ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮುಂಬೈ ಮೂಲದ ಯುವ ಕ್ರಿಕೆಟರ್

27-year-old Mumbai Cricketer Commits Suicide At His Home

ಮುಂಬೈ ಮೂಲದ ಯುವ ಕ್ರಿಕೆಟಿಗನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮುಂಬೈನ ಮಲಡ್ ನಿವಾಸಿಯಾಗಿದ್ದ ಕರನ್ ತಿವಾರ್ ಆತ್ಮಹತ್ಯೆಗೆ ಶರಣಾಗಿರುವ ಯುವ ಬೌಲರ್ ಆಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಆದರೆ ಮಾನಸಿಕ ಖಿನ್ನತೆಯ ಕಾರಣದಿಂದಾಗಿ ಈ ಕೃತ್ಯವನ್ನು ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

ಮುಂಬೈನ ಕ್ಲಬ್‌ವೊಂದರಲ್ಲಿ ಆಡುತ್ತಿದ್ದ ಕರಣ್ ತಿವಾರಿ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಅವರ ಬೌಲಿಂಗ್ ಶೈಲಿಯನ್ನೇ ಹೊಂದಿದ್ದರು. ಹೀಗಾಗಿ ಸ್ಥಳೀಯ ಕ್ರಿಕೆಟ್‌ನಲ್ಲಿ ಜೂನಿಯರ್ ಸ್ಟೇನ್ ಎಂದೇ ಕರೆಸಿಕೊಳ್ಳುತ್ತಿದ್ದರು. ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಕನಸು ಕಂಡಿದ್ದ ಕರಣ್ ಈ ಕನಸು ಕೈತಪ್ಪಿದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.

ಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿ

ಕರಣ್ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನಿರ್ಧಾರವನ್ನು ಉದಯಪುರದಲ್ಲಿರುವ ತನ್ನ ಆಪ್ತ ಗೆಳೆಯನೋರ್ವನಿಗೆ ತಿಳಿಸಿದ್ದ. ಆತ ಕರಣ್ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಅದು ತಡವಾಗಿದ್ದ ಕಾರಣ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕರಣ್ ಕೊನೆಯುಸಿರೆಳಿದಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಅವರು ಐಪಿಎಲ್ ಟೂರ್ನಿಯ ವೇಳೆ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವು ತಂಡಗಳಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರೂ, ರಾಜ್ಯಮಟ್ಟದ ಕ್ರಿಕೆಟಿಗ ಎನಿಸಿಕೊಳ್ಳದ ಕಾರಣದಿಂದಾಗಿ ಅವರಿಗೆ ಐಪಿಎಲ್ ಅವಕಾಶ ಒಲಿದಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.

Story first published: Wednesday, August 12, 2020, 17:49 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X