ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಫಿಲ್ಡಿಂಗ್‌ಗೆ ಇಳಿಯದ ಶುಬ್ಮನ್ ಗಿಲ್, ಬಿಸಿಸಿಐ ಮಾಹಿತಿ

2nd Test: Shubman Gill Taken For Scans, Not To Take Field On Day Four

ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ನಾಲ್ಕನೇ ದಿನದಾಟದ ಸಂದರ್ಭದಲ್ಲಿ ಫೀಲ್ಡಿಂಗ್‌ಗೆ ಇಳಿದಿಲ್ಲ. ಮೂರನೇ ದಿನ ಫೀಲ್ಡಿಂಗ್ ವೇಳೆ ಕೈಗೆ ಚೆಂಡು ತಗುಲಿ ಗಿಲ್ ನೋವು ಅನುಭವಿಸಿದ್ದರು. ಹೀಗಾಗಿ ಶುಬ್ಮನ್ ಗಿಲ್ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ.

ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದೆ. "ಶುಬ್ಮನ್ ಗಿಲ್ ಮೂರನೇ ದಿನದಾಟದಲ್ಲಿ ಫೀಲ್ಡಿಂಗ್ ವೇಳೆ ಮೊಣಕೈಗೆ ಚೆಂಡಿನ ಹೊಡೆತವನ್ನು ಅನುಭವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರು ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅವರನ್ನು ವಿಚಾರಿಸುತ್ತಿದೆ. ಆತ ಇವತ್ತು ಫೀಲ್ಡಿಂಗ್‌ಗೆ ಇಳಿಯುವುದಿಲ್ಲ" ಎಂದು ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ.

ಭಾರತ vs ಇಂಗ್ಲೆಂಡ್: ಆರ್‌ ಅಶ್ವಿನ್ ಹೆಸರಲ್ಲಿ ಮತ್ತೊಂದು ದಾಖಲೆಭಾರತ vs ಇಂಗ್ಲೆಂಡ್: ಆರ್‌ ಅಶ್ವಿನ್ ಹೆಸರಲ್ಲಿ ಮತ್ತೊಂದು ದಾಖಲೆ

ಎರಡನೇ ಟೆಸ್ಟ್ ಪಂದ್ಯ ಸದ್ಯದಲ್ಲಿ ಟೀಮ್ ಇಂಡಿಯಾ ಆರಂಭದಿಂದಲೂ ಬಿಗಿ ಹಿಡಿತವನ್ನು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಭರ್ಜರಿ ಶತಕವನ್ನು ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ 329 ರನ್‌ಗಳನ್ನು ಬಾರಿಸಿತ್ತು.

ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಆರ್ ಅಶ್ವಿನ್ ದಾಳಿಗೆ ನಲುಗಿ ಕೇವಲ 134 ರನ್‌ಗಳಿಗೆ ಆಲೌಟ್ ಆಗಿತ್ತು. ಆರ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಮಿಂಚು ಹರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ದೊಡ್ಡ ಅಂತರದ ಮುನ್ನಡೆಯನ್ನು ಪಡೆದುಕೊಂಡಿತ್ತು.

ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಅರ್ಧ ಶತಕ ಹಾಗೂ ಆರ್ ಅಶ್ವಿನ್ ಸಿಡಿಸಿದ ಅದ್ಭತ ಶತಕದ ನೆರವಿನಿಂದ 286 ರನ್ ಪೇರಿಸಿ ಇಂಗ್ಲೆಂಡ್ ತಂಡಕ್ಕೆ 482 ರನ್‌ಗಳ ಬೃಹತ್ ಗುರಿಯನ್ನು ಮುಂದಿಟ್ಟಿದೆ.

Story first published: Tuesday, February 16, 2021, 11:22 [IST]
Other articles published on Feb 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X