ. ಆದರೆ ನನಗೆ ಸಂಪೂರ್ಣ ತೃಪ್ತಿ ನೀಡಿಲ್ಲ. ನನ್ನ ಕನಸು ಭಾರತಕ್ಕೆ ಬಂಗಾರ ಗೆಲ್ಲೋದು. ಆದರೆ ಬರಿಗೈಯಲ್ಲಿ ನಾನು ವಾಪಸ್ಸಾಗಿಲ್ಲ ಎಂಬ ಬಗ್ಗೆ ನನಗೆ ತೃಪ್ತಿಯಿದೆ. ಪ್ಯಾರಿಸ್‌ನಲ್ಲಿ ನಾನು ಬಂಗಾರ ಗೆಲ್ಲುತ್ತೇನೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ," ಎಂದಿದ್ದಾರೆ.

ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟ ಮಾರಿಯಾ ಆ್ಯಂಡ್ರೆಜಿಕ್!ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟ ಮಾರಿಯಾ ಆ್ಯಂಡ್ರೆಜಿಕ್!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದಾಖಲೆಯ ಪದಕಗಳು
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತಕ್ಕೆ ದಾಖಲೆ ಸಂಖ್ಯೆಯ ಪದಕಗಳು ಲಭಿಸಿದ್ದವು. ಈ ಬಾರಿ ಭಾರತ ನಾಲ್ಕು ಕಂಚು, 2 ಬೆಳ್ಳಿ ಮತ್ತು 1 ಬಂಗಾರ ಸೇರಿ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧುಗೆ ಕಂಚು, ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್‌ಗೆ ಕಂಚಿನ ಪದಕ, ಪುರುಷರ ರಸ್ಲಿಂಗ್‌ನಲ್ಲಿ ರವಿ ಕುಮಾರ್ ದಹಿಯಾಗೆ ಬೆಳ್ಳಿ ಪದಕ, ಪುರುಷರ ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾಗೆ ಕಂಚಿನ ಪದಕ, ಪುರುಷರ ಹಾಕಿ ತಂಡಕ್ಕೆ ಕಂಚಿನ ಗೌರವ, ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಬಂಗಾರದ ಪದಕ ಸಿಕ್ಕಿತ್ತು. ಇದಕ್ಕೂ ಹಿಂದೆ ಒಲಿಂಪಿಕ್ಸ್‌ನಲ್ಲಿ 6 ಪದಕಗಳನ್ನು ಗೆದ್ದಿದ್ದೆ ದೊಡ್ಡ ದಾಖಲೆಯಾಗಿತ್ತು. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರು ಪದಕಗಳು ಬಂದಿದ್ದವು. ಟೋಕಿಯೋದಲ್ಲಿ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ತೀವ್ರ ನಿರಾಸೆಯಾಗಿತ್ತು.

ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದರು. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸಿದ್ದರು. ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.

3ನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ ಸ್ಥಾನದಲ್ಲಿ ಕಣಕ್ಕಿಳಿಯಬಲ್ಲ ಮೂವರು ಆಟಗಾರರು3ನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ ಸ್ಥಾನದಲ್ಲಿ ಕಣಕ್ಕಿಳಿಯಬಲ್ಲ ಮೂವರು ಆಟಗಾರರು

ಟೋಕಿಯೋ ಒಲಿಂಪಿಕ್ಸ್ ಇಣುಕುನೋಟ
ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್-19ನಿಂದಾಗಿ 2020ರಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅಂತಿಮವಾಗಿ ಜುಲೈ 23, 2021ರಂದು ಪ್ರಾರಂಭವಾಗಿತ್ತು. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿದ್ದ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವವಹಿಸಿದ್ದರು. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸಿದ್ದರು. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. 32ನೇ ಒಲಿಂಪಿಯಾಡ್‌ ಎಂದು ಕರೆಯಲಾಗುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 300ಕ್ಕೂ ಹೆಚ್ಚು ಪದಕಗಳಿಗೆ ಸ್ಪರ್ಧೆಗಳು ನಡೆದಿತ್ತು.

Story first published: Friday, August 20, 2021, 0:21 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X