ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಕ್ಸಿಂಗ್‌: ಇಂಡಿಯಾ ಓಪನ್‌ ಕಣಕ್ಕೆ ವಿಶ್ವ ಚಾಂಪಿಯನ್‌ ಮೇರಿ ಕೋಮ್‌

Mary Kom to make competitive 51 kg debut at India Open

ಹೊಸದಿಲ್ಲಿ, ಮೇ 13: ಒಲಿಂಪಿಕ್ಸ್‌ ಅರ್ಹತೆ ಸಮೀಪಿಸುತ್ತಿದ್ದು, ಎರಡನೇ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಈ ಬಾರಿ ಭಾರತದ ಒಟ್ಟು 72 ಬಾಕ್ಸರ್‌ಗಳು ಕಣಕ್ಕಿಳಿಯುತ್ತಿದ್ದು, ಹಾಲಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಇದೇ ಮೊದಲ ಬಾರಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಅಸ್ಸಾಮ್‌ನ ಗುವಾಹಟಿಯ ಕರಮ್‌ಬೀರ್‌ ನಬೀನ್‌ ಚಂದ್ರ ಬೋರ್ದೊಲೊಯ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 20ರಿಂದ 24ರವರೆಗೆ ನಡೆಯಲಿರುವ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಈ ಬಾರಿ ವಿವಿಧ ರಾಷ್ಟ್ರಗಳಿಂದ ಒಟ್ಟಾರೆ 200ಕ್ಕೂ ಹೆಚ್ಚು ಬಾಕ್ಸರ್‌ಗಳು ಪೈಪೋಟಿ ನಡೆಸಲಿದ್ದಾರೆ.

 ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ! ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ!

ಒಟ್ಟಾರೆ 50 ಲಕ್ಷ್ ರೂ. ಬಹುಮಾನ ಮೊತ್ತ ಹೊಂದಿರುವ ಟೂರ್ನಿಯಲ್ಲಿ ಮೇರಿ ಕೋಮ್‌ ಕಣಕ್ಕಿಳಿಯುವುದು ಖಚಿತವಾಗಿದೆ. ಇತ್ತೀಚೆಗಷ್ಟ್ಏ ಏಷ್ಯನ್‌ ಚಾಂಪಿಯನ್‌ಷಿಪ್‌ನಿಂದ ಹೊರಗುಳಿದಿದ್ದ, 36 ವರ್ಷದ ಅನುಭವಿ ಬಾಕ್ಸರ್‌ ಮೇರಿ ಕೋಮ್‌ ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಪೂರ್ವ ಸಿದ್ಧತೆ ಸಲುವಾಗಿ ಹಾಗೂ ಒಲಿಂಪಿಕ್‌ ಅರ್ಹತೆಗೆ ಸಜ್ಜಾಗಲು ಇಂಡಿಯಾ ಓಪನ್‌ ಮೂಲಕ ಎದುರು ನೋಡುತ್ತಿದ್ದಾರೆ.

IPL: ಸೋಲಿನ ಬಳಿಕ ಸಿಎಸ್‌ಕೆಗೆ ವಯಸ್ಸಾಗ್ತಿದೆ ಎಂದ ಕೋಚ್‌ ಫ್ಲೆಮಿಂಗ್‌!IPL: ಸೋಲಿನ ಬಳಿಕ ಸಿಎಸ್‌ಕೆಗೆ ವಯಸ್ಸಾಗ್ತಿದೆ ಎಂದ ಕೋಚ್‌ ಫ್ಲೆಮಿಂಗ್‌!

"ಇಂಡಿಯಾ ಓಪನ್‌ ಭಾರತೀಯ ಬಾಕ್ಸರ್‌ಗಳಿಗೆ ಉತ್ತಮ ವೇದಿಕೆ. ಈ ಮೂಲಕ ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಗೆ ಸಜ್ಜಾಗಲು ನೆರವಾಗಲಿದೆ. ಈ ಟೂರ್ನಿಯಲ್ಲಿ ಏಷ್ಯಾದ ಶ್ರೇಷ್ಠ ಬಾಕ್ಸರ್‌ಗಳ ಎದುರು ಸ್ಪರ್ಧಿಸುವ ಅವಕಾಶ ಲಭ್ಯವಾಗಲಿದೆ,'' ಎಂದು ಭಾರತೀಯ ಬಾಕ್ಸಿಂಗ್‌ ಒಕ್ಕೂಟದ (ಬಿಎಫ್‌ಐ) ಅಧ್ಯಕ್ಷ ಅಜಯ್‌ ಸಿಂಗ್‌ ಹೇಳಿದ್ದಾರೆ.

