ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೊತೆಯಾಗಿ ಕ್ರಿಕೆಟ್ ಆಡಿ ಅಚ್ಚರಿ ಮೂಡಿಸಿದ್ದ 10 ಅವಳಿ ಸಹೋದರರು!

10 pair of twins who have played cricket together

ಬೆಂಗಳೂರು, ಏಪ್ರಿಲ್ 11: ಕ್ರಿಕೆಟ್‌ ಮೈದಾನ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದಿದೆ. ಅಪ್ಪ ಮಿಂಚಿದ ಅದೇ ತಂಡದಲ್ಲಿ ಮಗ ಗಮನ ಸೆಳೆದಿದ್ದು, ಗಂಡ-ಹೆಂಡತಿ ಇಬ್ಬರೂ ಕ್ರಿಕೆಟ್‌ ವೃತ್ತಿ ಬದುಕನ್ನು ಆರಿಸಿಕೊಂಡಿದ್ದು, ಖ್ಯಾತ ಕ್ರಿಕೆಟಿಗನೊಬ್ಬ ಒಬ್ಬನೇ ಬೌಲರ್‌ಗೆ ಮತ್ತೆ ಮತ್ತೆ ವಿಕೆಟ್ ಒಪ್ಪಿಸಿದ್ದು, ಸತತ ಸೊನ್ನೆ ರನ್‌ಗೆ ಔಟಾಗಿದ್ದು, ಬೋರು ಬಿದ್ದೋಗುವಂತ ಸುಧೀರ್ಘ ಇನ್ನಿಂಗ್ಸ್‌ ಆಡಿದ್ದು ಇಂಥದ್ದೆಲ್ಲ ಸಾಕಷ್ಟು ಇಂಥ ಘಟನಾವಳಿಗಳು ಕ್ರಿಕೆಟ್‌ನಲ್ಲಿ ಕಾಣ ಸಿಕ್ಕಿದ್ದಿದೆ.

ತಾನು ಎದುರಿಸಿದ ಅತೀ ಕಷ್ಟಕರ ಓವರ್‌ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋತಾನು ಎದುರಿಸಿದ ಅತೀ ಕಷ್ಟಕರ ಓವರ್‌ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನೇಕ ಸಹೋದರರ ದಾಖಲೆಗಳೂ ಕೆದಕಿದರೆ ಬಹಳಷ್ಟು ಸಿಕ್ಕುತ್ತವೆ. ಅದರಲ್ಲೂ ಕ್ರಿಕೆಟ್‌ ರಂಗದಲ್ಲಿ ಮಿನುಗಿದ ಅವಳಿ ಸಹೋದರರ ಕತೆಗಳು ಇನ್ನಷ್ಟು ಕುತೂಹಲಕಾರಿಯಾಗಿವೆ.

ನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತುನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತು

ಕ್ರಿಕೆಟ್‌ ರಂಗದಲ್ಲಿ ಮಿನುಗಿದ, ಕೇಳಿದಾಗ ನಿಮಗೆ ಅಚ್ಚರಿ ಮೂಡಿಸುವ ಖ್ಯಾತ 10 ಅವಳಿ ಸಹೋದರರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1. ವಾ ಸಹೋದರರು

1. ವಾ ಸಹೋದರರು

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಮತ್ತು ಅವರ ಸಹೋದರ ಮಾರ್ಕ್ ವಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೊತೆಯಾಗಿ ಆಡಿದ ಅವಳಿ ಸಹೋದರರಿಗೆ ಉತ್ತಮ ಉದಾಹರಣೆ. ಇಬ್ಬರೂ ಸೇರಿ ಒಟ್ಟಿಗೆ 35000 ಅಂತಾರಾಷ್ಟ್ರೀಯ ರನ್ ಕಲೆ ಹಾಕಿದ್ದಾರೆ. ಅಲ್ಲದೆ ಎಲ್ಲಾ ಮಾದರಿಯ ಕ್ರಿಕೆಟ್ ಕೂಡ ಸೇರಿ ಇಬ್ಬರೂ ಒಟ್ಟಿಗೆ 73 ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲ, 400+ ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಮುರಿದ ಪ್ರಚಂಡ ಸಹೋದರರಿವರು.

