ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ನನ್ನ ಅಂತಿಮ ಒಲಿಂಪಿಕ್ಸ್ ಹೋರಾಟ ಎಂದು ಘೋಷಿಸಿದ ಮೇರಿ ಕೋಮ್

Tokyo Will be My last Olympic Appearance: Mary Kom

ಭಾರತದ ಮಹಿಳಾ ಬಾಕ್ಸಿಂಗ್ ದಂತಕತೆ ಮೇರಿ ಕೋಮ್ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ತನ್ನ ಅಂತಿಮ ಒಲಿಂಪಿಕ್ಸ್ ಹಣಾಹಣಿಯಾಗಿರಲಿದೆ ಎಂದು ಘೋಷಿಸಿದ್ದಾರೆ. 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೇರಿ ಕೋಮ್ ಕಂಚಿನ ಪದಕವನ್ನು ಗೆದ್ದಿದ್ದರು. ಈ ಪ್ರಶಸ್ತಿ ದೇಶದ ಸಾಕಷ್ಟು ಯುವ ಪ್ರತಿಭೆಗಳಿಗೆ ಪ್ರೇರಣೆ ನೀಡಿದೆ ಎಂಬ ಸಂಗತಿ ನನಗೆ ಸಮಾಧಾನ ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ.

6 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ ಕೋಮ್ 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಟೂರ್ನಿಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಎರಡು ದಶಕಗಳ ಕಾಲ ಮೇರಿ ಕೋಮ್ ಬಾಕ್ಸಿಂಗ್ ರಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಐಸಿಸಿ ಸಿಇಒ ಮನು ಸಾಹ್ನಿಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಐಸಿಸಿ ಸಿಇಒ ಮನು ಸಾಹ್ನಿ

"ಟೋಕಿಯೋ ನನ್ನ ಕೊನೆಯ ಒಲಿಂಪಿಕ್ಸ್. ವಯಸ್ಸು ಇಲ್ಲಿ ಮುಖ್ಯವಾಗುತ್ತದೆ. ಈಗ ನನಗೆ 38 ವರ್ಷ. 39ರತ್ತ ತೆರಳುತ್ತಿದ್ದೇನೆ. ಮತ್ತೆ ನಾಲ್ಕು ವರ್ಷಗಳು ಸುದೀರ್ಘ ಕಾಲವಾಗಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ನಾನು ಸಿದ್ಧಳಿದ್ದರೂ ವಯಸ್ಸು ನನಗೆ ಅನುಮತಿಸುವುದಿಲ್ಲ ಎಂದು ಖಚಿತವಿದೆ" ಎಂದು ಮೇರಿ ಕೋಮ್ ಹೇಳಿದ್ದಾರೆ.

"ಬಾಕ್ಸರ್‌ಗಳಿಗೆ ವಯಸ್ಸಿನ ಮಿತಿ 40ಕ್ಕೆ ಸೀಮಿತವಾಗಿದೆ. ಅದು 41ರ ವಯಸ್ಸಿನ ವರೆಗೂ ಮುಂದುವರಿಯಬಹುದು" ಎಂದು ಮೇರಿ ಕೋಮ್ ತನ್ನ ಹೇಳಿಕೆಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಮೂಲಕ ಟೋಕಿಯೋ ಬಳಿಕ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದಿರಲು ಕಾರಣವನ್ನೂ ತಿಳಿಸಿದ್ದಾರೆ.

'ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್‌'ಗೆ ಬಲಿಯಾದ ಗುಣತಿಲಕ: ವೈರಲ್ ವಿಡಿಯೋ'ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್‌'ಗೆ ಬಲಿಯಾದ ಗುಣತಿಲಕ: ವೈರಲ್ ವಿಡಿಯೋ

"ಯಾವುದೇ ಕ್ರೀಡಾಪಟುವಿಗೆ ಒಲಿಂಪಿಕ್ಸ್ ಎಂಬುದು ಒಂದು ದೊಡ್ಡ ವೇದಿಕೆ. ಇದರಲ್ಲಿ ಭಾಗಿಯಾಗುವುದು ಹಾಗೂ ಪದಕವನ್ನು ಗೆಲ್ಲುವುದು ಪ್ರತಿ ಕ್ರೀಡಾಪಟುವಿನ ಕನಸಾಗಿದೆ. ಅದು ಬದುಕನ್ನು ಬದಲಾಯಿಸಿಬಿಡುತ್ತದೆ" ಎಂದು ಮೇರಿ ಕೋಮ್ ಹೇಳಿದ್ದಾರೆ.

Story first published: Thursday, March 11, 2021, 16:55 [IST]
Other articles published on Mar 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X