ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

15 ವರ್ಷಗಳ ಹಿಂದೆ ಇದೇ ದಿನ ಪಾಕಿಸ್ತಾನವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾ

2007 ಸೆಪ್ಟೆಂಬರ್ 24 ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲಾಗದ ದಿನ. ಅದರಲ್ಲೂ ಭಾರತ-ಪಾಕಿಸ್ತಾನದ ಅಭಿಮಾನಿಗಳಂತೂ ಎಂದಿಗೂ ಈ ದಿನವನ್ನು ಮರೆಯಲಾರರು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಇದೇ ದಿನ ಮೊದಲನೇ ಬಾರಿ ನಡೆದ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕವಾಗಿ 5 ರನ್‌ಗಳ ಜಯ ಗಳಿಸಿ ಚಾಂಪಿಯನ್ ಎನಿಸಿಕೊಂಡಿತ್ತು.

ಸೆಪ್ಟೆಂಬರ್ 25ರಂದು ಎಂಎಸ್ ಧೋನಿ ಮಹತ್ವದ ಘೋಷಣೆ: ತಲೆ ಕೆಡಿಸಿಕೊಂಡ ಅಭಿಮಾನಿಗಳುಸೆಪ್ಟೆಂಬರ್ 25ರಂದು ಎಂಎಸ್ ಧೋನಿ ಮಹತ್ವದ ಘೋಷಣೆ: ತಲೆ ಕೆಡಿಸಿಕೊಂಡ ಅಭಿಮಾನಿಗಳು

ಭಾರತ ಮೊದಲ ಟಿ20 ವಿಶ್ವಕಪ್ ಎತ್ತಿಹಿಡಿದ ಸಂಭ್ರಮಕ್ಕೆ ಇಂದಿಗೆ 15 ವರ್ಷಗಳು. 5 ವರ್ಷಗಳ ಹಿಂದೆ, ಉದ್ದ ಕೂದಲಿನ ಮಹೇಂದ್ರ ಸಿಂಗ್ ಧೋನಿ ಪಂದ್ಯಾವಳಿಯ ಉದ್ಘಾಟನಾ ಋತುವಿನಲ್ಲಿ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿ ಹಿಡಿದಿದ್ದು ಭಾರತೀಯ ಅಭಿಮಾನಿಗಳಿಗೆ ಇನ್ನೂ ತಾಜಾ ನೆನಪು. ಅದರಲ್ಲೂ ದಿಗ್ಗಜ ಕ್ರಿಕೆಟಿಗರನ್ನು ಹೊರತಪಡಿಸಿ ಯಾವುದೇ ನಿರೀಕ್ಷೆ ಇಲ್ಲದೆ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಟೀಂ ಇಂಡಿಯಾ ಕಪ್ ಗೆದ್ದದ್ದು ಮಾತ್ರ ಇತಿಹಾಸ.

ರೋಹಿತ್ ಶರ್ಮಾ ನಾಯಕತ್ವದ ಭಾರತವು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ. ಅಂದಿನ ತಂಡಲ್ಲಿದ್ದ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ 2022ರ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

ಫೈನಲ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿ

ಫೈನಲ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿ

24 ಸೆಪ್ಟೆಂಬರ್ 2007 ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಎದುರಾಳಿಯಾಗಿದ್ದು ಬಲಿಷ್ಠ ಪಾಕಿಸ್ತಾನ ತಂಡ.

ಸಾಂಪ್ರದಾಯಿಕ ಎದುರಾಳಿಗಳು ಪ್ರತಿಷ್ಠಿತ ಕದನದಲ್ಲಿ ಸಮಬಲದಲ್ಲಿ ಹೋರಾಡಿದವು. ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ರೋಚಕವಾಗಿ ಕೊನೆಗೊಂಡ ಕೆಲವೇ ಮುಖ್ಯ ಪಂದ್ಯಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಅಂತಿಮ ಓವರ್ ವರೆಗೆ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಊಹಿಸುವುದು ಕೂಡ ಕಷ್ಟವಾಗಿತ್ತು. ಆದರೆ, ಅಂತಿಮ ಓವರ್ ನಲ್ಲಿ ಭಾರತ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿತು.

