ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳು

3 Biggest Lies Of Cricket-Fans Thought Were True

ನೀವು ಕ್ರಿಕೆಟ್ ಅಭಿಮಾನಿಯಾಗಿದ್ದರೆ ನೀವೂ ಈ ಸುದ್ದಿಗಳನ್ನು ಖಂಡಿತಾ ಕೇಳಿರುತ್ತೀರಿ. ನೀವು ಕೇಳಿದ ಈ ಸುದ್ದಿಗಳನ್ನು ನಿಜವೆಂದು ನಂಬಿರುತ್ತೀರಿ. ಆದರೆ ಅದೆಷ್ಟೋ ವರ್ಷಗಳ ಹಿಂದಿನಿಂದ ನೀವು ಕೇಳಿದ ಕೆಲ ಕ್ರಿಕೆಟ್ ಸಂಗತಿಗಳು ಸುಳ್ಳು ಎಂಬುದು ನಿಮಗೆ ಗೊತ್ತಿದೆಯಾ?

ಹೌದು ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಬಗೆಗಿನ ದಾಖಲೆಯಷ್ಟೇ ಕುತೂಹಲ ಕ್ರಿಕೆಟ್ ಆಟಗಾರರ ಬಗೆಗೂ ಇರುತ್ತದೆ. ಹಾಗಾಗಿಯೇ ಅವರ ಸುತ್ತಲೂ ಕೆಲ ವಿಚಾರಗಳು ಒಡಾಡುತ್ತಲೇ ಇರುತ್ತದೆ. ಕೆಲ ಸಂಗತಿಗಳು ಕೇವಲ ರೂಮರ್ ಎಂಬುದು ಕಾಲಾಂತರದಲ್ಲಿ ಅಭಿಮಾನಿಗಳಿಗೂ ಗೊತ್ತಾಗಿದೆ. ಆದರೆ ಈಗ ನಾವು ಹೇಳುತ್ತಿರುವ ಸಂಗತಿಗಳು ಇನ್ನೂ ನಿಜವೆಂದೇ ಅಭಿಮಾನಿಗಳು ನಂಬಿದ್ದಾರೆ.

"10 ವರ್ಷಗಳಿಂದ ಕ್ರಿಕೆಟನ್ನು ಮುಗಿಸುತ್ತಿದ್ದೀರಿ" : ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಗಂಭೀರ ಆರೋಪ

ಹಾಗಾದರೆ ಅಂತಾ ಸುಳ್ಳು ಸುದ್ದಿಗಳು ಯಾವುದು? ಈ ಸುಳ್ಳು ಸುದ್ದಿಗಳ ಹಿಂದಿನ ನೈಜತೆಯೇನು ಎನ್ನುವುದನ್ನು ಈ ವರದಿಯಲ್ಲಿ ನೋಡೋಣ

ಸುಳ್ಳು ನಂ 1: 1999ರ ವಿಶ್ವಕಪ್‌ ಸೂಪರ್ ಸಿಕ್ಸ್ ಪಂದ್ಯ

ಸುಳ್ಳು ನಂ 1: 1999ರ ವಿಶ್ವಕಪ್‌ ಸೂಪರ್ ಸಿಕ್ಸ್ ಪಂದ್ಯ

ಅದು 1999ರ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಪಂದ್ಯ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 271 ರನ್‌ಗಳ ಗುರಿಯನ್ನು ಆಸಿಸ್ ಬೆನ್ನತ್ತಿತ್ತು. ಆದರೆ ಆಸ್ಟ್ರೇಲಿಯಾದ ನಾಯಕ ಸ್ಟೀವ್ ವಾ 56 ರನ್‌ಗಳಿಸಿದ ಸಂದರ್ಭದಲ್ಲಿ ಆಫ್ರಿಕಾದ ಹರ್ಷಲ್ ಗಿಬ್ಸ್ ಇದ್ದಲ್ಲಿಗೆ ಬಾರಿಸಿದ್ದರು. ಸುಲಭವಾಗಿ ಕ್ಯಾಚ್ ಹಿಡಿಯುವ ಆ ಎಸೆತವನ್ನು ಎಡವಟ್ಟ ಮಾಡಿಕೊಂಡ ಗಿಬ್ಸ್ ಕೈ ಚೆಲ್ಲಿದ್ದರು. ಈ ಸಂದರ್ಭದಲ್ಲಿ ಆಸಿಸ್ ನಾಯಕ ಗಿಬ್ಸ್‌ಗೆ "ನೀನು ಕೈ ಚೆಲ್ಲಿದ್ದು ಕ್ಯಾಚ್ ಮಾತ್ರವಲ್ಲ ವಿಶ್ವಕಪ್ ಕೂಡ" ಎಂದಿದ್ದರು ಎಂಬುದು ಆ ಸಂದರ್ಭದಿಂದಲೂ ಸಾಕಷ್ಟು ಹರಿದಾಡಿದ್ದ ಮಾತು.. ಆದರೆ ಅದು ನಿಜವೇ?

