ಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರು

ಭಾರತ ಕ್ರಿಕೆಟ್ ತಂಡದ ಮೂರೂ ಮಾದರಿಗಳ ನಾಯಕನಾಗಿರುವ ವಿರಾಟ್ ಕೊಹ್ಲಿ ಸೆಪ್ಟೆಂಬರ್ 16ರ ಗುರುವಾರದಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಹೌದು, ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ವಿಚಾರದ ಕುರಿತಾಗಿ ವಿರಾಟ್ ಕೊಹ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದರ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗ

ವಿರಾಟ್ ಕೊಹ್ಲಿ 45 ಪಂದ್ಯಗಳಲ್ಲಿ ಭಾರತ ಟ್ವೆಂಟಿ ಕ್ರಿಕೆಟ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು 27 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದರೆ, 14 ಪಂದ್ಯಗಳಲ್ಲಿ ಸೋಲುಂಡಿದೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ ಹಾಗೂ ಉಳಿದೆರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಹೀಗೆ ಎಂಎಸ್ ಧೋನಿ ಬಳಿಕ ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ಎರಡನೇ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅತ್ತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ನಾಯಕತ್ವದಿಂದ ಕೆಳಗಿಳಿಯುವ ವಿಷಯವನ್ನು ವಿರಾಟ್ ಕೊಹ್ಲಿ ಘೋಷಣೆ ಮಾಡುತ್ತಿದ್ದಂತೆ ಟೀಮ್ ಇಂಡಿಯಾದ ಮುಂದಿನ ಟಿ ಟ್ವೆಂಟಿ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿವೆ.

ಆ ಒಂದು ಕನಸಿಗಾಗಿ ಮುಂಬೈ ಇಂಡಿಯನ್ಸ್ ಬಿಟ್ಟಿದ್ದ ಮಾಲಿಂಗಗೆ ಕೊನೆಗೆ ಸಿಕ್ಕಿದ್ದು ಸೋಲು, ಕಡೆಗಣನೆ!ಆ ಒಂದು ಕನಸಿಗಾಗಿ ಮುಂಬೈ ಇಂಡಿಯನ್ಸ್ ಬಿಟ್ಟಿದ್ದ ಮಾಲಿಂಗಗೆ ಕೊನೆಗೆ ಸಿಕ್ಕಿದ್ದು ಸೋಲು, ಕಡೆಗಣನೆ!

ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಮೇಲೆ ಭಾರತದ ಈ ಆಟಗಾರರು ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹಲವಾರು ಆಟಗಾರರ ಹೆಸರುಗಳು ಕೇಳಿಬರುತ್ತಿದ್ದು ಹೆಚ್ಚಾಗಿ ಪ್ರಸ್ತುತ ಟೀಮ್ ಇಂಡಿಯಾದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅವರೇ ನಾಯಕತ್ವ ಸ್ಥಾನಕ್ಕೆ ಏರುವ ಸಾಧ್ಯತೆಗಳು ಹೆಚ್ಚಿವೆ. ಹೀಗೆ ವಿರಾಟ್ ಕೊಹ್ಲಿ ಬಳಿಕ ಉಪನಾಯಕ ರೋಹಿತ್ ಶರ್ಮಾ ನಾಯಕ ಸ್ಥಾನಕ್ಕೇರಿದರೆ ಭಾರತ ಟಿ ಟ್ವೆಂಟಿ ತಂಡದ ಉಪನಾಯಕ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆಗಳು ಇದೀಗ ಆರಂಭವಾಗಿದ್ದು ಈ ಕೆಳಕಂಡ ಮೂವರು ಆಟಗಾರರ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿವೆ.