2. ಶೆವಿಲ್ಸ್ ಸಿಸ್ಟರ್ಸ್

2. ಶೆವಿಲ್ಸ್ ಸಿಸ್ಟರ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಟ್ವಿನ್ಸ್ ಸಹೋದರಿಯರು ಶೆವಿಲ್ಸ್ ಸಹೋದರಿಯರು. ಫೆರ್ನಿ, ಐರೀನ್ ಮತ್ತು ಎಸ್ಸಿ ಮೂವರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದರು. 1934-35ರಲ್ಲಿ ಇಂಗ್ಲೆಂಡ್ ವಿರುದ್ಧ ಮಹಿಳೆಯರ ಟೆಸ್ಟ್ ಉದ್ಘಾಟನಾ ಪಂದ್ಯದಲ್ಲಿ ಅತ್ಯುತ್ತಮ ಆಟವಾಡಿದ್ದರು. ಫೆರ್ನಿ ವೇಗದ ಬೌಲರ್ ಆಗಿದ್ದರೆ, ಐರೀನ್ ವಿಕೆಟ್ ಕೀಪರ್ ಆಗಿದ್ದರು. ಕೊನೇ ಸಹೋದರಿ ಎಸ್ಸಿ ಸರಣಿಯಲ್ಲಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

3. ಮಾರ್ಷಲ್ಸ್ ಬ್ರದರ್ಸ್

3. ಮಾರ್ಷಲ್ಸ್ ಬ್ರದರ್ಸ್

ಪುರುಷರ ಕ್ರಿಕೆಟ್‌ ಮೊದಲ ಐಡೆಂಟಿಕಲ್ ಟ್ವಿನ್ಸ್ ನ್ಯೂಜಿಲೆಂಡ್‌ನ ಹಮೀಶ್ ಮಾರ್ಷಲ್ ಮತ್ತು ಜೇಮ್ಸ್ ಮಾರ್ಷಲ್. ಮಾರ್ಚ್ 2005ರಲ್ಲಿ ಈಡನ್ ಪಾರ್ಕ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಬ್ಬರೂ ಜೊತೆಯಾಗಿ ಆಡಿದ್ದರು. ನೋಡೋಕೆ ಇಬ್ಬರೂ ಒಂದೇ ಥರ ಇದ್ದಿದ್ದರಿಂದ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್‌ಗೆ ಇಬ್ಬರಲ್ಲಿ ಒಬ್ಬರನ್ನು ಗುರುತಿಸುವುದು ಕಷ್ಟವಾಗಿತ್ತಂತೆ.

4. ಬೆಡ್ಸರ್ಸ್ ಟ್ವಿನ್ಸ್

4. ಬೆಡ್ಸರ್ಸ್ ಟ್ವಿನ್ಸ್

ಇಂಗ್ಲೆಂಡ್‌ನ ಬೆಡ್ಸರ್ಸ್ ಸಹೋದರರು ಕ್ರೀಡಾಕ್ಷೇತ್ರದಲ್ಲೇ ಹೆಚ್ಚು ಜನಪ್ರಿಯ ಟ್ವಿನ್ಸ್ ಆಗಿ ಗುರುತಿಸಿಕೊಂಡಿದ್ದರು. ಎರಿಕ್ ಮತ್ತು ಅಲೆಕ್ ಬೆಡ್ಸರ್ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ತಂಡ ಸರ್ರೆ ಪರ ಸುಮಾರು 15 ವರ್ಷಗಳ ಕಾಲ ಆಡಿದ್ದರು. ಅಲೆಕ್ ಬಲಗೈ ಮಧ್ಯಮವೇಗಿದ್ದರೆ, ಎರಿಕ್ ಬಲಗೈ ಆಫ್‌ ಬ್ರೇಕ್ ಸ್ಪಿನ್ನರ್ ಆಗಿದ್ದರು. ಇಬ್ಬರೂ ಚೆನ್ನಾಗಿ ಬ್ಯಾಟಿಂಗ್ ಕೂಡ ಮಾಡುತ್ತಿದ್ದರು.

