ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!

16-year-old Shafali Verma scripts record after New Zealand blitz

ಮೆಲ್ಬರ್ನ್, ಫೆಬ್ರವರಿ 27: ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ್ತಿ, ಶೆಫಾಲಿ ವರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಗುರುವಾರ (ಫೆಬ್ರವರಿ 27) ನಡೆದ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದೊಂದಿಗೆ ಶೆಫಾಲಿ ಈ ಸಾಧನೆ ಮೆರೆದಿದ್ದಾರೆ. ವಿಶ್ವಕಪ್ 9ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ ದಾಖಲೆ ಸಾಲಿನಲ್ಲಿ ವರ್ಮಾ ಹೆಸರು ಅಚ್ಚಾಗಿದೆ.

ಐಪಿಎಲ್‌ಗೆ 48 ವರ್ಷದ ಪ್ರವೀಣ್ ತಾಂಬೆ ಅನರ್ಹ: ಖಚಿತಪಡಿಸಿದ ಐಪಿಎಲ್ ಮುಖ್ಯಸ್ಥಐಪಿಎಲ್‌ಗೆ 48 ವರ್ಷದ ಪ್ರವೀಣ್ ತಾಂಬೆ ಅನರ್ಹ: ಖಚಿತಪಡಿಸಿದ ಐಪಿಎಲ್ ಮುಖ್ಯಸ್ಥ

ಮೆಲ್ಬರ್ನ್‌ನ ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಪಂದ್ಯದಲ್ಲಿ, ಕಿವೀಸ್ ವಿರುದ್ಧ ಶೆಫಾಲಿ 34 ಎಸೆತಗಳಿಗೆ 46 ರನ್ ಸಿಡಿಸಿದರು. ಹೀಗಾಗಿ ಸ್ಟ್ರೈಕ್ ರೇಟ್‌ ಸಾಧನೆಗಾಗಿ ಶೆಫಾಲಿ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್‌ಗೆ ಮತ್ತೆ ಡೇವಿಡ್ ವಾರ್ನರ್ ನಾಯಕಐಪಿಎಲ್: ಸನ್ ರೈಸರ್ಸ್ ಹೈದರಾಬಾದ್‌ಗೆ ಮತ್ತೆ ಡೇವಿಡ್ ವಾರ್ನರ್ ನಾಯಕ

ಸದ್ಯ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಟ್ರೈಕ್‌ ದಾಖಲೆ ಸಾಲಿನಲ್ಲಿ ಭಾರತದ ಶೆಫಾಲಿ ವರ್ಮಾ ನಂ.1 ಸ್ಥಾನದಲ್ಲಿದ್ದಾರೆ.

ಶೆಫಾಲಿ ಸ್ಫೋಟಕ ಬ್ಯಾಟಿಂಗ್

ಶೆಫಾಲಿ ಸ್ಫೋಟಕ ಬ್ಯಾಟಿಂಗ್

ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ, ಶೆಫಾಲಿ ವರ್ಮಾ 46 (34 ಎಸೆತ) ರನ್‌ನೊಂದಿಗೆ 20 ಓವರ್‌ನಲ್ಲಿ 8 ವಿಕೆಟ್ ಕಳೆದು 133 ರನ್ ಕಲೆ ಹಾಕಿತ್ತು. ನ್ಯೂಜಿಲೆಂಡ್ ವನಿತೆಯರು, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದು 129 ರನ್ ಗಳಿಸಿ 4 ರನ್‌ನಿಂದ ಸೋಲೊಪ್ಪಿಕೊಂಡರು.

ಟೂರ್ನಿಯಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್

ಟೂರ್ನಿಯಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 3 ಇನ್ನಿಂಗ್ಸ್‌ ಆಡಿರುವ ಶೆಫಾಲಿ, 114 ರನ್‌ನೊಂದಿಗೆ ಅತ್ಯಧಿಕ ರನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಸ್ಟ್ರೈಕ್‌ ರೇಟ್‌ ಗಮನಿಸಿದರೆ ಶೆಫಾಲಿ ಅಗ್ರ ಸ್ಥಾನಕ್ಕೇರುತ್ತಾರೆ. ಎಸ್‌ಆರ್ ಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾದ ಅಲಿಸಾ ಹೀಲಿ (148.89 SR), ಇಂಗ್ಲೆಂಡ್‌ನ ಹೀದರ್ ನೈಟ್ (142.50), ಶೆಫಾಲಿ ವರ್ಮಾ (172.73) ಮೊದಲ 3 ಸ್ಥಾನ ಪಡೆದಿದ್ದಾರೆ.

ಒಟ್ಟಾರೆ ಸ್ಟ್ರೈಕ್‌ರೇಟ್‌ನಲ್ಲೂ ನಂ.1

ಒಟ್ಟಾರೆ ಸ್ಟ್ರೈಕ್‌ರೇಟ್‌ನಲ್ಲೂ ನಂ.1

ವಿಶ್ವಕಪ್ ಟೂರ್ನಿಯಲ್ಲಷ್ಟೇ ಅಲ್ಲ, ಒಟ್ಟರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸ್ಟ್ರೈಕ್‌ರೇಟ್‌ ಗಮನಿಸಿದರೂ ಶೆಫಾಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಸದ್ಯ ಟಿ20ಐನಲ್ಲಿ 438 ರನ್ ಗಳಿಸಿರುವ ವರ್ಮಾ 147.97 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನೆರಡು ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾದ ಕ್ಲೋಯ್ ಟೈರಾನ್ (138.31), ಆಸ್ಟ್ರೇಲಿಯಾದ ಅಲಿಸಾ ಹೀಲಿ (129.66) ಇದ್ದಾರೆ.

ಟೀಮ್ ಇಂಡಿಯಾ ಸತತ 3 ಗೆಲುವು

ಟೀಮ್ ಇಂಡಿಯಾ ಸತತ 3 ಗೆಲುವು

ನ್ಯೂಜಿಲೆಂಡ್‌ ವಿರುದ್ಧದ ಗೆಲುವಿನೊಂದಿಗೆ ಟೀಮ್ ಇಂಡಿಯಾ ವನಿತೆಯರು ಸತತ 3 ಗೆಲುವು ದಾಖಲಿಸಿದಂತಾಗಿದೆ. ಇದಕ್ಕೂ ಮುನ್ನ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ, ಬಾಂಗ್ಲಾದೇಶದ ವಿರುದ್ಧ 18 ರನ್ ಗೆಲುವು, ಆಸ್ಟ್ರೇಲಿಯಾ ವಿರುದ್ಧ 17 ರನ್ ಜಯ ಗಳಿಸಿತ್ತು.

Story first published: Thursday, February 27, 2020, 16:10 [IST]
Other articles published on Feb 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X