ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಅಂತಿಮ ಗುರಿ: ನಿಖತ್ ಜರೀನ್

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಹಾಗೂ ತೆಲಂಗಾಣದ ಯುವ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ತನ್ನ ಮುಂದಿನ ಗುರಿ ಎಂದು ಹೇಳಿದ್ದಾರೆ. ಇದಕ್ಕಾಗಿ ನಾನು ಎಷ್ಟು ಪ್ರಯತ್ನ ಪಟ್ಟರೂ ಸಾಲದು, ನಾನು ಪದಕ ಗೆದ್ದೇ ತೀರುತ್ತೇನೆ ಎಂದು ಹೇಳಿದರು.

ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿಖತ್ ಝರೀನ್ 52 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಸುಮಾರು ನಾಲ್ಕು ವರ್ಷಗಳ ನಂತರ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪರ ಇತಿಹಾಸ ನಿರ್ಮಿಸಿದ ನಿಖತ್, ದಿಗ್ಗಜ ಬಾಕ್ಸರ್‌ಗಳಾದ ಮೇರಿ ಕೋಮ್ ಮತ್ತು ಸರಿತಾ ದೇವಿ ಅವರ ಸಾಲಿಗೆ ಸೇರಿದರು.

ವಿಶ್ವ ಚಾಂಪಿಯನ್ ಪದಕ ಗೆದ್ದ ಭಾರತದ ಐದನೇ ಬಾಕ್ಸರ್

ವಿಶ್ವ ಚಾಂಪಿಯನ್ ಪದಕ ಗೆದ್ದ ಭಾರತದ ಐದನೇ ಬಾಕ್ಸರ್

ಥಾಯ್ಲೆಂಡ್ ಪ್ರತಿಸ್ಪರ್ಧಿಯನ್ನು ಸೋಲಿಸಿ 5-0 ಅಂತರದ ಸರ್ವಾನುಮತದ ತೀರ್ಪಿನ ಮೂಲಕ ಗೆದ್ದ ನಿಖತ್ ಜರೀನ್, ಈ ಗೆಲುವಿನೊಂದಿಗೆ ಜರೀನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಐದನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಹಿಂದೆ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018) ಸರಿತಾ ದೇವಿ (2006), ಜೆನ್ನಿ ಆರ್ ಎಲ್ (2006) ಮತ್ತು ಲೇಖಾ ಕೆಸಿ (2006) ವಿಶ್ವ ಪ್ರಶಸ್ತಿ ಗೆದ್ದ ಇತರ ಆಟಗಾರ್ತಿಯರಾಗಿದ್ದಾರೆ.

ಬಾಲ್ಯದ ಕಷ್ಟಗಳನ್ನ ನೆನೆದ ನಿಖತ್ ಜರೀನ್

ಬಾಲ್ಯದ ಕಷ್ಟಗಳನ್ನ ನೆನೆದ ನಿಖತ್ ಜರೀನ್

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದ ಗೆದ್ದು ಇತಿಹಾಸ ನಿರ್ಮಿಸಿದ ನಿಖತ್ ಜರೀನ್, ತನ್ನ ಯಶಸ್ಸಿನ ಹಿಂದೆ ಪಟ್ಟ ಕಷ್ಟಗಳನ್ನು ನೆನೆದಿದ್ದಾರೆ. ಈ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ತೆಲಂಗಾಣ ಬಾಕ್ಸರ್ ಶುಕ್ರವಾರ ಮಾಧ್ಯಮದವರೊಂದಿಗೆ ಬಾಲ್ಯದಲ್ಲಿ ತಾನು ಅನುಭವಿಸಿದ ಕಷ್ಟಗಳು, ನೋವುಗಳು ಮತ್ತು ಅದನ್ನು ಮೆಟ್ಟಿ ನಿಲ್ಲುವಲ್ಲಿ ಕುಟುಂಬದಿಂದ ದೊರೆತ ಬೆಂಬಲವನ್ನು ಹಂಚಿಕೊಂಡಿದ್ದಾಳೆ.

