ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ಖಚಿತ, ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಲೊವ್ಲಿನಾ!

Tokyo Olympics 2020: Lovlina Borgohain secures 2nd medal for India, marches into semis

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ 7 ದಿನಗಳು ಕಳೆದಿದ್ದು ಇದುವರೆಗೂ ಭಾರತದ ಪರ ಪದಕವನ್ನು ಗೆದ್ದಿರುವ ಏಕೈಕ ಆಟಗಾರ್ತಿ ಮೀರಾಬಾಯಿ ಚಾನು ಮಾತ್ರ. ಸೈಕೋಮ್ ಮೀರಾಬಾಯಿ ಚಾನು ಹೊರತುಪಡಿಸಿ ಭಾರತದ ಬೇರೆ ಯಾವುದೇ ಕ್ರೀಡಾಪಟು ಕೂಡ ಪದಕವನ್ನು ಗೆದ್ದಿಲ್ಲ.

ಪಿವಿ ಸಿಂಧು, ಅತನು ದಾಸ್, ದೀಪಿಕಾ ಕುಮಾರಿ ಮತ್ತು ಭಾರತದ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಇವರುಗಳ ಜೊತೆ ಇದೀಗ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶ ಮಾಡಿದ್ದು ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದೆ.

ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದ ಎರಡನೇ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾದ ಎನ್ ಸಿ ಚೆನ್ ವಿರುದ್ಧ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಭಾರತದ ಲೊವ್ಲಿನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಲಭಿಸುವುದು ಖಚಿತವಾಗಿದೆಈ ಮೂಲಕ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕ ಗೆಲ್ಲಲಿರುವ ಎರಡನೆ ಕ್ರೀಡಾಪಟು ಲೊವ್ಲಿನಾ ಆಗಲಿದ್ದಾರೆ. ಸೆಮಿ ಫೈನಲ್ ಸುತ್ತನ್ನು ಪ್ರವೇಶಿಸಿರುವ ಲೊವ್ಲಿನಾಗೆ ಸೋತರೂ ಕೂಡ ಕಂಚಿನ ಪದಕ ಸಿಗುವುದು ಪಕ್ಕಾ ಆಗಿದ್ದು ಎಲ್ಲೆಡೆ ಪ್ರಶಂಸೆಯ ಸುರಿಮಳೆಯೇ ಸುರಿಯುತ್ತಿದೆ.

ಕಂಚಲ್ಲ ಚಿನ್ನ ಗೆಲ್ಲುವುದು ನನ್ನ ಗುರಿ

ಕಂಚಲ್ಲ ಚಿನ್ನ ಗೆಲ್ಲುವುದು ನನ್ನ ಗುರಿ

ಚೀನಾದ ಎನ್ ಸಿ ಚೆನ್ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಿರುವ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬರ್ಗಹೈನ್ ಪಂದ್ಯ ಮುಗಿದ ನಂತರ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಚಿನ್ನದ ಪದಕ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸೆಮಿಫೈನಲ್ ಪ್ರವೇಶಿಸಿರುವ ಖುಷಿಯನ್ನು ಹಂಚಿಕೊಂಡಿರುವ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬರ್ಗಹೈನ್ 'ನಾನು ಯಾವುದೇ ಕಾರಣಕ್ಕೂ ಕಂಚಿಗೆ ತೃಪ್ತಿಪಟ್ಟುಕೊಳ್ಳುವುದಿಲ್ಲ, ಚಿನ್ನದ ಪದಕವನ್ನು ಗೆಲ್ಲುವುದು ನನ್ನ ಗುರಿ' ಎಂದು ಚಿನ್ನದ ಪದಕವನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿರುವ ಮೂರನೇ ಭಾರತೀಯ ಬಾಕ್ಸರ್ ಲೊವ್ಲಿನಾ

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿರುವ ಮೂರನೇ ಭಾರತೀಯ ಬಾಕ್ಸರ್ ಲೊವ್ಲಿನಾ

ಇದುವರೆಗೂ ಹಲವಾರು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತದ ಹಲವಾರು ಬಾಕ್ಸರ್‌ಗಳು ಭಾಗವಹಿಸಿದ್ದರು ಸಹ ಭಾರತಕ್ಕೆ ಬಾಕ್ಸಿಂಗ್‌‌ ಸ್ಪರ್ಧೆಯಲ್ಲಿ ಲಭಿಸಿರುವುದು ಕೇವಲ ಎರಡೇ ಎರಡು ಪದಕಗಳು ಮಾತ್ರ. ಹೌದು 2008ರಲ್ಲಿ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು 2012ರಲ್ಲಿ ಮಹಿಳಾ ಬಾಕ್ಸರ್ ಮೇರಿ ಕೋಮ್ ಕಂಚಿನ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಗೆದ್ದುಕೊಂಡಿದ್ದರು. ಈಗ ಲೊವ್ಲಿನಾ ಕಂಚಿನ ಪದಕವನ್ನು ಗೆದ್ದರೆ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕಂಚಿನ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎನಿಸಿಕೊಳ್ಳಲಿದ್ದಾರೆ. ಒಂದುವೇಳೆ ಬೆಳ್ಳಿ ಅಥವಾ ಚಿನ್ನದ ಪದಕವನ್ನೇನಾದರು ಗೆದ್ದರೆ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಬಾಕ್ಸಿಂಗ್ ವಿಭಾಗದಲ್ಲಿ ಬೆಳ್ಳಿ ಅಥವಾ ಚಿನ್ನದ ಪದಕವನ್ನು ಗೆದ್ದ ಮೊಟ್ಟ ಮೊದಲ ಭಾರತೀಯ ಬಾಕ್ಸರ್ ಎಂಬ ಕೀರ್ತಿಗೆ ಲೊವ್ಲಿನಾ ಪಾತ್ರರಾಗಲಿದ್ದಾರೆ.

ಓಪನ್ ಇಂಡಿಯಾ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿದ್ದ ಲೊವ್ಲಿನಾ

ಓಪನ್ ಇಂಡಿಯಾ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿದ್ದ ಲೊವ್ಲಿನಾ

ಈ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ಮೊದಲನೇ ಓಪನ್ ಇಂಡಿಯಾ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಚಿನ್ನದ ಪದಕವನ್ನು ಗೆದ್ದಿದ್ದರು. ಹಾಗೂ ಗುವಾಹತಿಯಲ್ಲಿ ನಡೆದಿದ್ದ ಎರಡನೇ ಓಪನ್ ಇಂಡಿಯಾ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಲೊವ್ಲಿನಾ ಗೆದ್ದಿದ್ದರು. ಅಷ್ಟೇ ಅಲ್ಲದೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಗಳಲ್ಲಿ ಇದುವರೆಗೂ ಲೊವ್ಲಿನಾ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ ಹಾಗೂ ಏಷಿಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ 2017 ಹಾಗೂ 2021ರ ಪಂದ್ಯಾವಳಿಗಳಲ್ಲಿ ಕೂಡ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Story first published: Friday, July 30, 2021, 15:54 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X