5. ದಕ್ಷಿಣ ಆಫ್ರಿಕಾದ ಬೆಡ್ಸರ್ಸ್

5. ದಕ್ಷಿಣ ಆಫ್ರಿಕಾದ ಬೆಡ್ಸರ್ಸ್

ಇಂಗ್ಲೆಂಡ್‌ ಬೆಡ್ಸರ್ಸ್ ಮಾತ್ರ ಕ್ರಿಕೆಟ್ ಜಗತ್ತಿನ ಬೆಡ್ಸರ್ಸ್ ಟ್ವಿನ್ಸ್ ಅಲ್ಲ; ದಕ್ಷಿಣ ಆಫ್ರಿಕಾದ ಈಸ್ಟ್ ಲಂಡನ್‌ನಲ್ಲೂ ಬೆಡ್ಸರ್ಸ್ ಸಹೋದರರ ಜೋಡಿಯಿತ್ತು. ಇಬ್ಬರೂ ಜನಿಸಿದ್ದು 1948ರಲ್ಲಿ. ಗಮ್ಮತ್ತೆಂದರೆ ಈ ಟ್ವಿನ್ಸ್ ಸಹೋದದರ ಹೆಸರೂ ಕೂಡ ಅಲೆಕ್, ಎರಿಕ್ ಎಂದು!. ಕ್ರಿಕೆಟ್‌ನಲ್ಲಿ ಮಿಂಚಿದ್ದ ಅವಳಿ ಸಹೋದರರ ಹೆಸರನ್ನು ಅಲೆಕ್, ಎರಿಕ್ ಹೆತ್ತವರು ಕಾಕತಾಳೀಯವಾಗಿ ತಮ್ಮ ಮಕ್ಕಳಿಗೂ ಇಟ್ಟಿದ್ದಾಗಿತ್ತು, ಆದರೆ ಈ ಸಹೋದದರೂ ಕ್ರಿಕೆಟ್‌ ದಾರಿ ತುಳಿದಾಗ ಸ್ವತಃ ಅವರ ಅಪ್ಪ-ಅಮ್ಮಂದಿರೇ ಅಚ್ಚರಿಗೊಂಡಿದ್ದರಂತೆ.

6. ಡೆಂಟನ್ಸ್ ಬ್ರದರ್ಸ್

6. ಡೆಂಟನ್ಸ್ ಬ್ರದರ್ಸ್

ಇಲ್ಲಿ ಇಂಗ್ಲೆಂಡ್‌ನ ಇನ್ನಿಬ್ಬರು ಟ್ವಿನ್ಸ್‌ನ ಬಗ್ಗೆ ಮಾಹಿತಿಯಿದೆ. ಇವರ ಹೆಸರು ಬಿಲ್ಲಿ ಮತ್ತು ಜಾನ್ ಡೆಂಟನ್ಸ್ ಅಂತ. ಹುಟ್ಟಿದ್ದು ನಾರ್ತಂಪ್ಟನ್ಶೈರ್‌ನಲ್ಲಿ. ಕೌಂಟಿ ತಂಡದಲ್ಲಿ ಸುಮಾರು 100 ಪಂದ್ಯಗಳನ್ನಾಡಿದ್ದಾರೆ. ನಾರ್ಥಂಪ್ಟನ್‌ಶೈರ್ ಕೌಂಟಿ ತಂಡದಲ್ಲಿ ಪರಿಣಾಮಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಬಿಲ್ಲಿ ಮತ್ತು ಜಾನ್ ಗುರುತಿಸಿಕೊಂಡಿದ್ದರು.

7. ರಿಪ್ಪನ್ಸ್ ಸಹೋದದರು

7. ರಿಪ್ಪನ್ಸ್ ಸಹೋದದರು

ಡಡ್ಲಿ ರಿಪ್ಪನ್ಸ್ ಮತ್ತು ಸಿಡ್ನಿ ರಿಪ್ಪನ್ಸ್ ಜನಿಸಿದ್ದು ಕೆನ್ನಿಂಗ್ಟನ್‌ನಲ್ಲಿ, ಆದರೆ ಆಡಿದ್ದು ಮಾತ್ರ ಸಮರ್ಸೆಟ್ ಇಂಗ್ಲಿಷ್ ಕೌಂಟಿ ಲೀಗ್‌ನಲ್ಲಿ. ಇಬ್ಬರೂ ಕ್ರಿಕೆಟರ್‌ಗಳು ಆಟದಲ್ಲಿ ತಂಥದ್ದೇನೂ ಹೆಸರು ಮಾಡಲಿಲ್ಲ; ಆದರೆ ಇಬ್ಬರೂ ಜೊತೆಯಾಗಿ ಒಂದೇ ತಂಡದಲ್ಲಿ ಆಡಿದ್ದರಿಂದ ದಾಖಲೆ ಪುಸ್ತಕದಲ್ಲಂತೂ ಹೆಸರು ಗಿಟ್ಟಿಸಿಕೊಂಡರು.

