ಈ ಮೂವರೇ ಮುಂದಿನ ಮೂರು ವರ್ಷ ಭಾರತದ ಟೆಸ್ಟ್ ತಂಡದ ಆಧಾರ ಸ್ತಂಭಗಳು

ತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಅದಕ್ಕಿಂತ ಹಿಂದೆಯೂ ಭಾರತ ಅದ್ಭುತವಾಗಿ ಆಡುತ್ತಿದ್ದರೂ ತವರಿಗಿಂತ ಹೊರಗೆ ಭಾರತದ ಸಾಧನೆ ಹೆಚ್ಚೇನೂ ಹೇಳುವಂತಿರಲಿಲ್ಲ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾಬಿಡ್, ಅನಿಲ್ ಕುಂಬ್ಳೆಯಂತಾ ಆಟಗಾರರಿದ್ದಾಗಲೂ ಭಾರತ ವಿದೇಶದಲ್ಲಿ ಸ್ಥಿರ ಪ್ರದರ್ಶನನೀಡಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ವಿದೇಶಿ ನೆಲದಲ್ಲಿಯೂ ಸರಣಿ ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿದೆ.

2014ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಒಂದರ ಬಳಿಕ ಒಂದು ದೊಡ್ಡ ಸಾಧನೆ ಮಾಡುತ್ತಾ ಸಾಗಿತ್ತು. ಅದರಲ್ಲೂ ವಿದೇಶಿ ನೆಲ್ಲಿ ಭಾರತದ ಸಾಧನೆ ಉತ್ತಮವಾಗುತ್ತಾ ಸಾಗಿದೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಅವರಂತಾ ಆಟಗಾರರು ಈ ಅವಧಿಯಲ್ಲಿ ಭಾರತ ತಂಡಕ್ಕೆ ಆಧಾರವಾಗಿದ್ದಾರೆ. ಇದೀಗ ಕೆಲ ಯುವ ಆಟಗಾರರು ಕುಡ ಅದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ವರ್ಷದಲ್ಲಿ ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಆಧಾರ ಸ್ತಂಭಗಳಾಗಲಿರುವ ಮೂವರು ಆಟಗಾರರು ಯಾರು ಎಂಬುದನ್ನು ನೋಡೋಣ. ಮುಂದೆ ಓದಿ..

ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್

ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್

ಭಾರತದ ಯುವ ಆಟಗಾರ ರಿಷಬ್ ಪಂತ್ ಸ್ಪೋಟಕವಾಗಿ ಪ್ರದರ್ಶನ ನಿಡುವ ಮೂಲಕ ಸೀಮಿತ ಓವರ್‌ಗಳಿಗೆ ಸೂಕ್ತವೆನಿಸುವ ಆಟಗಾರ. ಆದರೆ ಪಂತ್ ಸೀಮಿತ ಓವರ್‌ಗಳಿಗಿಂತಲೂ ಅದ್ಭುತ ಪ್ರದರ್ಶನಗಳನ್ನು ಟೆಸ್ಟ್ ಮಾದರಿಯಲ್ಲಿ ನೀಡಿದ್ದಾರೆ ಎಂಬುದು ಗಮನಾರ್ಹ. ಏಕಾಂಗಿಯಾಗಿ ಈಗಾಗಲೇ ಮಹತ್ವದ ಪಂದ್ಯಗಳನ್ನು ಗೆಲ್ಲಿಸಿಕೊಡುವ ಮೂಲಕ ತನ್ನಲ್ಲಿರುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿಯೂ ಮಿಂಚುತ್ತಿದ್ದಾರೆ ರಿಷಭ್ ಪಂತ್. ಹೀಗಾಗಿ ಮೂರು ವರ್ಷಗಳ ಕಾಲ ರಿಷಬ್ ಪಂತ್ ಭಾರತ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿರುವುದರಲ್ಲಿ ಅನುಮಾನವಿಲ್ಲ.

ಯುವ ವೇಗಿ ಮೊಹಮ್ಮದ್ ಸಿರಾಜ್

ಯುವ ವೇಗಿ ಮೊಹಮ್ಮದ್ ಸಿರಾಜ್

ವೇಗದ ಬೌಲರ್ ಮೊಹಮ್ಮದ್ ಸೊರಾಜ್ ಚಿಕ್ಕ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ ಆಟಗಾರ. 2020ರಲ್ಲಿ ಐತಿಹಾಸಿಕ ಮೆಲ್ಬರ್ನ್ ಕ್ರೀಡಾಣಗಣದಲ್ಲಿ ನಡೆದ ಪಂದ್ಯದ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಸಿರಾಜ್ ಚೊಚ್ಚಲ ಸರಣಿಯಲ್ಲಿಯೇ ತನ್ನ ಸಾಮರ್ಥ್ಯವನ್ನು ತೋರರಿಸುವಲ್ಲಿ ಯಶಸ್ವಿಯಾಗಿದ್ದರು. ಮೊಹಮ್ಮದ್ ಸಿರಾಜ್ ಈವರೆಗೆ 13 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು ಈಗಾಗಲೇ 40 ವಿಕೆಟ್ ಸಂಪಾದಿಸಿ ಮಿಂಚಿದ್ದಾರೆ. ಈ ಮೂಲಕ ಭಾರತೀಯ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ.

India ಎರಡನೇ ಇನ್ನಿಂಗ್ಸ್ ನಲ್ಲಿ ಠುಸ್, ವನಿತೆಯರೇ ಸೂಪರ್ Reverse swing 02 | *CricketWrap | OneIndia Kannada
ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್

ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್

ಅಂಡರ್ 19 ವಿಶ್ವಕಪ್‌ನ ಸಮಯದಿಂದಲೂ ಶುಬ್ಮನ್ ಗಿಲ್ ತಾನು ಎಂಥಾ ಪ್ರತಿಭಾನ್ವಿತ ಆಟಗಾರ ಎಂಬುದನ್ನು ಸಾಬಿತುಪಡಿಸಿದ್ದಾರೆ. ಸಿರಾಜ್ ಜೊತೆಗೆ ಶುಬ್ಮನ್ ಗಿಲ್ ಕೂಡ 2020ರ ಎಂಸಿಜಿ ಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಭಯಾನಕ ಬೌಲಿಂಗ್ ದಾಲಿಯ ವಿರುದ್ಧ ಎರಡು ಅರ್ಧ ಶತಕ ಬಾರಿಸಿ ಮಿಂಚಿದ್ದರು ಶುಬ್ಮನ್ ಗಿಲ್. ಆ ಸರಣಿಯ ನಾಲ್ಕನೇ ಪಂದ್ಯದಲ್ಲಿ 91 ರನ್‌ಗಳಿಗೆ ಔಟಾಗುವ ಮೂಲಕ ತಮ್ಮ ಚೊಚ್ಚಲ ಶತಕದಿಂದ ವಂಚಿತವಾಗಿದ್ದರು. ಸದ್ಯ ಭಾರತದ ಮೂರನೇ ಆಯ್ಕೆಯ ಆರಂಭಿಕ ಆಟಗಾರನಾಗಿ ಅವಕಾಶ ಪಡೆಯುತ್ತಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಭಾರತದ ಪ್ರಮುಖ ಅಸ್ತ್ರವೆನಿಸುವ ಆಟಗಾರನಾಗಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, July 4, 2022, 23:54 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X