ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ನಿರ್ಧಾರ ದುರದೃಷ್ಟಕರ': ಟೋಕಿಯೋ ಸೋಲಿಗೆ ಕಣ್ಣೀರಿಟ್ಟ ಮೇರಿ ಕೋಮ್

Tokyo Olympics: Mary Kom breaks down in tears after Tokyo Olympics exit

ಟೋಕಿಯೋ: ಆರು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಸೋತ ಬಳಿಕ ಕಣ್ಣೀರಿಟ್ಟಿದ್ದಾರೆ. ಪ್ರಿ ಕ್ವಾರ್ಟರ್ ಪಂದ್ಯದ ವೇಳೆಯ ತೀರ್ಪುಗಾರರ ನಿರ್ಧಾರ ದುರದೃಷ್ಟಕರ ಎಂದು ಕೋಮ್ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!

ಗುರುವಾರ (ಜುಲೈ 29) ನಡೆದಿದ್ದ ಟೋಕಿಯೋ ಒಲಿಂಪಿಕ್ಸ್ ಮಹಿಳಾ 51 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೇರಿ ಕೋಮ್ ಅವರು ಕೊಲಂಬಿಯಾದ ಇಂಗ್ರಿಟ್ ಲೊರೆನಾ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ 3-2ರ ಅಂತರದಲ್ಲಿ ಸೋಲುಭವಿಸಿದ್ದರು. ಇದರೊಂದಿಗೆ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಗೆಲ್ಲಬೇಕೆನ್ನುವ ಮೇರಿ ಕನಸು ಕೊನೆಯಾಗಿತ್ತು.

38ರ ಹರೆಯದ ಮೇರಿ ಸ್ಪರ್ಧೆಯ ಆರಂಭಿಕ ಎರಡೂ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಮೇರಿ ಕೊಂಚ ದಣಿದಂತೆ ಕಾಣಿಸಿತ್ತು. ಆದರೆ ಯುವ ಬಾಕ್ಸರ್ ಇಂಗ್ರಿಟ್ ಲೊರೆನಾ ಸ್ಪರ್ಧೆಯ ಆರಂಭದಿಂದಲೂ ಆಕ್ರಮಣಕಾರಿ ಗುದ್ದಾಟ ಆರಂಭಿಸಿದ್ದರೂ ಮೇರಿ ಅನ್ನು ದಿಟ್ಟವಾಗಿ ಎದುರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಭಾರತ vs ಶ್ರೀಲಂಕಾ: ಟೀಮ್ ಇಂಡಿಯಾದ ದಿಟ್ಟ ನಿರ್ಧಾರದ ಬಗ್ಗೆ ಇನ್ಜಮಾಮ್ ಉಲ್ ಹಕ್ ಪ್ರಶಂಸೆಭಾರತ vs ಶ್ರೀಲಂಕಾ: ಟೀಮ್ ಇಂಡಿಯಾದ ದಿಟ್ಟ ನಿರ್ಧಾರದ ಬಗ್ಗೆ ಇನ್ಜಮಾಮ್ ಉಲ್ ಹಕ್ ಪ್ರಶಂಸೆ

"40ರ ಹರೆಯದವರೆಗೂ ನಾನು ಬಾಕ್ಸಿಂಗ್ ಮಾಡುತ್ತೇನೆ. ಆದರೆ ಈ ಪಂದ್ಯ ನಿಜಕ್ಕೂ ದುರದೃಷ್ಟಕರವಾಗಿತ್ತು. ತೀರ್ಪುಗಾರರ ನಿರ್ಧಾರ ದುರದೃಷ್ಟಕರವಾಗಿತ್ತು. ಒಂದೇ ಒಂದು ಪ್ರತಿಭಟನೆಗೂ ಆಸ್ಪದವಿಲ್ಲ ಎಂದು ಪಂದ್ಯದ ಆರಂಭದಲ್ಲೇ ಹೇಳಿದ್ದರು. ಪದಕದೊಂದಿಗೆ ನಾನು ದೇಶಕ್ಕೆ ಹಿಂದಿರುಗುತ್ತೇನೆ ಎಂದು ನಾನು ಭಾವಿಸಿದ್ದೆ. ಆದರೆ ಇಲ್ಲೇನಾಯಿತೋ ಗೊತ್ತಾಗಲಿಲ್ಲ," ಎಂದು ಪಂದ್ಯದ ಬಳಿಕ ಮೇರಿ ಪ್ರತಿಕ್ರಿಯಿಸಿದ್ದಾರೆ.

Story first published: Friday, July 30, 2021, 9:49 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X