ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇತ್ತೀಚೆಗಷ್ಟೇ ತಮ್ಮ ದೇಶದ ತಂಡ ತ್ಯಜಿಸಿ ನ್ಯೂಜಿಲೆಂಡ್ ತಂಡ ಸೇರಿದ ಮೂವರು ಕ್ರಿಕೆಟಿಗರಿವರು

3 cricketers who left their team and joined New Zealand national team recently

ಕ್ರಿಕೆಟ್‌ನಲ್ಲಿ ಕೆಲ ವರ್ಷಗಳ ಕಾಲ ತಮ್ಮ ತವರು ದೇಶದ ಪರ ಕಣಕ್ಕಿಳಿದು ನಂತರದ ದಿನಗಳಲ್ಲಿ ಬೇರೆ ತಂಡಗಳ ಪರ ಕಣಕ್ಕಿಳಿದ ಆಟಗಾರರ ಉದಾಹರಣೆ ಸಾಕಷ್ಟಿವೆ. ಹೀಗೆ ತಮ್ಮ ತವರು ದೇಶದ ತಂಡಗಳನ್ನು ತ್ಯಜಿಸಿ ಬೇರೆ ತಂಡಗಳ ಪರ ಕಣಕ್ಕಿಳಿದ ಕೆಲ ಕ್ರಿಕೆಟಿಗರು ನೂತನ ತಂಡದಲ್ಲಿಯೇ ಮುಂದುವರೆದಿದ್ದರೆ, ಇನ್ನೂ ಕೆಲ ಆಟಗಾರರು ಒಪ್ಪಂದದ ಸಮಯದವರೆಗೆ ಮಾತ್ರ ಬೇರೆ ತಂಡಗಳ ಪರ ಆಡಿ ಮರಳಿ ತಮ್ಮ ತವರು ದೇಶಕ್ಕೆ ಸೇರ್ಪಡೆಗೊಂಡ ನಿದರ್ಶನಗಳಿವೆ.

2013ರ ಈ ದಿನ ಮೆಲುಕು ಹಾಕಿದ ಐಸಿಸಿ: ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!2013ರ ಈ ದಿನ ಮೆಲುಕು ಹಾಕಿದ ಐಸಿಸಿ: ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!

ಇನ್ನು ಸದ್ಯ ಇಂಗ್ಲೆಂಡ್ ಏಕದಿನ ತಂಡದ ನಾಯಕನಾಗಿರುವ ಇಯಾನ್ ಮಾರ್ಗನ್ 2009ರಿಂದ ಇಂಗ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದು, ಇದಕ್ಕೂ ಮುನ್ನ ಮಾರ್ಗನ್ ಐರ್ಲೆಂಡ್ ಪರ ಕಣಕ್ಕಿಳಿದಿದ್ದರು. ಹೌದು, ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ಇಯಾನ್ ಮಾರ್ಗನ್ 2006ರಿಂದ 2009ರವರೆಗೆ ಐರ್ಲೆಂಡ್ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದಿದ್ದರು.

ವಿರಾಟ್ ಕೊಹ್ಲಿಯಿಂದ ನನಗೆ ನೋವಾಗಿದೆ; ಹೀಗಂದಿದ್ದೇಕೆ ಮಾಜಿ ನಾಯಕ ಕಪಿಲ್ ದೇವ್‌?ವಿರಾಟ್ ಕೊಹ್ಲಿಯಿಂದ ನನಗೆ ನೋವಾಗಿದೆ; ಹೀಗಂದಿದ್ದೇಕೆ ಮಾಜಿ ನಾಯಕ ಕಪಿಲ್ ದೇವ್‌?

ಹೀಗೆ ಇಯಾನ್ ಮಾರ್ಗನ್ ರೀತಿ ಹಲವಾರು ಕ್ರಿಕೆಟಿಗರು ಎರಡೆರಡು ದೇಶಗಳನ್ನು ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದು, ಇತ್ತೀಚೆಗಷ್ಟೆ ಕೂಡ ಕೆಲ ಕ್ರಿಕೆಟಿಗರು ತಮ್ಮ ದೇಶ ಬಿಟ್ಟು ಬೇರೆ ದೇಶದ ತಂಡಗಳ ಪರ ಕ್ರಿಕೆಟ್ ಆಡಿದ್ದಾರೆ. ಅದರಲ್ಲಿಯೂ ನ್ಯೂಜಿಲೆಂಡ್‌ನಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ಇದ್ದು, ಈ ಕೆಳಕಂಡ ಮೂವರು ಆಟಗಾರರು ಇತ್ತೀಚಿಗಿನ ದಿನಗಳಲ್ಲಿ ತಮ್ಮ ತಂಡಗಳನ್ನು ಬಿಟ್ಟು ನ್ಯೂಜಿಲೆಂಡ್ ತಂಡ ಸೇರಿದ್ದಾರೆ.

