ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಪದಕ ಗೆಲ್ಲಲು ಇನ್ನೊಂದೇ ಹೆಜ್ಜೆ!

Tokyo Olympics 2021: Indian Boxer Lovlina Borgohain enters quarterfinals

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸುವ ನಿರೀಕ್ಷೆಯಿದೆ. ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಟೋಕಿಯೋ ಒಲಿಂಪಿಕ್ಸ್ ಮಹಿಳಾ 69 ಕೆಜಿ ವೆಲ್ಟರ್‌ವೇಟ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ದಾಖಲಿಸಿದ್ದಾರೆ.

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತದ ಅಪ್‌ಡೇಟೆಡ್ ತಂಡ ಪ್ರಕಟ, ತಂಡದಲ್ಲಿ ಪ್ರಮುಖ ಬದಲಾವಣೆ!ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತದ ಅಪ್‌ಡೇಟೆಡ್ ತಂಡ ಪ್ರಕಟ, ತಂಡದಲ್ಲಿ ಪ್ರಮುಖ ಬದಲಾವಣೆ!

ಮಂಗಳವಾರ (ಜುಲೈ 27) ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಅವರು ಜರ್ಮನಿಯ ನಾಡಿನ್ ಅಪೆಟ್ಜ್ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಲವ್ಲಿನಾ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಲಿದೆ.

ಬಾಕ್ಸಿಂಗ್‌ ವಿಭಾಗದಲ್ಲಿ ಮಂಗಳವಾರ ಭಾರತ ಪರ ಸ್ಪರ್ಧೆಯಿದ್ದಿದ್ದು 23ರ ಹರೆಯದ ಲವ್ಲಿನಾ ಒಬ್ಬರಿಗೇ. ಇದು ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಲವ್ಲಿನಾ ಜರ್ಮನಿಯ ಅನುಭವಿ 35ರ ಹರೆಯದ ಬಾಕ್ಸರ್ ಅಪೆಟ್ಜ್ ಅವರನ್ನು 3-2 ಅಂತರದಿಂದ ಹಿಮ್ಮೆಟ್ಟಿಸಿದ್ದಾರೆ.

'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ

ಮುಂದಿನ ಹಂತದಲ್ಲಿ ಲವ್ಲಿನಾ ಅವರು ಚೈನೀಸ್ ತೈಪೆಯ ನಿಯಾನ್-ಚಿನ್ ಚೆನ್ ವಿರುದ್ಧ ಸೆಣಸಾಡಲಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯ ಜುಲೈ 30ರಂದು ನಡೆಯಲಿದೆ. ಅಂದ್ಹಾಗೆ ನಿಯಾನ್-ಚಿನ್ ಚೆನ್ ವಿಶ್ವಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿದ್ದಾರೆ ಮತ್ತು ಹಿಂದೆ ವಿಶ್ವಚಾಂಪಿಯನ್‌ಶಿಪ್‌ ಪಟ್ಟ ಅಲಂಕರಿಸಿದ್ದವರು.

Story first published: Tuesday, July 27, 2021, 13:53 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X