ದೌರ್ಬಲ್ಯಗಳನ್ನು ವ್ಯಾಯಾಮ ಮಾಡಿ ಮತ್ತು ಆಟದಲ್ಲಿ ಸುಧಾರಿಸಿಕೊಂಡಿರುವ ಈಕೆ ಬಾಕ್ಸಿಂಗ್‌ನಲ್ಲಿ ಬಲಗೊಳ್ಳಬೇಕಾದ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದರು. ನನ್ನ ವೃತ್ತಿಜೀವನದಲ್ಲಿ ನಾನು ಎದುರಿಸಿದ ಅಡೆತಡೆಗಳು ನನ್ನನ್ನು ಬಲವಾಗಿ ಬದಲಾಯಿಸಿದವು. ಮಾನಸಿಕವಾಗಿ ನಾನು ಬಲಶಾಲಿ. ಏನೇ ಆಗಲಿ ಹೋರಾಡಲೇಬೇಕು. ಅತ್ಯುತ್ತಮ ಪ್ರದರ್ಶನ ನೀಡಲು ಆಲೋಚನಾ ಕ್ರಮ ಬದಲಿಸಿಕೊಂಡರೂ 2017ರಲ್ಲಿ ಭುಜದ ಭುಜ ತಪ್ಪಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

ಒಂದು ವರ್ಷದಿಂದ ಯಾವುದೇ ಟೂರ್ನಿಯಲ್ಲಿ ಭಾಗವಹಿಸಿಲ್ಲ. 2018 ರಲ್ಲಿ ಹಿಂತಿರುಗಿದ್ರೂ ಸಹ ಹಿಂದಿನ ರೂಪದಲ್ಲಿರಲ್ಲ. ಇದರೊಂದಿಗೆ ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕೈ ತಪ್ಪಿತು. ಆದರೂ ಕೂಡ ಛಲವನ್ನ ನಾನು ಬಿಡಲಿಲ್ಲ. 2019 ರಲ್ಲಿ ಮರು-ಪ್ರವೇಶದ ನಂತರ ಹಿಂತಿರುಗಿ ನೋಡಲಿಲ್ಲ ಎಂದು ಜರೀನ್ ತನ್ನ ಎದುರಿಸಿದ ಅಡೆತಡೆಗಳನ್ನ ತಿಳಿಸಿದ್ದಾರೆ.

ನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾ

2024ರ ಪ್ಯಾರಿಸ್ ಒಲಿಂಪಿಕ್ ಮೇಲೆ ಬಾಕ್ಸರ್ ಕಣ್ಣು

2024ರ ಪ್ಯಾರಿಸ್ ಒಲಿಂಪಿಕ್ ಮೇಲೆ ಬಾಕ್ಸರ್ ಕಣ್ಣು

ನ್ಯಾಷನಲ್‌ಗೂ ಮುನ್ನವೇ 'ಪ್ಯಾರಿಸ್' ತಯಾರಿ ಶುರುವಾಗಿದೆ ಎಂದು ನನ್ನ ಇನ್‌ಸ್ಟಾಗ್ರಾಮ್‌ ಪೋಸ್ಟ್ ಹಾಕಿದ್ದೇನೆ. ಯಾವುದೇ ಪಂದ್ಯಾವಳಿಯನ್ನು ಗೆಲ್ಲುವ ಅಥವಾ ಸೋಲುವ ಯೋಚನೆ ಮಾಡಿಲ್ಲ. ಅನುಭವ ಗಳಿಸುವ ಗುರಿಯೊಂದಿಗೆ ಮುನ್ನಡೆಯುವುದು ನನ್ನ ಧ್ಯೆಯ. ಈ ಅನುಭವ ಒಲಿಂಪಿಕ್ಸ್‌ನಲ್ಲಿ ನನಗೆ ಕೆಲಸ ಮಾಡುತ್ತದೆ. ನನ್ನ ದೇಶದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನನ್ನ ದೌರ್ಬಲ್ಯಗಳು ನನಗೆ ಗೊತ್ತು, ಹೀಗಾಗಿ ನಾನು ನನ್ನ ಶಕ್ತಿಯನ್ನು ಮೀರಿಸಿ ಪದಕ ಗೆಲ್ಲಲು ಪ್ರಯತ್ನಿಸುವೆ ಎಂದಿದ್ದಾರೆ.

