ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌: ಒಂದೇ ವರ್ಷದಲ್ಲಿ 26 ಸ್ಪಾಟ್ ಫಿಕ್ಸಿಂಗ್ ಹಗರಣ

26 spot fixing in 2011-12 cricket matches Al Jazeeras documentary

ದುಬೈ, ಅಕ್ಟೋಬರ್ 23: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2011-12ರ ಅವಧಿಯಲ್ಲಿಯೇ 26 ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು ನಡೆದಿವೆ ಎಂದು ಅಲ್‌ಜಜೀರಾ ಸುದ್ದಿ ವಾಹಿನಿ ವರದಿ ಮಾಡಿದೆ.

ಆರು ಟೆಸ್ಟ್, ಆರು ಏಕದಿನ ಮತ್ತು ಮೂರು ವಿಶ್ವಕಪ್ ಟಿ20 ಪಂದ್ಯಗಳಲ್ಲಿ ಒಟ್ಟು 26 ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು ನಡೆದಿವೆ ಎಂದು ಮ್ಯಾಚ್ ಫಿಕ್ಸಿಂಗ್ ಆರೋಪಿ ಅನೀಲ್ ಮುನಾವರ್ ಕುರಿತಾದ 'ಕ್ರಿಕೆಟ್ಸ್ ಮ್ಯಾಚ್ ಫಿಕ್ಸರ್ಸ್: ದಿ ಮುನಾವರ್ ಫೈಲ್ಸ್' ಎಂಬ ತನಿಖಾ ವರದಿಯಲ್ಲಿ ಅಲ್ ಜಜೀರಾ ತಿಳಿಸಿದೆ.

ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ

ಇಂಗ್ಲೆಂಡ್ ಆಟಗಾರರು ಆಡಿರುವ ಏಳು ಪಂದ್ಯಗಳು, ಆಸ್ಟ್ರೇಲಿಯಾದ ಆಟಗಾರರು ಆಡಿರುವ ಐದು, ಪಾಕಿಸ್ತಾನದ ಮೂರು ಮತ್ತು ಇನ್ನೊಂದು ದೇಶದ ಆಟಗಾರರು ಇರುವ ಒಂದು ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಲಾಗಿದೆ.

2011ರಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದ ಲಾರ್ಡ್ಸ್ ಟೆಸ್ಟ್, ದಕ್ಷಿಣ ಆಫ್ರಿಕಾ -ಆಸ್ಟ್ರೇಲಿಯಾ ಕೇಪ್ ಟೌನ್ ಟೆಸ್ಟ್, 2011ರ ವಿಶ್ವಕಪ್‌ನ ಐದು ಪಂದ್ಯಗಳು, 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಟಿ20ಯ ಮೂರು ಪಂದ್ಯಗಳು, 2012ರಲ್ಲಿ ಯುಎಇಯಲ್ಲಿ ನಡೆದ ಇಂಗ್ಲೆಂಡ್-ಪಾಕಿಸ್ತಾನದ ಮೂರೂ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದೆ ಎಂದು ವರದಿ ಹೇಳಿದೆ.

ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್ ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್

ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್, ಪಾಕಿಸ್ತಾನ-ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ನ ಹಿಂದಿನ ರಾತ್ರಿ 'ಡಿ ಕಂಪೆನಿ'ಯ ಸಹವರ್ತಿಯೊಬ್ಬನನ್ನು ದುಬೈನ ಹೋಟೆಲ್‌ನ ಲಾಬಿಯಲ್ಲಿ ಭೇಟಿ ಮಾಡಿರುವ ಚಿತ್ರಗಳನ್ನು ಸಹ ಅಲ್‌ ಜಜೀರಾ ಬಿಡುಗಡೆ ಮಾಡಿದೆ. ಇದರಲ್ಲಿ ಬ್ಯಾಗ್ ಹಿಡಿದ ವ್ಯಕ್ತಿಯೊಂದಿಗೆ ಅಕ್ಮಲ್ ಕೈಕುಲುಕುವ ದೃಶ್ಯಗಳಿವೆ. ಆದರೆ, ಅಕ್ಮಲ್ ಬ್ಯಾಗ್‌ನೊಂದಿಗೆ ಲಾಬಿಯಿಂದ ಹೊರಕ್ಕೆ ಹೋದ ಚಿತ್ರಗಳಿಲ್ಲ.

ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

26 ಸ್ಪಾಟ್ ಫಿಕ್ಸಿಂಗ್‌ಗಳ ಪೈಕಿ 25ರಲ್ಲಿ ನಿಖರ ಫಲಿತಾಂಶದ ಭವಿಷ್ಯ ನುಡಿದಿದ್ದಾಗಿ ಮುನಾವರ್ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

Story first published: Tuesday, October 23, 2018, 13:23 [IST]
Other articles published on Oct 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X