ಸ್ವತಃ ಸ್ಟೀವ್ ವಾ ಹೇಳಿದ್ದಾರೆ ಸತ್ಯ

ಸ್ವತಃ ಸ್ಟೀವ್ ವಾ ಹೇಳಿದ್ದಾರೆ ಸತ್ಯ

ಹರ್ಷಲ್ ಗಿಬ್ಸ್ ಆಸಿಸ್ ನಾಯಕನ ಕ್ಯಾಚ್ ಬಿಟ್ಟ ನಂತರ ಸ್ಟೀವ್ ವಾ ಅಜೇಯ ಶತಕವನ್ನು ಸಿಡಿಸಿದ್ದರು. ಆ ಮೂಲಕ ಪಂದ್ಯವನ್ನು ಆಸಿಸ್ ಗೆದ್ದಿತ್ತು. ವಿಶೇಷವೆಂದರೆ ಸೆಮಿ ಫೈನಲ್‌ನಲ್ಲಿ ಮತ್ತೆ ದಕ್ಷಿಣ ಆಫ್ರಿಕಾವೇ ಮುಖಾಮುಖಿಯಾದಾದಾಗ ಆ ಪಂದ್ಯ "ಟೈ" ಆಗಿ ಸೂಪರ್ ಸಿಕ್ಸ್ ಹಂತದ ಫಲಿತಾಂಶದ ಆಧಾರದಲ್ಲಿ ಆಸಿಸ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು ಎಲ್ಲವೂ ಇತಿಹಾಸ. ಆದರೆ ಅಂದು ನಡೆದ ಮಾತುಕತೆ ಸುಳ್ಳು ಎಂಬುದನ್ನು ಸ್ವತಃ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ಆ ರೀತಿಯ ಮಾತುಗಳನ್ನು ಆಡಿಯೇ ಇಲ್ಲ. ಜನರು ಅವರೇ ಈ ರೀತಿ ಊಹಿಸಿಕೊಂಡು ಮಾತುಗಳನ್ನು ಹರಿಯಬಿಡುವುದು ತಮಾಷೆಯೆನಿಸುತ್ತದೆ" ಎಂದಿದ್ದರು. ಆದರೆ ಸ್ಟೀವ್ ವಾ ಹೇಳಿದ ಈ ಸತ್ಯ ಮಾತು ಜನರಿಗೆ ತಲುಪಲೇ ಇಲ್ಲ.

ಸುಳ್ಳು ನಂ 2: ನಿತ್ಯವೂ ಆರು ಲೀಟರ್ ಹಾಲು ಕುಡಿಯುತ್ತಾರೆ ಧೋನಿ

ಸುಳ್ಳು ನಂ 2: ನಿತ್ಯವೂ ಆರು ಲೀಟರ್ ಹಾಲು ಕುಡಿಯುತ್ತಾರೆ ಧೋನಿ

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಗೆಗಿನ ಈ ಸುದ್ದಿಯನ್ನು ನೀವು ಕೇಳಿರದೆ ಇರಲು ಸಾಧ್ಯವೇ ಇಲ್ಲ. ಧೋನಿಯ ಆರಂಭಿಕ ದಿನಗಳಲ್ಲಿ ಸಾಕಷ್ಟು ಗುಂಡಗೆ ಇದ್ದರು. ಆ ಸಂದರ್ಭದಲ್ಲಿ ಹರಿದಾಡಿದ್ದ ಮಾತುಗಳಿದು. ಧೋನಿ ನಿತ್ಯವೂ ಆರು ಲೀಟರ್ ಹಾಲು ಕುಡೀತಾರಂತೆ. ಅದೇ ಕಾರಣದಿಂದ ಧೋನಿ ದೊಡ್ಡ ದೊಡ್ಡ ಸಿಕ್ಸರ್ ಗಳಿಸಲು ಶಕ್ತಿ ಹೊಂದಿದ್ದಾರಂತೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಿತ್ತು.