1. ಡಿವೋನ್ ಕಾನ್ವೆ

1. ಡಿವೋನ್ ಕಾನ್ವೆ

ದಕ್ಷಿಣ ಆಫ್ರಿಕಾದಲ್ಲಿ ಹಲವಾರು ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ್ದ ಡಿವೋನ್ ಕಾನ್ವೆಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಲೇ ಇಲ್ಲ. ಹೀಗೆ ದಕ್ಷಿಣ ಆಫ್ರಿಕಾದಲ್ಲಿ ನಿರೀಕ್ಷಿಸಿದ ಅವಕಾಶ ಸಿಗದ ಡಿವೋನ್ ಕಾನ್ವೆ ನ್ಯೂಜಿಲೆಂಡ್‌ಗೆ ಹಾರಿದರು. ನ್ಯೂಜಿಲೆಂಡ್‌ನಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ ಎಂಬ ಕಾರಣಕ್ಕೆ ತನ್ನ ಬಳಿ ಇದ್ದ ಎಲ್ಲಾ ಆಸ್ತಿಗಳನ್ನೂ ಮಾರಿ ಹಣ ಕೂಡಿಸಿದ ಕಾನ್ವೆ ದಕ್ಷಿಣ ಆಫ್ರಿಕಾ ಬಿಟ್ಟು ನ್ಯೂಜಿಲೆಂಡ್ ತಲುಪಿದರು. ಹೀಗೆ ನ್ಯೂಜಿಲೆಂಡ್ ತಲುಪಿದ ಡಿವೋನ್ ಕಾನ್ವೆಗೆ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ಅವಕಾಶ ಲಭಿಸಿತ್ತು ಹಾಗೂ ನಂತರ ರಾಷ್ಟ್ರೀಯ ತಂಡದ ಆಯ್ಕೆಗಾರರ ಮನಗೆದ್ದ ಕಾನ್ವೆಗೆ ನ್ಯೂಜಿಲೆಂಡ್ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಒದಗಿಬಂತು.

2. ಮೈಕೆಲ್ ರಿಪ್ಪಾನ್

2. ಮೈಕೆಲ್ ರಿಪ್ಪಾನ್

ನೆದರ್ಲೆಂಡ್ಸ್ ತಂಡದ ಮೈಕೆಲ್ ರಿಪ್ಪನ್ ಇತ್ತೀಚೆಗಷ್ಟೆ ನ್ಯೂಜಿಲೆಂಡ್ ತಂಡ ಸೇರಿದ ಆಟಗಾರರ ಪಟ್ಟಿಯಲ್ಲಿದ್ದಾರೆ. ಮೂಲತಃ ದಕ್ಷಿಣ ಆಫ್ರಿಕಾದವರಾದ ಮೈಕೆಲ್ ರಿಪ್ಪಾನ್ ಇದೇ ವರ್ಷದಲ್ಲಿ ನೆದರ್ಲೆಂಡ್ಸ್ ಪರ ಕಣಕ್ಕಿಳಿದು ನ್ಯೂಜಿಲೆಂಡ್ ವಿರುದ್ಧ ಆಟವನ್ನಾಡಿದ್ದರು. ಆದರೆ, ಇದೀಗ ನ್ಯೂಜಿಲೆಂಡ್ ತಂಡಕ್ಕೆ ಸೇರ್ಪಡೆಗೊಂಡಿರುವ ಈತ ಮುಂದಿನ ಆಗಸ್ಟ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಪರ ಕಣಕ್ಕಿಳಿದು ನೆದರ್ಲೆಂಡ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

3. ಲ್ಯೂಕ್ ಜಾರ್ಜ್‌ಸನ್

3. ಲ್ಯೂಕ್ ಜಾರ್ಜ್‌ಸನ್

ನ್ಯೂಜಿಲೆಂಡ್ ಪರ ಅಂಡರ್ 19 ಆಡಿದ್ದ ಲ್ಯೂಕ್ ಜಾರ್ಜ್‌ಸನ್ ಸದ್ಯ ಐರ್ಲೆಂಡ್ ಪರ ದೇಸಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಲ್ಯೂಕ್ ಜಾರ್ಜ್‌ಸನ್ ಐರ್ಲೆಂಡ್ ಜತೆ ಎರಡು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದ್ದು, ಹಿರಿಯರ ಕ್ರಿಕೆಟ್ ಆಡಲು ಮತ್ತೆ ನ್ಯೂಜಿಲೆಂಡ್ ತಂಡ ಸೇರುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ.

Story first published: Thursday, June 23, 2022, 18:10 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X