ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2022ರ ವಿಶ್ವಕಪ್‌ ನನ್ನ 'ಹಂಸಗೀತೆ'ಯಾಗಲಿದೆ: ಮಿಥಾಲಿ ರಾಜ್

2022 World Cup will be my swansong, says Mithali Raj

ನವದೆಹಲಿ: ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿಯಾಗಿರುವ ಮಿಥಾಲಿ ರಾಜ್‌ ವೃತ್ತಿ ಬದುಕಿಗೆ ಕಾಲಿರಿಸಿ 21 ವರ್ಷಗಳು ಕಳೆದಿವೆ. ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿರುವ ಮಿಥಾಲಿ ಮುಂದಿನ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟ ನಿಲ್ಲಿಸುವ ಯೋಚನೆಯಲ್ಲಿದ್ದಾರೆ.

ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!

38ರ ಹರೆಯದ ಮಿಥಾಲಿ ರಾಜ್ ತಾನು ಅಂತಾರಾಷ್ಟ್ರೀಯ ಆಟ ನಿಲ್ಲಿಸುವ ಸಮಯವನ್ನು ಘೋಷಿಸಿದ್ದಾರೆ. 2022ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ ತನ್ನ ಪಾಲಿನ ಕೊನೇ ಟೂರ್ನಿಯಾಗಲಿದೆ ಎಂದು ಮಿಥಾಲಿ ಹೇಳಿಕೊಂಡಿದ್ದಾರೆ.

'1971: ದ ಬಿಗಿನಿಂಗ್ ಆಫ್‌ ಇಂಡಿಯಾಸ್ ಕ್ರಿಕೆಟಿಂಗ್ ಗ್ರೇಟ್‌ನೆಸ್ (1971: The Beginning of India's Cricketing Greatness) ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಿಥಾಲಿ ರಾಜ್, 'ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದು 21 ವರ್ಷಗಳಾಗಿವೆ. 2022ರ ವಿಶ್ವಕಪ್‌ ನನ್ನ ಹಂಸಗೀತೆ (ಕೊನೇ ಟೂರ್ನಿ) ಅನ್ನೋದು ನನಗೆ ಗೊತ್ತಿದೆ' ಎಂದಿದ್ದಾರೆ.

ಮೂರನೇ ಸೋಲಿನ ಬಳಿಕ ತಂಡದಲ್ಲಿನ ಕೊರತೆ ಬಿಚ್ಚಿಟ್ಟ ರೋಹಿತ್ ಶರ್ಮಾ!ಮೂರನೇ ಸೋಲಿನ ಬಳಿಕ ತಂಡದಲ್ಲಿನ ಕೊರತೆ ಬಿಚ್ಚಿಟ್ಟ ರೋಹಿತ್ ಶರ್ಮಾ!

ಏಕದಿನ ಕ್ರಿಕೆಟ್‌ನಲ್ಲಿ 7000+ ರನ್ ಬಾರಿಸಿದ ವಿಶ್ವದ ಏಕಮಾತ್ರ ಮಹಿಳಾ ಕ್ರಿಕೆಟರ್ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿದೆ. ಅಷ್ಟೇ ಅಲ್ಲ, 100+ ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಮುನ್ನಡೆಸಿದ ಹಿರಿಮೆ ಮಿಥಾಲಿಯದ್ದು. ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ 49 ಅರ್ಧ ಶತಕ, 7 ಶತಕಗಳ ದಾಖಲೆ ಹೊಂದಿದ್ದಾರೆ.

Story first published: Saturday, April 24, 2021, 18:25 [IST]
Other articles published on Apr 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X