Ind Vs Aus T20: ಈ ಆಟಗಾರ ಟಿ20 ವಿಶ್ವಕಪ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದಾನೆ

 ಒತ್ತಡದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಗಂಭೀರ್

ಒತ್ತಡದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಗಂಭೀರ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಗೌತಮ್ ಗಂಭೀರ್ ಅವರ ಶ್ಲಾಘನೀಯ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ನಿಗದಿತ 20 ಓವರ್ ಗಳಲ್ಲಿ 157 ರನ್ ಕಲೆಹಾಕಿತು. ಗೌತಮ್ ಗಂಭೀರ್ 54 ಎಸೆತಗಳಲ್ಲಿ 75 ರನ್ ಗಳಿಸಿ ಭಾರತ ಉತ್ತಮ ರನ್ ಕಲೆ ಹಾಕಲು ಕಾರಣವಾದರು.

ಗಂಭೀರ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಯೂಸುಫ್ ಪಠಾಣ್ (15), ರಾಬಿನ್ ಉತ್ತಪ್ಪ (8), ಯುವರಾಜ್ ಸಿಂಗ್ (14), ಎಂಎಸ್‌ ಧೋನಿ (6) ರನ್ ಗಳಿಸಿ ವೈಫಲ್ಯ ಅನುಭವಿಸಿದರೆ. ಅಂತಿಮ ಓವರ್ ಗಳಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಅಂತಿಮವಾಗಿ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಪಾಕಿಸ್ತಾನದ ವೇಗಿ ಉಮರ್ ಗುಲ್ ಭಾರತದ ಮಧ್ಯಮ ಕ್ರಮಾಂಕವನ್ನು ಕಿತ್ತು ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಕುಸಿದ ಪಾಕಿಸ್ತಾನಕ್ಕೆ ಆಸರೆಯಾದ ಮಿಸ್ಬಾ

ಕುಸಿದ ಪಾಕಿಸ್ತಾನಕ್ಕೆ ಆಸರೆಯಾದ ಮಿಸ್ಬಾ

ಗೆಲುವಿಗಾಗಿ 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಮೊಹಮ್ಮದ್ ಹಫೀಜ್ ಮೊದಲ ಓವರ್‌ನಲ್ಲಿ ಆರ್‌ಪಿ ಸಿಂಗ್ ಎಸೆತದಲ್ಲಿ ಔಟಾದರು. ನಂತರ, ಇಮ್ರಾನ್ ನಜೀರ್, ಯೂನಿಸ್ ಖಾನ್ ಮತ್ತು ಮಿಸ್ಬಾ-ಉಲ್-ಹಕ್ ಅವರ ಸಾಮೂಹಿಕ ಆಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು.

ಆರ್‌ಪಿ ಸಿಂಗ್ ಮತ್ತು ಇರ್ಫಾನ್ ಪಠಾಣ್ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಆಟಗಾರರನ್ನು ಬೇಗನೇ ಔಟ್ ಮಾಡಿದರು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರು, ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಮಿಸ್ಬಾ ಆಟವನ್ನು ಕೊನೆಯವರೆಗೂ ತೆಗೆದುಕೊಂಡು ಹೋದರು.

ಎಂದಿಗೂ ಮರೆಯಲಾಗದ ಆ ಕೊನೆಯ ಓವರ್

ಎಂದಿಗೂ ಮರೆಯಲಾಗದ ಆ ಕೊನೆಯ ಓವರ್

ಮಿಸ್ಬಾ ಉಲ್ ಹಕ್ ಉತ್ತಮ ಆಟದ ನೆರವಿನಿಂದ ಪಾಕಿಸ್ತಾನ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಪಾಕಿಸ್ತಾನಕ್ಕೆ ಗೆಲ್ಲಲು ಅಂತಿಮ ಓವರ್ ನಲ್ಲಿ 13 ರನ್ ಅಗತ್ಯವಿತ್ತು. ನಾಯಕ ಎಂ.ಎಸ್‌ ಧೋನಿ ಅಂತಹ ಪ್ರಮುಖ ಪಂದ್ಯದಲ್ಲಿ ಹೊಸ ಆಟಗಾರ ಜೋಗಿಂದರ್ ಶರ್ಮಾಗೆ ಬೌಲಿಂಗ್ ಮಾಡುವ ಜವಾಬ್ದಾರಿ ನೀಡಿದರು.

