ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್

1st odi; india lost first odi match against west indies

ಚೆನ್ನೈನ ಎಂಎ ಚಿದಂಬರ್ಂ ಸ್ಟೇಡಿಯಮ್‌ನಲ್ಲಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಟೀಮ್ ಇಂಡಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವನ್ನು ಸಾಧಿಸಿ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.

ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ

ಭಾರತ ನೀಡಿದ 289 ರನ್‌ಗಳ ಸವಾಲಿನ ಮೊತ್ತವನ್ನು ವೆಸ್ಟ್‌ ಇಂಡೀಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನತ್ತಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಟಿ20ಯಲ್ಲಿ ಅನುಭವಿಸಿದ ಸರಣಿ ಸೋಲಿಗೆ ಏಕದಿನ ಸರಣಿ ಗೆದ್ದು ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಯಶಸ್ಸು ಕಂಡಿದೆ.

ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರುಳುತ್ತಾರಾ ಎಬಿ ಡಿವಿಲಿಯರ್ಸ್?ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರುಳುತ್ತಾರಾ ಎಬಿ ಡಿವಿಲಿಯರ್ಸ್?

ವಿಂಡೀಸ್ ಪರವಾಗಿ ಶಿಮ್ರಾನ್ ಹೇಟ್ಮೇರ್ ಮತ್ತು ಶೇಯ್ ಹೋಪ್ ದ್ವಿಶತಕದ ಜೊತೆಯಾಟವನ್ನು ನೀಡಿ ಗೆಲುವನ್ನು ಯಾವ ಕ್ಷಣದಲ್ಲೂ ಭಾರತ ಕಡೆ ವಾಲದಂತೆ ನೋಡೊಕೊಂಡರು. ಹೇಟ್ಮೇರ್ ಸ್ಪೋಟಕ 139 ರನ್(106 ಎಸೆತ) ಸಿಡಿಸಿದರೆ ಹೋಪ್ ತಾಳ್ಮೆಯ ಅಜೇಯ ಶತಕ 102 ರನ್(151 ಎಸೆತ) ಸಿಡಿಸಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

ಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ, ದಿನಾಂಕ, ಸಮಯಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ, ದಿನಾಂಕ, ಸಮಯ

ಭಾರತ ಆರಂಭದಲ್ಲೇ ಸುನಿಲ್ ಅಂಬ್ರಿಸ್ ವಿಕೆಟ್ ಪಡೆದು ಯಶಸ್ಸು ಪಡೆಯಿತು. ಆದರೆ ಬಳಿಕ ಯಾವ ಬೌಲರ್‌ಗಳು ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಿಮವಾಗಿ ವೆಸ್ಟ್‌ ಇಂಡೀಸ್ 47.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವನ್ನು ತನ್ನದಾಗಿಸಿಕೊಂಡಿತು. ಭಾರತದ ಪರವಾಗಿ ಚಹರ್ ಮತ್ತು ಶಮಿ ಮಾತ್ರ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ20 ಕ್ರಿಕೆಟ್; ಪಂತ್ ಬದಲು ಕನ್ನಡಿಗನಿಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿ?ಟಿ20 ಕ್ರಿಕೆಟ್; ಪಂತ್ ಬದಲು ಕನ್ನಡಿಗನಿಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿ?

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಮೊತ್ತ ಪೇರಿಸಿತು. ಭಾರತ ಏಳು ವಿಕೆಟ್ ಕಳೆದುಕೊಂಡು 288 ರನ್ ಬಾರಿಸಿ ವೆಸ್ಟ್ ಇಂಡೀಸ್‌ಗೆ ಸವಾಲಿನ ಗುರಿ ನೀಡಿತ್ತು.

Story first published: Sunday, December 15, 2019, 22:26 [IST]
Other articles published on Dec 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X