ಬಾಕ್ಸಿಂಗ್‌ ಏಷ್ಯನ್‌ ಚಾಂಪಿಯನ್‌ಷಿಪ್‌: ಕವಿಂದರ್‌ ಸಿಂಗ್‌ ಜೊತೆಗೆ ಮೂವರು ಭಾರತೀಯರು ಫೈನಲ್‌ಗೆ

ಬ್ಯಾಂಕಾಕ್‌, ಏಪ್ರಿಲ್‌ 25: ನಿರೀಕ್ಷೆಗೂ ಮೀರಿದ ಮಿಂಚಿನ ಪ್ರದರ್ಶನ ನೀಡಿದ ಭಾರತದ ಬಾಕ್ಸರ್‌ ಕವಿಂದರ್‌ ಸಿಂಗ್‌ ಬಿಷ್ತ್‌, ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಏಷ್ಯನ್‌ ಚಾಂಪಿಯನ್‌ಷಿಪ್ಸ್‌ನ 56 ಕೆಜಿ ವಿಭಾಗದಲ್ಲಿ ಫೈನಲ್‌ಗೆ ದಾಪುಗಾಲಿಟ್ಟಿದ್ದಾರೆ.

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚುಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚು

ಇದೇ ವೇಳೆ 49 ಕೆಜಿ ವಿಭಾಗದಲ್ಲಿ ದೀಪಕ್‌ ಸಿಂಗ್‌, 75 ಕೆಜಿ ವಿಭಾಗದಲ್ಲಿಆಶೀಶ್‌ ಕುಮಾರ್‌ ಹಾಗೂ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಪೂಜಾ ರಾಣಿ ಫೈನಲ್‌ ತಲುಪುವಲ್ಲಿ ಸಫಲರಾಗಿದ್ದಾರೆ.

ಇದೇ ವೇಳೆ ಅನುಭವಿ ಬಾಕ್ಸರ್‌ ಎಲ್‌. ಸರಿತಾ ದೇವಿ (60 ಕೆಜಿ) ಮತ್ತು ಕಳೆದ ಆವೃತ್ತಿಯಲ್ಲಿ ಬೆಳ್ಳಿ ಸಾಧನೆ ಮೆರೆದಿದ್ದ ಮನಿಶಾ (54 ಕೆಜಿ) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಸರಿತಾ ಚೀನಾದ ಯಾಂಗ್‌ ವೆನ್ಲು ವಿರುದ್ಧ ಸೋತರೆ, ಮನಿಶಾ ತೈವಾನ್‌ನ ಹುವಾಂಗ್‌ ಸಿಯಾವ್‌ ವೆನ್‌ ಎದುರು ಸೋಲುಂಡರು. ಇದಕ್ಕೂ ಮುನ್ನ ಪೂಜಾ ರಾಣಿ 75 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಫರಿಝಾ ಶೋಲ್ಟೇ ವಿರುದ್ಧ ಅವಿರೋಧ ಗೆಲುವು ದಕ್ಕಿಸಿಕೊಂಡರು.

 ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ

ಇದಕ್ಕೂ ಮುನ್ನಪುರುಷರ 56 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಕಜಕಿಸ್ತಾನದ ಕೈರತ್‌ ಯೆರಾಲಿಯೇವ್‌ಗೆ ಆಘಾತ ನೀಡಿದ್ದ ಭಾರತೀಯ ಬಾಕ್ಸರ್‌ ಬಿಷ್ತ್‌, ಬಳಿಕ ಸೆಮಿಫೈನಲ್ಸ್‌ನಲ್ಲಿ ಮಂಗೋಲಿಯಾದ ಬಾಕ್ಸರ್‌ ಎಕ್ಹ್‌-ಆಮರ್‌ ಖಾಖೂ ವಿರುದ್ಧ ಪೈಪೋಟಿ ನಡೆಸಿದರು. ಈ ಪಂದ್ಯದಲ್ಲಿ ಪ್ರಬಲ ಪೈಪೋಟಿಯ ನಡುವೆ ಸಮಗ್ರ ಪ್ರದರ್ಶನದ ಆಧಾರದ ಮೇರೆಗೆ ಬಿಷ್ತ್‌ ಜಯ ದಕ್ಕಿಸಿಕೊಂಡರು.

 ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬಜರಂಗ್‌ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬಜರಂಗ್‌

ಆರಂಭದಲ್ಲಿ ಬಿಷ್ತ್‌ ಅವರ ಬಲಿಷ್ಠ ಪಂಚ್‌ಗಳಿಂದ ಎದುರಾಳಿ ಖಾಖೂ ಅವರ ಎಡಗಣ್ಣಿಗೆ ಪೆಟ್ಟಾಗಿ ರಕ್ತ ಹರಿಯಲಾಂಭಿಸಿತ್ತು. ಬಳಿಕ ಪ್ರತಿ ದಾಳಿ ನಡೆಸಿದ ಖಾಖೂ ಭಾರತೀಯ ಬಾಕ್ಸರ್‌ನ ಬಲಗಣ್ಣಿಗೆ ಹಾನಿಯುಂಟು ಮಾಡಿದ್ದರು. ಒಟ್ಟಾರೆ ಗೆಲುವು ಯಾರ ಪಾಲಿಗಾದರೂ ಒಲಿಯಬಹುದಿದ್ದ ಪಂದ್ಯದಲ್ಲಿ ಅದೃಷ್ಠ ಕವಿಂದರ್‌ ಸಿಂಗ್‌ ಬಿಷ್ತ್‌ ಅವರ ಕೈ ಹಿಡಿಯಿತು.

For Quick Alerts
ALLOW NOTIFICATIONS
For Daily Alerts
Read more about: boxing india olympics asian games
Story first published: Thursday, April 25, 2019, 18:49 [IST]
Other articles published on Apr 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X