ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ರಿವೈಂಡ್: ಪಾಕ್‌ಗೆ ಮುಖಭಂಗ ತಂದಿದ್ದ ವಾರ್ನ್ 4 ವಿಕೆಟ್ ಟ್ರಿಕ್!

1999 World Cup flashback: Shane Warnes four-wicket trick

ನವದೆಹಲಿ, ಮೇ 3: ಅದು ಅಕ್ಷರಶಃ ಶೇನ್ ವಾರ್ನ್ ಪಾಲಿನ ವಿಶ್ವಕಪ್‌ ಕ್ರಿಕೆಟ್ ಅನ್ನಿಸಿತ್ತು. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಕಾಂಗರೂ ನಾಡಿನ ಸ್ಪಿನ್ ದಿಗ್ಗಜ ವಾರ್ನ್, ಪಾಕ್‌ ವಿಶ್ವಕಪ್‌ ಆಸೆಗೆ ತಣ್ಣೀರೆರಚಿದ್ದರು. 1999ರ ವಿಶ್ವಕಪ್ ಹೀರೋ ಅನ್ನಿಸಿದ್ದರು ಶೇನ್ ವಾರ್ನ್.

ಹಸೆಮಣೆ ಏರಲಿದ್ದಾರೆ ಮಹಿಳಾ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ?ಹಸೆಮಣೆ ಏರಲಿದ್ದಾರೆ ಮಹಿಳಾ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ?

ಲಂಡನ್‌ನಲ್ಲಿ ನಡೆದಿದ್ದ ವಿಶ್ವಕಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನದ 4 ಬ್ಯಾಟ್ಸ್ಮನ್‌ಗಳನ್ನು ಪೆವಿಲಿಯನ್‌ಗಟ್ಟಿದ್ದ ಶೇನ್ ವಾರ್ನ್, ಆಸೀಸ್ ಗೆಲುವಿನ ರುವಾರಿಯೆನಿಸಿದ್ದರೆ, ಮತ್ತೊಬ್ಬ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಕೂಡ ಪಾಕ್ ತಂಡವನ್ನು ಕಾಡಿದ್ದರು.

ಮುಂಬೈಗೆ ಸೂಪರ್‌ ಓವರ್‌ ರೋಚಕ ಗೆಲುವು ಮುಖ್ಯವಾಗಿತ್ತು, ಏಕೆಂದರೆ..ಮುಂಬೈಗೆ ಸೂಪರ್‌ ಓವರ್‌ ರೋಚಕ ಗೆಲುವು ಮುಖ್ಯವಾಗಿತ್ತು, ಏಕೆಂದರೆ..

ಸುಮಾರು 20 ವರ್ಷಗಳ ಹಿಂದಿನ ಈ ವಿಶ್ವಕಪ್ ಫೈನಲ್ ಪಂದ್ಯದ ಝಲಕ್ ತೆರೆದಿಡುವ ಪ್ರಯತ್ನ ಇಲ್ಲಿ ಮಾಡಿದ್ದೇವೆ.

ಆಸೀಸ್‌-ಪಾಕ್ ಮುಖಾಮುಖಿ

ಆಸೀಸ್‌-ಪಾಕ್ ಮುಖಾಮುಖಿ

1999 ಜನವರಿ 20 ರಂದು ಇಂಗ್ಲೆಂಡ್‌ನ ಲಂಡನ್‌ನಲ್ಲರುವ ಲಾರ್ಡ್ಸ್ ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಾಸಿಮ್ ಅಕ್ರಮ್ ನಾಯಕತ್ವದ ಪಾಕಿಸ್ತಾನ ಮತ್ತು ಸ್ಟೀವ್ ವಾ ಮುಂದಾಳತ್ವದ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕ್ ಕಪ್‌ ಆಸೆ ಮಣ್ಣು ಪಾಲಾಗಿತ್ತು. ಅಂದು ಪಾಕ್ ಪಾಲಿಗೆ ವಾರ್ನ್ ವಿಲನ್‌ನಂತೆ ಕಂಡಿದ್ದರು.

39 ಓವರ್‌ಗೆ ಫಸ್ಟ್ ಇನ್ನಿಂಗ್ಸ್ ಫಿನಿಷ್!

39 ಓವರ್‌ಗೆ ಫಸ್ಟ್ ಇನ್ನಿಂಗ್ಸ್ ಫಿನಿಷ್!