8. ಮಾತಂಬನಾಡ್ಜೋ ಸೋದರರು

8. ಮಾತಂಬನಾಡ್ಜೋ ಸೋದರರು

ಎವರ್ಟನ್ ಜ್ವಿಕೊಂಬೆರೊ ಮಾತಂಬನಾಡ್ಜೊ ಅಂಥ ವಿಚಿತ್ರ ಹೆಸರನ್ನಿಟ್ಟುಕೊಂಡಿದ್ದ ಈ ಕ್ರಿಕೆಟರ್‌ನ ಹೆಸರನ್ನು ಉಚ್ಛರಿಸೋದು ಕೊಂಚ ಕಷ್ಟವೆ. ಇವರು ಜಿಂಬಾಬ್ವೆ ಪರ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದರು. ಇವರದ್ದೇ ತದ್ರೂಪದಂತಿದ್ದ ಇವರ ಅವಳಿ ಸಹೋದರ ಡಾರ್ಲಿಂಗ್ಟನ್ ಮಾತಂಬನಾಡ್ಜೋ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಡಲಿಲ್ಲ, ಆದರೆ ದೇಸಿ ಕ್ರಿಕೆಟ್‌ನಲ್ಲಿ ಆಡಿದ್ದರು.

9. ಟೇಲರ್ ಸಹೋದದರು

9. ಟೇಲರ್ ಸಹೋದದರು

ಮೈಕ್ ಟೇಲರ್ ಮತ್ತು ಡೆರಿಕ್ ಟೇಲರ್ ಜನಿಸಿದ್ದು ಬಕಿಂಗ್ಹ್ಯಾಮ್ಶೈರ್ (ಸೌತ್ ಈಸ್ಟ್ ಇಂಗ್ಲೆಂಡ್)ನಲ್ಲಿ. ಇಬ್ಬರೂ ಸುದೀರ್ಘ ಕೌಂಟಿ ಕ್ರಿಕೆಟ್ ಅನುಭವ ಹೊಂದಿದ್ದರು. ಮಧ್ಯಮ ವೇಗಿಯಾಗಿದ್ದ ಮೈಕ್ ನಾಟಿಂಗ್‌ಹ್ಯಾಮ್‌ಶೈರ್ ಮತ್ತು ಹ್ಯಾಂಪ್‌ಶೈರ್‌ನಲ್ಲಿ ಆಲ್ ರೌಂಡರ್ ಕೂಡ ಹೌದು. ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿದ್ದ ಡೆರಿಕ್ ಸರ್ರೆ ಮತ್ತು ಸಮರ್ಸೆಟ್ ಪರ ಆಡಿದ್ದರು.

10. ಸಿಗ್ನಲ್ ಸಿಸ್ಟರ್ಸ್

10. ಸಿಗ್ನಲ್ ಸಿಸ್ಟರ್ಸ್

ನ್ಯೂಜಿಲೆಂಡ್‌ನಲ್ಲಿ ಆಡಿದ್ದ ಮೊದಲ ಅವಳಿ ಸಹೋದರಿಯರ ಜೋಡಿ ಲಿಝ್ ಮತ್ತು ರೋಸ್ ಸಿಗ್ನಲ್. 1984ರಲ್ಲಿ ಇಬ್ಬರೂ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರವಾಸ ಬೆಳೆಸಿದ್ದರು. ಹೆಡ್ಡಿಂಗ್ಲಿಯಲ್ಲಿ ಮೊದಲ ಟೆಸ್ಟ್ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ರೋಸ್ 0, 8 ರನ್ ಗಳಿಸಿದ್ದರು. ಆದರೆ ಆ ಬಳಿಕ ರೋಸ್ ಕ್ರಿಕೆಟ್ ಆಡಲೇಇಲ್ಲ. ಲಿಝ್ ಮಾತ್ರ ತನ್ನ ಸಹೋದರಿಗಿಂತ 5 ಹೆಚ್ಚಿಗೆ ಪಂದ್ಯಗಳನ್ನಾಡಿದರು.

Story first published: Sunday, April 12, 2020, 10:20 [IST]
Other articles published on Apr 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X