ಹೆರ್ನಾಂಡೆಜ್ ಗಾರ್ಸಿಯಾ ಸೋಲಿಸಿ ಮುನ್ನಡೆ ಸಾಧಿಸಿದ ಮೇರಿ ಕೋಮ್

ಟೋಕಿಯೋ: 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತದ ಭರವಸೆಯ ಬಾಕ್ಸರ್ ಎಂಸಿ ಮೇರಿ ಕೋಮ್ (51 ಕೆಜಿ) ಅವರು ಟೋಕಿಯೋ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್‌ನ ಆರಂಭಿಕ ಸುತ್ತಿನಲ್ಲಿ ಡೊಮೆನಿಕನ್ ರಿಪಬ್ಲಿಕ್‌ನ ಮಿಗುಯೆಲಿನ ಹೆರ್ನಾಂಡೆಜ್ ಗಾರ್ಸಿಯಾ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

ಐಪಿಎಲ್ ಪುನಾರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಆಘಾತ; ಪ್ರಮುಖ ಆಟಗಾರ ಹೊರಗುಳಿಯುವ ಸಾಧ್ಯತೆಐಪಿಎಲ್ ಪುನಾರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಆಘಾತ; ಪ್ರಮುಖ ಆಟಗಾರ ಹೊರಗುಳಿಯುವ ಸಾಧ್ಯತೆ

2012ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚು ಗೆದ್ದಿದ್ದ 38ರ ಹರೆಯದ ಮೇರಿ ಕೋಮ್ ಅವರು ಮಿಗುಯೆಲಿನ ಹೆರ್ನಾಂಡೆಜ್ ಗಾರ್ಸಿಯಾ ಎದುರು 4-1ರ ಜಯ ದಾಖಲಿಸಿದ್ದಾರೆ. ಅಂದ್ಹಾಗೆ ಕೋಮ್ ಪ್ರತಿಸ್ಪರ್ಧಿ ಹೆರ್ನಾಂಡೆಜ್ ಗಾರ್ಸಿಯಾ ಅವರು ಮೇರಿಗಿಂತ 15 ವರ್ಷ ಚಿಕ್ಕವರು ಮತ್ತು ಪಾನ್ ಅಮೆರಿಕನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದವರು.

ಕೋಮ್ ಎದುರು ಹೆರ್ನಾಂಡೆಜ್ ಗಾರ್ಸಿಯಾ ಸುಲಭ ಸೋಲನುಭವಿಸಿಲ್ಲ. ಬದಲಿಗೆ ಮೇರಿಗೆ ಉತ್ತಮ ಪೈಪೋಟಿ ನೀಡಿದ್ದ ಕಾಣಿಸಿತು. ನಾಲ್ಕು ಮಕ್ಕಳ ತಾಯಿಯಾಗಿರುವ ಮೇರಿ ಮುಂದಿನ ಸುತ್ತಿನಲ್ಲಿ 3ನೇ ವಿಶ್ವ ಶ್ರೇಯಾಂಕಿತೆ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೆಣಸಾಡಲಿದ್ದಾರೆ.

'ವೇಗದ ಆಟ ಆಡಿದ ಮಾತ್ರಕ್ಕೆ ಆತ ಸೆಹ್ವಾಗ್ ಆಗಲ್ಲ'; ಭಾರತೀಯ ಆಟಗಾರನ ಕಾಲೆಳೆದ ಸಲ್ಮಾನ್ ಬಟ್'ವೇಗದ ಆಟ ಆಡಿದ ಮಾತ್ರಕ್ಕೆ ಆತ ಸೆಹ್ವಾಗ್ ಆಗಲ್ಲ'; ಭಾರತೀಯ ಆಟಗಾರನ ಕಾಲೆಳೆದ ಸಲ್ಮಾನ್ ಬಟ್

ಇಂಗ್ರಿಟ್ ವೇಲೆನ್ಸಿಯಾ ಅವರು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದವರು. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, July 25, 2021, 17:21 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X