ಗುವಾಹಟಿ, ಮೇ 25: ಅಸ್ಸಂನ ಗುವಾಹಟಿಯಲ್ಲಿರುವ ನಬಿನ್ ಚಂದ್ರ ಬೊರ್ಡೊಲೊಯ್ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ (ಮೇ 24) ನಡೆದ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬಾಕ್ಸರ್ಗಳಾದ ಎಂಸಿ ಮೇರಿ ಕೋಮ್, ಶಿವ ಥಾಪ, ಸರಿತಾ ದೇವಿ ಮತ್ತು ಅಮಿತ್ ಪಂಘಲ್ ಚಿನ್ನ ಗೆದ್ದಿದ್ದಾರೆ.
ಮೌಂಟ್ ಎವರೆಸ್ಟ್ ತುದಿಯಲ್ಲೂ ಟ್ರಾಫಿಕ್ ಜಾಮ್! ಮೂವರು ಭಾರತೀಯರ ಸಾವು
51 ಕೆಜಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿ ಸೆಮಿಫೈನಲ್ನಲ್ಲಿ ಪ್ರಾಯಾಸದ ಗೆಲುವು ದಾಖಲಿಸಿದ್ದ ಅನುಭವಿ ಮೇರಿ ಕೋಮ್, ಫೈನಲ್ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ವನ್ಲಾಲ್ ದುವಾತಿ ಅವರನ್ನು ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
https://kannada.mykhel.com/more-sports/two-indians-die-in-mount-everest-traffic-jam-008320.html61 ಕೆಜಿ ಪುರುಷರ ವಿಭಾಗದಲ್ಲಿ ಶಿವ ಥಾಪ ಅವರು ಸಹ ಬಾಕ್ಸರ್ ಮನೀಷ್ ಕೌಶಿಕ್ ಎದುರು ಬಂಗಾರ ಗೆದ್ದುಕೊಂಡರು. ಅಮಿತ್ ಪಂಘಲ್ ಅವರು 52 ಕೆಜಿ ವಿಭಾಗದಲ್ಲಿ ಸಹ ಬಾಕ್ಸರ್ ಸಚಿನ್ ಸಿವಾಚ್ ವಿರುದ್ಧ ಗೆದ್ದರೆ, ಸರಿತಾ ದೇವಿ 60 ಕೆಜಿ ವಿಭಾಗದಲ್ಲಿ ಯುವ ಬಾಕ್ಸರ್ ಸಿಮ್ರನ್ಜಿತ್ ಕೌರ್ ಮಣಿಸಿದರು.