ನಮ್ಮೂರ ಪ್ರತಿಭೆ: ಭಾರತೀಯ ವಾಲಿಬಾಲ್‌ನಲ್ಲಿ ಮಿಂಚುತ್ತಿರುವ ಅಶ್ವಲ್ ರೈ

ಮೇರಿಕೋಮ್ ಭೇಟಿಯಾಗಿದ್ದು ಖುಷಿ ನೀಡಿದೆ

ಮೇರಿಕೋಮ್ ಭೇಟಿಯಾಗಿದ್ದು ಖುಷಿ ನೀಡಿದೆ

ಮೇರಿಕೋಮ್, ಸರಿತಾ ದೇವಿ ಲೆಜೆಂಡರಿ ಬಾಕ್ಸರ್‌ಗಳು. ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಾಯಿತು. ಮೇರಿಗೆ ಸಾಕಷ್ಟು ಅನುಭವವಿದೆ. ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೆ ಇಬ್ಬರು ಬಾಕ್ಸರ್‌ಗಳು ರಿಂಗ್‌ಗೆ ಇಳಿದರೆ ಒಬ್ಬರು ಮಾತ್ರ ಗೆಲ್ಲುತ್ತಾರೆ. ಅವರು ಅರ್ಹತಾ ಪಂದ್ಯವನ್ನು ಗೆದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ಹೋದರು. ಆದ್ರೆ ದುರದೃಷ್ಟವಶಾತ್ ಪದಕ ಕೈ ತಪ್ಪಿತು. ಕಾಮನ್‌ವೆಲ್ತ್ ಟ್ರಯಲ್ಸ್‌ನಲ್ಲಿ ಮೇರಿ 48 ಕೆಜಿಯಲ್ಲಿ ಕಣಕ್ಕೆ ಇಳಿಯುತ್ತಾರೆ ಎಂದು ಕೇಳಿದ್ದೆ. ಹೀಗಾಗಿ ನಾವಿಬ್ಬರೂ ಮತ್ತೆ ಸ್ಪರ್ಧಿಸುವ ಅವಕಾಶ ಬಯಸುವುದಿಲ್ಲ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 50 ಕೆ.ಜಿ. ತೂಕದ ವರ್ಗವನ್ನು ಬದಲಾಯಿಸುವುದು ತುಂಬಾ ಕಷ್ಟ. ತೂಕ ಹೆಚ್ಚಾಗುವುದು ಅಥವಾ ಕಳೆದುಕೊಳ್ಳುವುದುವಪ್ರತಿಕೂಲವಾಗಬಹುದು. ತೂಕ ಇಳಿಸಿಕೊಂಡು ಆ ವರ್ಗಕ್ಕೆ ಸೇರುವವರು ಸ್ವಲ್ಪ ಬಲಶಾಲಿಗಳು. ಬಲಿಷ್ಠ ಬಾಕ್ಸರ್‌ಗಳು ಎದುರಾಗುತ್ತಾರೆ. 50 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದರೂ ದೊಡ್ಡ ವ್ಯತ್ಯಾಸವೇನೂ ಆಗದಿರಬಹುದು. ಪ್ರಸ್ತುತ ನನ್ನ ತೂಕ 51 ರಿಂದ 51.5 ಕೆಜಿ ನಡುವೆ ಇದೆ. ಹಾಗಾಗಿ 50ಕೆಜಿ ವಿಭಾಗದಲ್ಲಿ ಚೆನ್ನಾಗಿ ಆಡಬಲ್ಲೆ. ಸ್ವಲ್ಪ ಕಾಲ 50ಕೆಜಿ ವಿಭಾಗದಲ್ಲಿ ಮುಂದುವರಿಯುತ್ತೇನೆ. ದೇಹವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳುವುದು ಈಗ ಸವಾಲು ಎಂದು ನಿಖತ್ ಜರೀನ್ ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Saturday, May 21, 2022, 14:30 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X