ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Finalನಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವುದಿಲ್ಲ ಎನ್ನುತ್ತಿವೆ ಈ 3 ಕಾರಣಗಳು!

3 reasons why Mohammed Siraj shouldnt be part of Indias playing XI in WTC Final

ಜೂನ್ 18-22ರವರೆಗೆ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿವೆ.

WTC Final: ನ್ಯೂಜಿಲೆಂಡ್‌ನ ಈ ಆಟಗಾರ ಭಾರತಕ್ಕೆ ತಲೆನೋವಾಗಿ ಪರಿಣಮಿಸಲಿದ್ದಾನೆ ಎಂದ ಪನೇಸರ್WTC Final: ನ್ಯೂಜಿಲೆಂಡ್‌ನ ಈ ಆಟಗಾರ ಭಾರತಕ್ಕೆ ತಲೆನೋವಾಗಿ ಪರಿಣಮಿಸಲಿದ್ದಾನೆ ಎಂದ ಪನೇಸರ್

ಎರಡೂ ತಂಡಗಳು ಸಹ ಬಲಿಷ್ಠ ಆಟಗಾರರಿಂದ ಕೂಡಿದ್ದು ಯಾವ ತಂಡ ಗೆಲ್ಲಲಿದೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಇನ್ನು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಯಾವ 11 ಆಟಗಾರರು ಸ್ಥಾನ ಪಡೆದುಕೊಳ್ಳಲಿದ್ದಾರೆ ಎನ್ನುವುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ ಸಮಯದಿಂದಲೂ ಈ ಚರ್ಚೆ ಗಾಢವಾಗಿ ನಡೆಯುತ್ತಿದ್ದು ಹೆಚ್ಚಾಗಿ ಕೇಳಿಬರುತ್ತಿರುವ ಆಟಗಾರನ ಹೆಸರು ಮೊಹಮ್ಮದ್ ಸಿರಾಜ್.

WTC Final: ಭಾರತ ತಂಡದ ಈ ಮೂವರಿಂದ ಗೆಲುವು ಖಚಿತ ಎಂದ ವಿರೇಂದ್ರ ಸೆಹ್ವಾಗ್WTC Final: ಭಾರತ ತಂಡದ ಈ ಮೂವರಿಂದ ಗೆಲುವು ಖಚಿತ ಎಂದ ವಿರೇಂದ್ರ ಸೆಹ್ವಾಗ್

ಹೌದು ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಮೊಹಮ್ಮದ್ ಸಿರಾಜ್ ನೀಡಿದ ಅದ್ಭುತ ಪ್ರದರ್ಶನದ ಸಲುವಾಗಿ ಆತನ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆಡಲೇಬೇಕು ಎಂದಿದ್ದಾರೆ. ಆದರೆ ಮೊಹಮ್ಮದ್ ಸಿರಾಜ್‌ಗೆ ಸ್ಥಾನ ನೀಡಬೇಕೆಂದರೆ ಟೀಮ್ ಇಂಡಿಯಾದ ಹಿರಿಯ ವೇಗಿಯೊಬ್ಬರನ್ನು ತಂಡದಿಂದ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮೊಹಮ್ಮದ್ ಸಿರಾಜ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಅವಕಾಶ ವಂಚಿತರಾಗಬಹುದು. ಹಾಗೇನಾದರೂ ಮೊಹಮ್ಮದ್ ಸಿರಾಜ್ ತಂಡದಿಂದ ಹೊರಬಿದ್ದರೆ ಅದಕ್ಕೆ ಈ ಕೆಳಕಂಡ 3 ಅಂಶಗಳು ಖಡಾಖಂಡಿತವಾಗಿ ಕಾರಣವಾಗಲಿವೆ.

