ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!

Harshal patel and Bhuvaneshwar kumar

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಹೀನಾಯ ಸೋಲನುಭವಿಸಿದ ನಂತರ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿದೆ. ಎರಡೂ ಡೆತ್ ಓವರ್‌ಗಳ ಕಳಪೆ ಪ್ರದರ್ಶನವನ್ನು ಅನೇಕ ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಪಹಾಸ್ಯ ಮಾಡಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಾಂಗರೂಗಳ ವಿರುದ್ಧ ವೈಯಕ್ತಿಕ ಗರಿಷ್ಠ ಸ್ಕೋರ್ ಕಲೆಹಾಕಿತು. 208ರನ್‌ಗಳ ಮೊತ್ತ ದಾಖಲಿಸಿದ್ರೂ ಸಹ ಭಾರತ ಗೆಲ್ಲಲು ವಿಫಲವಾಗಿ ಸೋಲಿಗೆ ಶರಣಾಗಿದೆ.

ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನ ಧ್ವಂಸ ಮಾಡಿದ ಆಸಿಸ್

ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನ ಧ್ವಂಸ ಮಾಡಿದ ಆಸಿಸ್

ಆಸೀಸ್ ನಾಲ್ಕು ಎಸೆತಗಳು ಮತ್ತು ನಾಲ್ಕು ವಿಕೆಟ್‌ಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ನೀಡಿದ 209 ರನ್ ಗುರಿಯನ್ನು ದಾಟಿತು. ಈ ಸೋಲಿಗೆ ತನ್ನನ್ನು ತಾನೇ ದೂಷಿಸುವುದನ್ನು ಬಿಟ್ಟು ಭಾರತಕ್ಕೆ ಬೇರೇನೂ ಇಲ್ಲ. ಏಕೆಂದರೆ ಭಾರತದ ಬೌಲರ್‌ಗಳ ಪ್ರದರ್ಶನ ತುಂಬಾ ದಯನೀಯವಾಗಿತ್ತು. ಅಕ್ಷರ್ ಪಟೇಲ್ ಹೊರತುಪಡಿಸಿ, ಬೌಲಿಂಗ್ ಮಾಡಿದ ಇತರ ಐವರು ರನ್ ಬಿಟ್ಟುಕೊಡುವಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿದ್ದರು. ಅವರೆಲ್ಲರೂ 10ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು.

ಟೀಂ ಇಂಡಿಯಾ ಬೌಲರ್ಸ್ ಎಕಾನಮಿ!

ಟೀಂ ಇಂಡಿಯಾ ಬೌಲರ್ಸ್ ಎಕಾನಮಿ!

ಉಮೇಶ್ ಯಾದವ್ (13.5), ಭುವಿ (13), ಯುಜ್ವೇಂದ್ರ ಚಾಹಲ್ (12.60), ಹರ್ಷಲ್ (12.20) ಮತ್ತು ಹಾರ್ದಿಕ್ ಪಾಂಡ್ಯ (11) ಎಕಾನಮಿ ದರಗಳನ್ನ ಹೊಂದಿದ್ದಾರೆ. ಭುವಿ ಆಸೀಸ್ 17ನೇ ಓವರ್‌ನಲ್ಲಿ 15 ರನ್ ಮತ್ತು 19ನೇ ಓವರ್‌ನಲ್ಲಿ 16 ರನ್ ನೀಡಿದ್ರು. ಹರ್ಷಲ್ ಪಟೇಲ್ 18ನೇ ಓವರ್‌ನಲ್ಲಿ ಆಸೀಸ್ 22 ರನ್ ಗಳಿಸಿತು. ಭುವಿ ನಾಲ್ಕು ಓವರ್‌ಗಳಲ್ಲಿ ವಿಕೆಟ್ ರಹಿತ 52 ರನ್ ಮತ್ತು ಹರ್ಷಲ್ ನಾಲ್ಕು ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 49 ರನ್ ಗಳಿಸಿದರು. ಹೀಗಾಗಿ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ದಾಳಿ ನಡೆಸಿದರು.

Ind Vs Aus T20: ಭುವನೇಶ್ವರ್ ಕುಮಾರ್‌ಗೆ 19ನೇ ಓವರ್‌ ನೀಡಿದ್ಯಾಕೆ ಎಂದ ಅಭಿಮಾನಿಗಳು

48 ಎಸೆತ 101 ರನ್ ನೀಡಿದ ಭುವಿ ಮತ್ತು ಹರ್ಷಲ್

ಭುವಿ ಮತ್ತು ಹರ್ಷಲ್ ಒಟ್ಟಾಗಿ 48 ಎಸೆತಗಳಲ್ಲಿ 101 ರನ್ ನೀಡಿದ್ದು ಒಂದು ವಿಕೆಟ್ ಪಡೆದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪಂದ್ಯ ಶ್ರೇಷ್ಠ ಎಂದು ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅವರನ್ನು ಲೇವಡಿ ಮಾಡಿದ್ದಾರೆ.