 IPL: ಮುಂಬೈ ಇಂಡಿಯನ್ಸ್‌ಗೆ 4ರ, ರೋಹಿತ್‌ ಶರ್ಮಾಗೆ 5ರ ಸಂಭ್ರಮ! IPL: ಮುಂಬೈ ಇಂಡಿಯನ್ಸ್‌ಗೆ 4ರ, ರೋಹಿತ್‌ ಶರ್ಮಾಗೆ 5ರ ಸಂಭ್ರಮ!

"ಬಾಕ್ಸಿಂಗ್‌ ದೇಶದ ಮೂಲೆ ಮೂಲೆಗೆ ತಲುಪಬೇಕೆಂಬುದು ಬಿಎಫ್‌ಐನ ಮುನ್ನೋಟವಾಗಿದೆ. ಈ ನಿಟ್ಟಿನಲ್ಲಿ ಅಸ್ಸಾಂನಲ್ಲಿ ಎರಡನೇ ಆವೃತ್ತಿಯ ಇಂಡಿಯಾ ಓಪನ್‌ ಆಯೋಜಿಸುವ ಮೂಲಕ ಮಹತ್ವದ ಹೆಜ್ಜೆ ಇಡಲಾಗಿದೆ. ಏಕೆಂದರೆ ನಾರ್ತ್‌ಈಸ್ಟ್‌ ವಿಭಾಗದಲ್ಲಿನ ಬಾಕ್ಸರ್‌ಗಳು ದೇಶಕ್ಕೆ ಈಗಾಗಲೇ ಅತ್ಯುನ್ನತ ಕೀರ್ತಿಗಳನ್ನು ತಂದುಕೊಟ್ಟಿದ್ದಾರೆ. ಅವರಿಂದ ಮುಂದಿನ ಪೀಳಿಗೆಯವರಿಗೆ ಸ್ಫೂರ್ತಿ ಒದಗಿಸುವುದು ಇದರ ಹಿಂದಿರುವ ಉದ್ದೇಶ,'' ಎಂದು ವಿವರಿಸಿದ್ದಾರೆ.

ಇನ್ನು ಒಲಿಂಪಿಕ್ಸ್‌ ಅರ್ಹತೆಯನ್ನು ಗುರಿಯಾಗಿಸಿ ಭಾರತೀಯ ಬಾಕ್ಸರ್‌ಗಳೆಲ್ಲರೂ ಹೊಸ ತೂಕ ವಿಭಾಗಗಳಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

 IPL: ಅಂಪೈರ್‌ ಪ್ರಮಾದಕ್ಕೆ ಪ್ರತಿಕ್ರಿಯಿಸಿದ ಪೊಲಾರ್ಡ್‌ಗೆ ದಂಡ! IPL: ಅಂಪೈರ್‌ ಪ್ರಮಾದಕ್ಕೆ ಪ್ರತಿಕ್ರಿಯಿಸಿದ ಪೊಲಾರ್ಡ್‌ಗೆ ದಂಡ!

"51 ಕೆಜಿ ವಿಭಾಗದಲ್ಲಿ ಉತ್ತಮ ತಾಲೀಮು ನಡೆಸಿದ್ದೇನೆ. ವಿಶ್ವ ಚಾಂಪಿಯನ್‌ಷಿಪ್‌ಗೂ ಮುನ್ನ ಈ ವಿಭಾಗದಲ್ಲಿ ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಇಂಡಿಯಾ ಓಪನ್‌ ಉತ್ತಮ ವೇದಿಕೆಯಾಗಿದೆ. ಇನ್ನು ಅಸ್ಸಾಮ್‌ನಲ್ಲಿ ಈ ಟೂರ್ನಿ ನಡೆಯುತ್ತಿರುವುದಕ್ಕೆ ಸಂತಸವಿದೆ,'' ಎಂದು ಮೇರಿ ಕೋಮ್‌ ಹೇಳಿದ್ದಾರೆ.

ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಬಾಕ್ಸರ್‌ಗೆ 1.76 ಲಕ್ಷ ರೂ. ಮತ್ತು ಬೆಳ್ಳಿ ಗೆದ್ದವರಿಗೆ 70 ಸಾವಿರ ರೂ. ಲಭ್ಯವಾಗಲಿದೆ.

Story first published: Monday, May 13, 2019, 21:18 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X