ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಕ್ಸಿಂಗ್ ರಿಂಗ್‌ಗೆ ಮರಳಿದ 3 ಮಕ್ಕಳ ತಾಯಿಗೆ ಸ್ಟೇಟ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ

Mother of 3 makes grand re-entry into boxing ring by winning silver in state championship

ತಿರುವನಂತಪುರಂ: ಕೇರಳದ ತಮರಸೇರಿ ಭಾಗದವರಾದ ಲಾಜ್‌ವಂತಿ, ಸುಮಾರು 12 ವರ್ಷಗಳ ಬಳಿಕ ಬಾಕ್ಸಿಂಗ್‌ ರಿಂಗ್‌ಗೆ ಮರಳಿ ಸ್ಟೇಟ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಬೆರಗು ಮೂಡಿಸಿದ್ದಾರೆ. ಗೆಲ್ಲೋ ಛಲವಿದ್ದರೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಲಾಜ್‌ವಂತಿ ಸಾಕ್ಷಿ ಹೇಳಿದ್ದಾರೆ.

ಭಾರತೀಯನಂತೆ ವಿಶೇಷ ದಾಖಲೆ ಪಟ್ಟಿ ಸೇರಿದ ಇಯಾನ್ ಮಾರ್ಗನ್!ಭಾರತೀಯನಂತೆ ವಿಶೇಷ ದಾಖಲೆ ಪಟ್ಟಿ ಸೇರಿದ ಇಯಾನ್ ಮಾರ್ಗನ್!

ಈಗ 30ರ ಹರೆಯದವರಾಗಿರುವ ಲಾಜ್‌ವಂತಿ ಅವರಿಗೀಗ ಮೂವರು ಮಕ್ಕಳಿದ್ದಾರೆ. ಆದರೆ ಬದುಕಿನ ಅನಿವಾರ್ಯತೆ ಅವರನ್ನು ವಯಸ್ಸಿನ ಮಿತಿಯನ್ನು ಮೀರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಇದೇ ಮಾರ್ಚ್ 13ರಂದು ತಿರುವನಂತಪುರಂನಲ್ಲಿ ನಡೆದಿದ್ದ ಸ್ಟೇಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಲಾಜ್‌ವಂತಿ ಬೆಳ್ಳಿ ಪದಕ ಜಯಿಸಿ ಅಚ್ಚರಿ ಮೂಡಿಸಿದ್ದಾರೆ.

ಶಾಲೆ ಮತ್ತು ಕಾಲೇಜು ದಿನಗಳಲ್ಲಿದ್ದಾಗ ಲಾಜ್‌ವಂತಿ ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದರು. ಅಷ್ಟೇ ಅಲ್ಲ, 2008ರಲ್ಲಿ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಜಯಿಸಿದ್ದ ಲಾಜ್‌ವಂತಿ ನ್ಯಾಷನಲ್ ಕ್ಯಾಂಪ್‌ಗೆ ಆಯ್ಕೆಯಾಗಿದ್ದರು. ಆದರೆ ಆ ಬಳಿಕ ಗಾಯ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ ಕ್ರೀಡಾಕ್ಷೇತ್ರವನ್ನು ತೊರೆದಿದ್ದರು.

ಭಾರತ-ಇಂಗ್ಲೆಂಡ್: ವಿಲಿಯಮ್ಸನ್ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿಭಾರತ-ಇಂಗ್ಲೆಂಡ್: ವಿಲಿಯಮ್ಸನ್ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

ಬಾಕ್ಸಿಂಗ್ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಿಯೂ ಲಾಜ್‌ವಂತಿಗೆ ಕ್ರೀಡಾ ಕೋಟಾದಡಿಯಲ್ಲಿ ಯಾವುದೇ ಉತ್ತಮ ಕೆಲಸ ಸಿಕ್ಕಿಲ್ಲ. ಹೀಗಾಗಿ ಬದುಕಿನ ಅನಿವಾರ್ಯತೆಗಾಗಿ ಲಾಜ್‌ವಂತಿ ಸದ್ಯ ಫಿಟ್ನೆಸ್ ಟ್ರೇನರ್ ಆಗಿ ದುಡಿಯುತ್ತಿದ್ದಾರೆ. ರಾಜ್ಯದ ಮೊದಲ ಮಹಿಳಾ ಬಾಕ್ಸಿಂಗ್ ಕೋಚ್ ಆಗುವ ಆಸೆಯನ್ನಿಟ್ಟುಕೊಂಡಿರುವ ಲಾಜ್‌ವಂತಿ, ಪಂಜಾಬ್‌ನ ಪಾಟಿಯಾಲದಲ್ಲಿರುವ ನ್ಯಾಷನಲ್ ಕೋಚಿಂಗ್‌ ಅಕಾಡೆಮಿಗೆ ಸೇರಲು ಬಯಸಿದ್ದಾರೆ. ಆದರೆ ಲಾಜ್‌ವಂತಿಗೆ ಆರ್ಥಿಕ ಸಮಸ್ಯೆಯಿದೆ. ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿ ಲಾಜ್‌ವಂತಿ ಇದ್ದಾರೆ.

Story first published: Wednesday, March 17, 2021, 16:32 [IST]
Other articles published on Mar 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X