ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೇರಿ ಕೋಮ್-ನಿಖಾತ್ ಝರೀನ್ ಕುತೂಹಲಕಾರಿ ಕಾಳಗ ಡಿಸೆಂಬರ್‌ನಲ್ಲಿ!

Mary Kom-Nikhat Zareen trial in December

ನವದೆಹಲಿ, ನವೆಂಬರ್ 9: ಆರು ಬಾರಿಯ ವಿಶ್ವಚಾಂಪಿಯನ್ ಮೇರಿ ಕೋಮ್ ಮತ್ತು ಭರವಸೆಯ ಬಾಕ್ಸರ್ ನಿಖಾತ್ ಝರೀನ್ ನಡುವಿನ ಕುತೂಹಲಕಾರಿ ಕದನ ಡಿಸೆಂಬರ್ ತಿಂಗಳ ಕೊನೇವಾರದಲ್ಲಿ ನಡೆಯಲಿದೆ. ಇಲ್ಲಿ ಮೇಲುಗೈ ಸಾಧಿಸುವವರು 2020ರ ಟೋಕಿಯೋ ಒಲಿಂಪಿಕ್ಸ್‌ನ 51ರ ಕೆಜಿ ವಿಭಾಗದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.

ಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾ

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಮತ್ತು ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಮೇರಿ ಕೋಮ್-ನಿಖಾತ್ ಝರೀನ್ ಟೋಕಿಯೋ ಅರ್ಹತೆಗಾಗಿ ಕಾದಾಡುತ್ತಿರುವ ವಿಚಾರವನ್ನು ಶುಕ್ರವಾರ (ನವೆಂಬರ್ 8) ಖಾತರಿಪಡಿಸಿದೆ.

ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!

ಶ್ರೇಷ್ಠ ಸಾಧಕಿ ಮೇರಿಗೆ ಒಲಿಂಪಿಕ್ಸ್‌ ಅರ್ಹತೆ ನೀಡಿದ್ದು ನಿಖಾತ್ ಹೊಟ್ಟೆ ಉರಿಸಿದೆ. ಮೇರಿಯನ್ನು ತಾನು ಸೋಲಿಸುತ್ತೇನೆ ಎಂದು ನಿಖಾತ್ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವಿನ ಕಾಳಗ ಕುತೂಹಲ ಮೂಡಿಸಿದೆ.

ಮೂಗು ತೂರಿಸಿದ ಝರೀನ್

ಮೂಗು ತೂರಿಸಿದ ಝರೀನ್

ಅಸಲಿಗೆ ಟೋಕಿಯೋ ಒಲಿಂಪಿಕ್ಸ್‌ನ 51ಕೆಜಿ ವಿಭಾಗದ ಸ್ಪರ್ಧೆಗೆ ಮೇರಿ ಹೆಸರು ಸೂಚಿಸಲಾಗಿತ್ತು. ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಅವರ ಹಿಂದಿನ ಸಾಧನೆ, ಇತ್ತೀಚಿನ ಫಾರ್ಮ್ ಪರಿಗಣಿಸಿ ಕೋಮ್‌ಗೆ ಅರ್ಹತೆ ನೀಡಲಾಗಿತ್ತು. ಆದರೆ ಇದಕ್ಕೆ ಮೂಗು ತೂರಿಸಿರುವ ಝರೀನ್, ಮೇರಿಯನ್ನು ಸೋಲಿಸುವುದಾಗಿ ಹೇಳಿಕೊಂಡಿದ್ದರು. ಕ್ರೀಡಾ ಸಚಿವ ಕಿರೆನ್ ರಿಜಿಜುಗೆ ಈ ಬಗ್ಗೆ ಪತ್ರವೂ ಬರೆದಿದ್ದರು.

ಗುದ್ದಾಟಕ್ಕೆ ಮೇರಿ ಒಪ್ಪಿಗೆ

ಗುದ್ದಾಟಕ್ಕೆ ಮೇರಿ ಒಪ್ಪಿಗೆ

ಹುಮ್ಮಸ್ಸಿನಲ್ಲಿರುವ 23ರ ಹರೆಯದ ಝರೀನ್ ಜೊತೆಗಿನ ಕಾದಾಟಕ್ಕೆ 36ರ ಹರೆಯದ ಅನುಭವಿ ಬಾಕ್ಸರ್ ಮೇರಿ ಕೋಮ್ ಒಪ್ಪಿದ್ದಾರೆ. ಇತ್ತೀಚೆಗೆ ನಡೆದ ಬಾಕ್ಸಿಂಗ್ ವರ್ಲ್ಡ್ ಚಾಂಪಿಯನ್‌ಷಿಪ್‌ 2019ರಲ್ಲಿ ಕೋಮ್ ಕಂಚಿನ ಪದಕ ಜಯಿಸಿದ್ದರು.

ಭಾರತದ ಹೆಮ್ಮೆ ಮೇರಿ

ಭಾರತದ ಹೆಮ್ಮೆ ಮೇರಿ

ವಯಸ್ಸಿನ ಅಡ್ಡಿಯಿದ್ದರೂ ಇಲ್ಲೀವರೆಗೂ ಭಾರತ ಪರ ಗುದ್ದಾಡುತ್ತಲೇ ದೇಶಕ್ಕೆ ಹೆಮ್ಮೆ ತರುತ್ತಿರುವವರು ಮೇರಿ. ಡಿಸೆಂಬರ್ ಕಾಳಗದಲ್ಲಿ ಮೇರಿ ಸೋಲಲಿ-ಗೆಲ್ಲಲಿ ಆಕೆ ಭಾರತದ ಯಾವತ್ತಿಗೂ ಭಾರತ ಶ್ರೇಷ್ಠ ಬಾಕ್ಸರ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಶ್ವ ನಂ.1 ಬಾಕ್ಸರ್ ಕೋಮ್

ವಿಶ್ವ ನಂ.1 ಬಾಕ್ಸರ್ ಕೋಮ್

ವಿಶ್ವ ಚಾಂಪಿಯನ್‌ಷಿಪ್‌ನ ಪದಕಗಳ ಲೆಕ್ಕಾಚಾರದಲ್ಲಿ ಮೇರಿ, ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವಿಶ್ವ ನಂ.1 ಬಾಕ್ಸರ್ ಆಗಿ ಕಾಣಿಸುತ್ತಾರೆ. ಕೋಮ್ ಒಟ್ಟಿಗೆ 6 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಪುರುಷರ ವಿಭಾಗದ ಯಶಸ್ವಿ ಬಾಕ್ಸರ್ ಕೂಬಾದ ಫೆಲಿಕ್ಸ್ ಸಾವನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 6 ಬಂಗಾರ, 1 ಬೆಳ್ಳಿ ಪದಕ ಗೆದ್ದ ದಾಖಲೆ ಹೊಂದಿದ್ದಾರೆ.

Story first published: Saturday, November 9, 2019, 13:24 [IST]
Other articles published on Nov 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X