ಈ ಹೇಳಿಕೆಯು ಭುವಿ ಅವರ 24 ಎಸೆತಗಳಲ್ಲಿ 52 ಮತ್ತು ಹರ್ಷಲ್ ಅವರ 24 ಎಸೆತಗಳಲ್ಲಿ 49 ರನ್‌ಗಳ ಜೊತೆಯಲ್ಲಿತ್ತು.

ಟಿ20 ವಿಶ್ವಕಪ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಬೌಲಿಂಗ್ ಮಾಡುತ್ತಿದ್ದಾರೆ ಎಂದು ತಿಳಿದರೆ ನಾನು ಪಂದ್ಯವನ್ನೇ ನೋಡುವುದಿಲ್ಲ. ಜೀವನದಲ್ಲಿ 99 ನೇ ಪಾಠ- ಭುವನೇಶ್ವರ್ ಕುಮಾರ್‌ಗೆ 19 ನೇ ಓವರ್ ಅನ್ನು ಎಂದಿಗೂ ನೀಡಬೇಡಿ ಎಂದು ಬಳಕೆದಾರರು ಅಪಹಾಸ್ಯ ಮಾಡಿದ್ದಾರೆ.

ಅರ್ಧಶತಕ ದಾಖಲಿಸಿದ ಭುವನೇಶ್ವರ್‌ಕುಮಾರ್

ಅರ್ಧಶತಕ ದಾಖಲಿಸಿದ ಭುವನೇಶ್ವರ್‌ಕುಮಾರ್

ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ (52*) ಭರ್ಜರಿ ಅರ್ಧಶತಕ ದಾಖಲಿಸಿದರು. ಅವರು ತುಂಬಾ ಚೆನ್ನಾಗಿ ಆಡಿದ್ದಾರೆ ಎಂದು ಬಳಕೆದಾರನು ತಮಾಷೆ ಮಾಡಿದ್ದಾರೆ.

ಭಾರತ ತಂಡವು ಭುವನೇಶ್ವರ್ ಕುಮಾರ್ ಅವರನ್ನು ಡೆತ್ ಓವರ್‌ಗಳಲ್ಲಿ ಏಕೆ ಪರೀಕ್ಷಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಡೆತ್ ಓವರ್‌ಗಳಲ್ಲಿ ಅವರ ಪ್ರದರ್ಶನ ಯಾವಾಗಲೂ ಕಳಪೆಯಾಗಿತ್ತು. 19ನೇ ಓವರ್ ಹೇಗೆ ಅವರಿಗೆ ನೀಡಲಾಗುತ್ತಿದೆ ಎಂಬುದನ್ನು ನಾವು ಊಹಿಸುವುದು ಕಷ್ಟಸಾಧ್ಯ ಎಂದು ನಾಯಕ ರೋಹಿತ್ ಶರ್ಮಾ ವಿರುದ್ಧವೂ ಬಳಕೆದಾರರು ಟೀಕಿಸಿದ್ದಾರೆ.

ಕಳೆದ 1 ವರ್ಷದಲ್ಲಿ ಕಾಮೆಂಟರಿ ಜೊತೆಗೆ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ 3 ಪ್ಲೇಯರ್ಸ್‌

19ನೇ ಓವರ್ ಸ್ಪೆಷಲಿಸ್ಟ್ ಭುವಿ ಎಂದು ಲೇವಡಿ

ಭುವನೇಶ್ವರ್ ಕುಮಾರ್ ಎದುರಾಳಿ ತಂಡದ 19ನೇ ಓವರ್ ಸ್ಪೆಷಲಿಸ್ಟ್ ಆಗಿದ್ದಾರೆ ಎಂದು ಸಹ ನೆಟ್ಟಿಗರು ತಮಾಷೆ ಮಾಡಿದ್ದಾರೆ. ರೋಹಿತ್ ಶರ್ಮಾ ಭುವನೇಶ್ವರ್ ಕುಮಾರ್‌ಗೆ ಏಕೆ ಡೆತ್ ಓವರ್ ನೀಡುತ್ತಿದ್ದಾರೆ ಎಂಬುದನ್ನು ನೀವು ಕಂಡುಹಿಡಿಯಬಹುದೇ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಮತ್ತೊಮ್ಮೆ ಭುವನೇಶ್ವರ್ ಕುಮಾರ್ಗೆ ಡೆತ್ ಓವರ್ ನೀಡದಿರಿ, ಏಕೆಂದರೆ ಅವರು ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ ಎಂದು ಬೇಸರಗೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Story first published: Wednesday, September 21, 2022, 8:50 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X