ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ತಂಡ ಸರಿಯಾದ ಹಾದಿಯಲ್ಲಿದೆ ಎಂದು ಪ್ರಶಂಸಿಸಿದ ಕೋಚ್ ಮಿಸ್ಬಾ ಉಲ್ ಹಕ್

2021 T20 World Cup Preparations On Track: Misbah-ul-haq

ಸುದೀರ್ಘ ವಿರಾಮದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡು ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಂಡಿತ್ತು. ಟೆಸ್ಟ್‌ನಲ್ಲಿ 0-1 ಅಂತರದಿಂದ ಸೋತಿದ್ದರೆ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸವಲ್ಲಿ ಪಾಖ್ ಯಶಸ್ವಿಯಾಗಿತ್ತು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಪ್ರತಿಕ್ರಿಯಿಸಿದ್ದು ಪಾಕ್ ತಂಡ ಸರಿಯಾದ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿದ್ದರೂ 2021ರ ಟಿ20 ವಿಶ್ವಕಪ್ ದೃಷ್ಠಿಯಿಂದ ಸರಿಯಾದ ಹಾದಿಯಲ್ಲಿದೆ ಎಂದು ಮಿಸ್ಬಾ ಉಲ್ ಹಕ್ ಹೇಳಿದ್ದಾರೆ. ಪ್ರತೀ ಸರಣಿಯ ಬಳಿಕವೂ ಪ್ರಗತಿಯನ್ನು ಸಾಧಿಸಲು ಅವಕಾಶಗಳು ಇದ್ದೇ ಇದೆ. ಬಯಸಿದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದಿದ್ದರೂ ಭವಿಷ್ಯದ ದೃಷ್ಠಿಕೋನದಿಂದ ತಂಡ ಸೂಕ್ತವಾಗಿದೆ ಎಂದು ಹೇಳಿದ್ದಾರೆ.

ಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ

'ತಂಡದ ಬೆಳವಣಿಗೆಯ ಪ್ರಕ್ರಿಯೆ ಸರಿಯಾಗಿದೆ ಹಾಗೂ ಸೂಕ್ತ ಹಾದಿಯಲ್ಲಿದೆ. ಇಂಗ್ಲೀಷ್ ಪಿಚ್‌ನಲ್ಲಿ ನಾವು ಎರಡು ಸಂದರ್ಭಗಳಲ್ಲಿ 190ಕ್ಕೂ ಅಧಿಕ ರನ್ ಗಳಿಸಲು ಶಕ್ತರಾಗಿದ್ದೇವೆ' ಎಂದು ಮಿಸ್ಬಾ ಉಲ್ ಹಕ್ ಗಡಾಫಿ ಸ್ಟೇಡಿಯಮ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಯುವ ಆಟಗಾರ ಹೈದರ್ ಅಲಿಗೆ ಮೊದಲೆರಡು ಟಿ20 ಪಂದ್ಯಗಳಲ್ಲಿ ಅವಕಾಶ ನೀಡದ ಬಗ್ಗೆ ಕೇಳಿ ಬಂದಿರುವ ಟೀಕೆಗೂ ಕೋಚ್ ಮಿಸ್ಬಾ ಸಮರ್ಥನೆಯನ್ನು ನೀಡಿದ್ದಾರೆ. ಆತ ನಿರ್ಣಾಯಕ ಪಂದ್ಯದಲ್ಲಿ ಆಡುವುದನ್ನು ಬಯಸಿದ್ದರು ಎಂದು ಹೇಳಿದ್ದಾರೆ.

ಹಿರಿಯರು ಹಾಗೂ ಯುವ ಕ್ರಿಕೆಟಿಗರ ಹೊಂದಾಣಿಕೆಯನ್ನು ತಂಡದಲ್ಲಿ ಮಾಡಿಕೊಳ್ಳಲು ಇನ್ನೂ ನಮಗೆ ಬೇಕಾದಷ್ಟು ಸಮಯಾವಕಾಶವಿದೆ. ಈ ತಂಡವನ್ನು ನಾವು ಯುವ ಹಾಗೂ ಅನುಭವ ಆಟಗಾರರ ತಂಡವನ್ನಾಗಿ ರೂಪುಗೊಳಿಸಲಿದ್ದೇವೆ ಎಂದು ಮಿಸ್ಬಾ ಉಲ್ ಹಕ್ ಪಾಕ್ ತಂಡದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

Story first published: Tuesday, September 8, 2020, 20:31 [IST]
Other articles published on Sep 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X