1. ಕೆಎಲ್ ರಾಹುಲ್

1. ಕೆಎಲ್ ರಾಹುಲ್

ಕನ್ನಡಿಗ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ಬಳಿಕ ಟೀಮ್ ಇಂಡಿಯಾ ನಾಯಕನಾಗುವ ಆಟಗಾರರ ರೇಸ್‌ನಲ್ಲಿದ್ದಾರೆ ಹಾಗೂ ಒಂದುವೇಳೆ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕನಾದರೆ ಕೆಎಲ್ ರಾಹುಲ್ ಉಪ ನಾಯಕನಾಗುವ ಸಾಧ್ಯತೆಗಳು ಹೆಚ್ಚಿವೆ. ಭಾರತದ ಎಲ್ಲಾ ಮಾದರಿಯ ತಂಡಗಳಲ್ಲಿಯೂ ಪ್ರಮುಖ ಆಟಗಾರನಾಗಿರುವ ಕೆಎಲ್ ರಾಹುಲ್ ತಂಡದ ಆಟಗಾರನಾಗಿ ಉತ್ತಮ ಅನುಭವವನ್ನು ಹೊಂದಿದ್ದು ಶಾಂತ ಮನಸ್ಸಿನ ಆಟಗಾರನಾಗಿದ್ದಾರೆ. ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಕೂಡ ಕೆಎಲ್ ರಾಹುಲ್‌ಗೆ ಅನುಭವ ಇರುವ ಕಾರಣ ರೋಹಿತ್ ಶರ್ಮಾ ಬಳಿಕ ಭಾರತ ಟಿ ಟ್ವೆಂಟಿ ತಂಡದ ಉಪನಾಯಕನಾಗುವ ಸಾಧ್ಯತೆಗಳು ಹೆಚ್ಚಿವೆ.

2. ರಿಷಭ್ ಪಂತ್

2. ರಿಷಭ್ ಪಂತ್

ರೋಹಿತ್ ಶರ್ಮಾ ನಂತರ ಭಾರತ ಟಿ ಟ್ವೆಂಟಿ ತಂಡದ ಉಪ ನಾಯಕನಾಗಲಿರುವ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಅವರ ಹೆಸರು ಕೂಡ ಇದೆ. ಭಾರತ ಸೀಮಿತ ಓವರ್‌ಗಳ ತಂಡಗಳಲ್ಲಿ ಖಾಯಂ ಸದಸ್ಯನಾಗಿರುವ ರಿಷಭ್ ಪಂತ್ ಈಗಾಗಲೇ ತಾನೊಬ್ಬ ಉತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ರಿಷಭ್ ಪಂತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಭಾರತ ತಂಡದ ಉಪನಾಯಕನಾಗಲು ಅರ್ಹ ಆಟಗಾರನಾಗಿದ್ದಾರೆ.

3. ಜಸ್ಪ್ರೀತ್ ಬುಮ್ರಾ

3. ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬೂಮ್ರಾ ಹೆಸರು ರೋಹಿತ್ ಶರ್ಮಾ ನಂತರ ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ಉಪ ನಾಯಕನಾಗಲಿದ್ದಾರೆ ಎನ್ನುವ ಆಟಗಾರರ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಕೆಎಲ್ ರಾಹುಲ್, ರಿಷಭ್ ಪಂತ್ ನಂತರ ಜಸ್ಪ್ರೀತ್ ಬುಮ್ರಾ ಹೆಸರು ಕೂಡ ಹೆಚ್ಚಾಗಿ ಕೇಳಿ ಬರುತ್ತಿದ್ದು ಬೂಮ್ರಾ ಭಾರತ ಟಿ ಟ್ವೆಂಟಿ ತಂಡದ ಆಟಗಾರನಾಗಿ ದೊಡ್ಡ ಮಟ್ಟದ ಅನುಭವವನ್ನೇ ಹೊಂದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಟಿ ಟ್ವೆಂಟಿ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ನಾಯಕನಾದರೆ ಜಸ್ಪ್ರೀತ್ ಬುಮ್ರಾ ಉಪನಾಯಕ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳು ಕೂಡ ಇವೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Friday, September 17, 2021, 10:44 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X