ಫೈನಲ್‌ ಪಂದ್ಯವೆಂದರೆ ಅಲ್ಲಿ ಕಡೇ ಎಸೆತದವರೆಗೂ ಜಿದ್ದಾ-ಜಿದ್ದಿಯ ಹೋರಾಟ ನಡೆದರಷ್ಟೇ ಅದಕ್ಕೊಂದು ಅರ್ಥ. ಆದರೆ ಅಂದಿನ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್ಮನ್‌ಗಳನ್ನು ದಂಗುಬಡಿಸಿದ್ದ ಶೇನ್‌ವಾರ್ನ್ ಎದುರಾಳಿ ತಂಡದ ಹೀನಾಯ ಸೋಲನ್ನು ಬರೆದಿದ್ದರು. 33 ರನ್‌ಗೆ ವಾರ್ನ್‌ ಪಾಕಿಸ್ತಾನದ 4 ವಿಕೆಟ್ ಮುರಿದಿದ್ದರು. ಜೊತೆಗೆ ಮೆಗ್‌ಗ್ರಾತ್ ಕೂಡ 13 ರನ್‌ಗೆ 2 ವಿಕೆಟ್ ಕೆಡವಿದ್ದು ಪಾಕ್‌ಗೆ ಭಾರೀ ಆಘಾತ ನೀಡಿತ್ತು. ಪರಿಣಾಮ ಪಾಕಿಸ್ತಾನ ಕೇವಲ 39 ಓವರ್‌ಗೆ ಸರ್ವಪತನ ಕಂಡಿತ್ತು.

ಇಜಾಝ್ ಅಹ್ಮದ್ 22 ರನ್ನೇ ಅಧಿಕ

ಇಜಾಝ್ ಅಹ್ಮದ್ 22 ರನ್ನೇ ಅಧಿಕ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಪಾಕಿಸ್ತಾನದ್ದು ಕಳಪೆ ಬ್ಯಾಟಿಂಗೋ ಅಥವಾ ಆಸ್ಟ್ರೇಲಿಯಾದ್ದು ಮಾರಕ ಬೌಲಿಂಗೊ, ಒಟ್ಟಿನಲ್ಲಿ ಆ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಪಾಕ್‌ ಪರ ಇಜಾಝ್ ಅಹ್ಮದ್ ಅವರ 22 ರನ್ನೇ ವೈಯಕ್ತಿಕ ಅತ್ಯಧಿಕ ರನ್‌ ಎನಿಸಿತ್ತು. ಇನ್ನು ಸಾಯೀದ್ ಅನ್ವರ್ 15, ಅಬ್ದುಲ್ ರಝಾಕ್ 17, ಇನ್ಝಮಾಮ್ ಉಲ್ ಹಕ್ 15, ಶಾಹಿದ್ ಅಫ್ರಿದಿ 13 ರನ್ ಕೊಡುಗೆ ಬಿಟ್ಟರೆ ಉಳಿದವರೆಲ್ಲರೂ 10ರೊಳಗೆ ವಿಕೆಟ್ ಒಪ್ಪಿಸಿದ್ದರು.

179 ಎಸೆತ ಉಳಿಸಿ ಆಸೀಸ್ ಗೆಲುವು

179 ಎಸೆತ ಉಳಿಸಿ ಆಸೀಸ್ ಗೆಲುವು

ಪಾಕ್ ವಿರುದ್ಧ ಅಂದು ಬರೋಬ್ಬರಿ 179 ಎಸೆತಗಳನ್ನು ಉಳಿಸಿ ಆಸೀಸ್ ಪಂದ್ಯ ಗೆದ್ದಿತ್ತು ಅಂದರೆ ಪಾಕ್‌ ಆವತ್ತು ಅನುಭವಿಸಿರಬಹುದಾದ ಅವಮಾನ ಎಷ್ಟಿರಬಹುದು? ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕ್ 39 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 132 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಕಾಂಗರೂ ಪಡೆ ಆ್ಯಡಂ ಗಿಲ್‌ಕ್ರಿಸ್ಟ್ ಅರ್ಧಶತಕದೊಂದಿಗೆ (54 ರನ್) 20.1 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 133 ರನ್ ಪೂರೈಸಿತ್ತು. ಅಂತೂ ಆಸೀಸ್ ತಂಡದ 5 ಸಾರಿಯ ವಿಶ್ವಕಪ್ ಗೆಲುವಿನಲ್ಲಿ ಪಾಕ್ ತಂಡದ ಈ ಒಂದು ಅವಮಾನಕರ ಸೋಲೂ ಸೇರಿದೆ!

Story first published: Saturday, May 4, 2019, 16:43 [IST]
Other articles published on May 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X