ಧೋನಿ ಬಹಿರಂಗ ಪಡಿಸಿದ್ದರು ಇದರ ಸತ್ಯ

ಧೋನಿ ಬಹಿರಂಗ ಪಡಿಸಿದ್ದರು ಇದರ ಸತ್ಯ

ಈ ಸುದ್ದಿ ಧೋನಿಯವರೆಗೂ ತಲುಪಿತ್ತು. ಇದಕ್ಕೆ ಸುದ್ದಿಯ ವಿಚಾರಕ್ಕೆ ಧೋನಿ ಸ್ಪಷ್ಟವಾದ ಉತ್ತರವನ್ನು ನೀಡಿದ್ದರು. ನಾನು ದಿನಕ್ಕೆ ಒಂದು ಲೀಟರ್ ಹಾಲು ಕೂಡ ಕುಡಿಯಲ್ಲ. ಇನ್ನು ಐದು-ಆರು ಲೀಟರ್ ಹಾಲು ಕುಡಿಯುವ ವಿಚಾರ ಎಲ್ಲಿಗಂದ ಬಂತು ಎಂದು ಹೇಳಿದ್ದಾರೆ. ಹೀಗೆ ಪ್ರತಿಕ್ರಿಯಿಸುವ ಮೂಲಕ ಧೋನಿ ಸ್ಪಷ್ಟವಾಗಿ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಸುಳ್ಳು ನಂ 3: ಎಲ್ಲಾ ಕ್ರೀಡೆಗಳಲ್ಲೂ ಮಾಸ್ಟರ್ ಎಬಿ ಡಿ ವಿಲಯರ್ಸ್

ಸುಳ್ಳು ನಂ 3: ಎಲ್ಲಾ ಕ್ರೀಡೆಗಳಲ್ಲೂ ಮಾಸ್ಟರ್ ಎಬಿ ಡಿ ವಿಲಯರ್ಸ್

ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಎಬಿ ಡಿ ವಿಲಿಯರ್ಸ್ ಅವರನ್ನೂ ಈ ಸುಳ್ಳು ಸುದ್ದಿ ಬಿಟ್ಟಿಲ್ಲ. ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿರುವ ಎಬಿ ಡಿ ಕೇವಲ ಕ್ರಿಕೆಟ್ ಮಾತ್ರವಲ್ಲ. ಇತರೆ ಕ್ರೀಡೆಗಳಲ್ಲೂ ಮಾಸ್ಟರ್ ಎಂಬುದು ಹರಿದಾಡಿರುವ ಸುದ್ದಿ. ಈ ಸುದ್ದಿಯ ಪ್ರಕಾರ ಎಬಿ ಡಿವಿಲಿಯರ್ಸ್, ಹಾಕಿ, ಫುಟ್ಬಾಲ್, ರಗ್ಬಿ, ಸ್ವಿಮ್ಮಿಂಗ್,ರನ್ನಿಂಗ್, ಟೆನ್ನಿಸ್, ಬ್ಯಾಡ್ಮಿಂಟನ್ ಗಾಲ್ಫ್ ಕ್ರೀಡೆಗಳಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು ಎಂಬುದು ಸುದ್ದಿಯಾಗಿತ್ತು. ಇಷ್ಟು ಮಾತ್ರವಲ್ಲ ವಿಜ್ಞಾನದಲ್ಲೂ ಸಾಧನೆ ಮಾಡಿ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿಕೊಂಡಿದ್ದಾರೆ ಎಂದೆಲ್ಲಾ ಹರಿದಾಡಿತ್ತು.

ಸುಳ್ಳು ಸುದ್ದಿ ಎಂದು ಬಹಿರಂಗಪಡಿಸಿದ ಎಬಿ ಡಿ ವಿಲಿಯರ್ಸ್

ಸುಳ್ಳು ಸುದ್ದಿ ಎಂದು ಬಹಿರಂಗಪಡಿಸಿದ ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾ ಕ್ರಿಕೆಟರ್ ಬಗೆಗಿನ ಈ ಎಲ್ಲಾ ಸಂಗತಿಗಳು ಸುಳ್ಳು ಎಂಬುದನ್ನು ಸ್ವತಃ ಎಬಿ ಡಿವಿಲಿಯರ್ಸ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. "ನಾನು ಹೈಸ್ಕೂಲ್‌ನಲ್ಲಿ ಹಾಕಿಯನ್ನು ಒಂದು ವರ್ಷಗಳ ಕಾಲ ಆಡಿದ್ದೆ. ಆದರೆ ರಾಷ್ಟ್ರೀ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಅದರ ಹತ್ತಿರವೂ ಸುಳಿದಿರಲಿಲ್ಲ. ರಗ್ಬಿಯನ್ನು ಯಾವ ಹಂತದಲ್ಲೂ ಪ್ರತಿನಿಧಿಸಿರಲಿಲ್ಲ. ಬ್ಯಾಡ್ಮಿಂಟನ್ ಅಂತು ಶಾಲೆಯಲ್ಲೂ ಆಡಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹರಿದಾಡಿದ್ದ ಸುದ್ದಿ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Story first published: Wednesday, May 27, 2020, 16:48 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X