ಇದು ಇಲ್ಲಿಯವರೆಗೆ ಆಟದ ಇತಿಹಾಸದಲ್ಲಿ ಅತಿದೊಡ್ಡ ಜೂಜು ಎಂದು ಪರಿಗಣಿಸಲ್ಪಟ್ಟಿದೆ. ಅಗಾಧ ಒತ್ತಡದಲ್ಲಿದ್ದ ಜೋಗಿಂದರ್ ಶರ್ಮಾ ಮೊದಲ ಎಸೆತವನ್ನು ಆಫ್ ಸೈಡ್ ನಲ್ಲಿ ವೈಡ್ ಬೌಲ್ ಮಾಡಿದರು. ಎರಡನೇ ಎಸೆತವನ್ನು ಸಿಕ್ಸರ್ ಬಾರಿಸಿದ ಮಿಸ್ಬಾ ಪಾಕಿಸ್ತಾನವನ್ನು ಜಯದ ಸಮೀಪಕ್ಕೆ ತಂದು ನಿಲ್ಲಿಸಿದರು. ಡಗೌಟ್‌ನಲ್ಲಿರುವ ಪಾಕಿಸ್ತಾನಿ ಕ್ರಿಕೆಟಿಗರು ವಿಜಯೋತ್ಸವ ಆಚರಿಸಲು ಬಹುತೇಕ ಸಿದ್ಧರಾಗಿದ್ದರು.

ಪಾಕಿಸ್ತಾನಕ್ಕೆ ಗೆಲುವಿಗಾಗಿ 5 ಎಸೆತಗಳಲ್ಲಿ 6 ರನ್ ಅವಶ್ಯಕತೆ ಇತ್ತು. ಕ್ರೀಸ್‌ನಲ್ಲಿ ಲಯ ಕಂಡುಕೊಂಡಿದ್ದ ಮಿಸ್ಬಾ ಉಲ್ ಹಕ್ ಇದ್ದರು, ಭಾರತ ಪಂದ್ಯವನ್ನು ಸೋಲುತ್ತದೆ ಎಂದು ಭಾವಿಸಿದ್ದಾಗಲೆ ಅದ್ಭುತವೊಂದು ನಡೆದಿತ್ತು. ಜೋಗಿಂದರ್ ಶರ್ಮಾ ಎಸೆತವನ್ನು ಸ್ಕೂಪ್ ಮಾಡಲು ಹೋದ ಮಿಸ್ಬಾ ಧೋನಿ ಹೆಣೆದ ಬಲೆಗೆ ಬಿದ್ದಿದ್ದರು.

ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

ಮುಂದೆ ಏನಾಯಿತು ಎಂಬುದು ಇತಿಹಾಸದ ಪುಸ್ತಕಗಳಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿದೆ. ಆ ಕ್ಷಣ ಭಾರತೀಯರ ಮನಸ್ಸಿನಲ್ಲಿ ಎಂದಿಗೂ ಶಾಶ್ವತವಾಗಿದೆ. ಮಿಸ್ಬಾ ಹೊಡೆದ ಬಾಲ್‌ ಅನ್ನು ಕ್ಯಾಚ್ ಹಿಡಿದ ಶ್ರೀಶಾಂತ್ ನಂಬಲಾಗದ ರೀತಿಯಲ್ಲಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.

ಗೆದ್ದೇ ಬಿಟ್ಟೆವು ಎಂದು ಸಂಭ್ರಮಿಸಿದ್ದ ಪಾಕಿಸ್ತಾನ ತಂಡ ಆಟಗಾರರು ಮತ್ತು ಅಭಿಮಾನಿಗಳು ಶಾಕ್‌ನಿಂದ ಹೊರಬರಲು ಸಾಕಷ್ಟು ಸಮಯ ಹಿಡಿಯಿತು. ಈ ಕ್ಯಾಚ್‌ನೊಂದಿಗೆ ಭಾರತವು ಟಿ20 ವಿಶ್ವಕಪ್‌ನಲ್ಲಿ ತನ್ನ ಹೆಸರನ್ನು ಕೆತ್ತಿ ಇಡೀ ದೇಶವನ್ನು ಉನ್ಮಾದಗೊಳಿಸಿತು. ಮಧ್ಯಮ ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದ ಇರ್ಫಾನ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನುಳಿದಂತೆ ಆರ್ ಪಿ ಸಿಂಗ್ ಮೂರು ವಿಕೆಟ್ ಪಡೆದರೆ, ಶರ್ಮಾ 2 ವಿಕೆಟ್ ಪಡೆದು ಪಂದ್ಯ ಮುಗಿಸಿದರು.

Story first published: Saturday, September 24, 2022, 20:39 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X