1. ಇಂತಹ ಪ್ರತಿಷ್ಠಿತ ಪಂದ್ಯದಲ್ಲಿ ಅನುಭವವುಳ್ಳ ಆಟಗಾರರು ಇರಲೇಬೇಕು

1. ಇಂತಹ ಪ್ರತಿಷ್ಠಿತ ಪಂದ್ಯದಲ್ಲಿ ಅನುಭವವುಳ್ಳ ಆಟಗಾರರು ಇರಲೇಬೇಕು

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಂತಹ ಮಹತ್ವದ ಪಂದ್ಯಗಳನ್ನಾಡಲು ದೊಡ್ಡ ಅನುಭವವಿರುವ ಆಟಗಾರರಿಗೆ ಮನ್ನಣೆ ನೀಡಲಾಗುತ್ತದೆ. ಮೊಹಮ್ಮದ್ ಸಿರಾಜ್ ಹಿಂದಿನ ಸರಣಿಗಳಲ್ಲಿ ಅದ್ಬುತ ಪ್ರದರ್ಶನ ನೀಡಿದ ಹೊರತಾಗಿಯೂ ದೊಡ್ಡ ಮಟ್ಟದ ಅನುಭವ ಇಲ್ಲದ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಆಡುವ ಅವಕಾಶವನ್ನು ಕಳೆದುಕೊಳ್ಳಬಹುದು.

2. ಮೊಹಮ್ಮದ್ ಸಿರಾಜ್‌ಗೆ ಡ್ಯೂಕ್ ಬಾಲ್ ಪರಿಚಯ ಕಡಿಮೆ

2. ಮೊಹಮ್ಮದ್ ಸಿರಾಜ್‌ಗೆ ಡ್ಯೂಕ್ ಬಾಲ್ ಪರಿಚಯ ಕಡಿಮೆ

ನಿಮಗೆಲ್ಲ ತಿಳಿದಿರುವ ಹಾಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಡ್ಯೂಕ್ ಬಾಲ್ ಬಳಕೆಯಾಗಲಿದೆ. ಹಲವಾರು ಪಂದ್ಯಗಳಲ್ಲಿ ಆಡಿರುವ ಹಿರಿಯ ಆಟಗಾರರೇ ಡ್ಯೂಕ್ ಬಾಲ್ ಕುರಿತು ತಲೆ ಕೆಡಿಸಿಕೊಳ್ಳುವಾಗ ಕಡಿಮೆ ಪರಿಚಯ ಹೊಂದಿರುವ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಕೊಡುವುದು ತೀರಾ ಕಷ್ಟ ಎನ್ನಬಹುದು.

3. ಸಿರಾಜ್‌ಗೋಸ್ಕರ ಹಿರಿಯ ಆಟಗಾರರನ್ನು ಕೈಬಿಡುವುದು ಕಷ್ಟ

3. ಸಿರಾಜ್‌ಗೋಸ್ಕರ ಹಿರಿಯ ಆಟಗಾರರನ್ನು ಕೈಬಿಡುವುದು ಕಷ್ಟ

ಒಂದುವೇಳೆ ಸಿರಾಜ್‌ಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಆಡುವ ಅವಕಾಶ ಕೈತಪ್ಪಿದರೆ ಈ ಅಂಶ ದೊಡ್ಡ ಕಾರಣ ಎಂದೇ ಹೇಳಬಹುದು. ಏಕೆಂದರೆ ಸಿರಾಜ್‌ಗೆ ಅವಕಾಶ ನೀಡಬೇಕೆಂದರೆ ತಂಡದ ಹಿರಿಯ ವೇಗಿಗಳಾದ ಮೊಹಮ್ಮದ್ ಶಮಿ ಅಥವಾ ಇಶಾಂತ್ ಶರ್ಮಾರನ್ನು ತಂಡದಿಂದ ಕೈಬಿಡಬೇಕು. ಹೀಗಾಗಿ ಸಿರಾಜ್‌ಗೆ ಅವಕಾಶ ನೀಡುವ ನಿಟ್ಟಿನಲ್ಲಿ ತಂಡದ ಪರ ಹಲವಾರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾರಂತಹ ಹಿರಿಯ ಆಟಗಾರರನ್ನು ತಂಡದಿಂದ ಕೈಬಿಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

Story first published: Sunday, June 13, 2021, 20:45 [IST]
Other articles published on Jun 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X