ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಮೂರು ತಂಡಗಳ ಕಣ್ಣು ಈ ಆಟಗಾರನ ಮೇಲೆ

3 teams that could target Tom Banton this year

ಐಪಿಎಲ್ ಆಟಗಾರರ ಹರಾಜಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ತಮ್ಮಲ್ಲಿರುವ ಆಟಗಾರರನ್ನು ತಂಡಗಳಿಂದ ಬಿಡುಗಡೆಗೊಳಿಸಿ ತಮ್ಮ ತಂಡಗಳನ್ನು ಮತ್ತಷ್ಟು ಬಲಿಷ್ಟಗೊಳಿಸಲು ಫ್ರಾಂಚೈಸಿಗಳು ಸಿದ್ಧವಾಗಿದೆ. ಯಾವ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದರೆ ತಂಡಕ್ಕೆ ಯಾವೆಲ್ಲಾ ರೀತಿಯಲ್ಲಿ ಅನುಕೂಲವಾಗಲಿದೆ ಎಂಬುದರ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ.

13ನೇ ಆವೃತ್ತಿಯ ಐಪಿಎಲ್ ಕೂಟಕ್ಕೆ ಡಿಸೆಂಬರ್ 19ರಂದು ಕೊಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ತಮ್ಮಲ್ಲಿ ಉಳಿದುಕೊಂಡಿರುವ ಬಿಡ್ಡಿಂಗ್ ಮೊತ್ತದಲ್ಲಿ ಅತ್ಯುತ್ತಮ ಆಟಗಾರರನ್ನು ಕೊಂಡುಕೊಳ್ಳುವ ಪ್ರಯತ್ನ ಮಾಡಲಿದೆ ಫ್ರಾಂಚೈಸಿಗಳು. ಅಭಿಮಾನಿಗಳು ಕೂಡ ಈ ಹರಾಜು ಪ್ರಕ್ರಿಯೆ ನೋಡಲು ಕಾತುರರಾಗಿರುತ್ತಾರೆ.

ಹರಾಜಿಗೂ ಮುನ್ನ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಲು ಯಾವ ಯಾವ ಆಟಗಾರ ತಮ್ಮ ತಂಡಕ್ಕೆ ಸೇರ್ಪಡೆಗೊಂಡರೆ ಉತ್ತಮ ಎಂಬ ಲೆಕ್ಕಾಚಾರವನ್ನು ಮಾಡುತ್ತಿದೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಹಾಗೂ ಟಿ-ಟ್ವೆಂಟಿ ಲೀಗ್‌ಗಳಲ್ಲಿ ಉತ್ತಮ ಪ್ರರ್ಶನ ನೀಡುತ್ತಿರುವ ಸ್ಪೋಟಕ ಬ್ಯಾಟ್ಸ್ಮನ್‌ಗಳು ಹಾಗೂ ಆಲ್ರೌಂಡರ್‌ಗಳತ್ತ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ಸದ್ಯ ಇಂಗ್ಲೆಂಡ್‌ನ ಟಾಮ್ ಬ್ಯಾಂಟನ್ ಅವರ ಬ್ಯಾಟಿಂಗ್ ಪ್ರದರ್ಶನ ಈಗ ಪ್ರಮುಖ ಫ್ರಾಂಚೈಸಿಗಳ ಗಮನ ಸೆಳೆದಿದೆ. ಈತನಿಗಾಗಿ ಹರಾಜು ಪ್ರಕ್ರಿಯೆಯಲ್ಲಿ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಪ್ರಮುಖವಾಗಿ ಮೂರು ಐಪಿಎಲ್ ಫ್ರಾಂಚೈಸಿಗಳು ಟಾಮ್ ಬ್ಯಾಂಟನ್ ತಮ್ಮ ತೆಕ್ಕೆಗೆ ಹಾಕಿಕೊಳ್ಳಲೇ ಬೇಕೆಂದು ಪಣತೊಟ್ಟಿವೆ.

ಯಾರು ಈ ಟಾಮ್ ಬ್ಯಾಟಮ್ ?

ಯಾರು ಈ ಟಾಮ್ ಬ್ಯಾಟಮ್ ?

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ ಕ್ಲಬ್ ಸೋಮರ್‌ಸೆಟ್‌ ಪರವಾಗಿ ಈ ವರ್ಷ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಟಾಮ್ ಬ್ಯಾಂಟನ್ ಅಮೋಘ ಪ್ರದರ್ಶನವನ್ನು ನೀಡಿದ್ದರು. ಸದ್ಯ ಅಬುದಾಬಿಯಲ್ಲಿ ನಡೆಯುತ್ತಿರುವ ಟಿ-10 ಲೀಗ್‌ನಲ್ಲಿ ಕ್ವಾಲಂಡರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲೂ ಅತ್ಯುತ್ಮ ಪ್ರದರ್ಶನವನ್ನು ಟಾಮ್ ಬ್ಯಾಟಂ ನೀಡಿದ್ದಾರೆ. ಈ ಸರಣಿಯಲ್ಲಿ ಕರ್ನಾಟಕ ಟಸ್ಕರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 28ಎಸೆತಗಳಲ್ಲಿ 80ರನ್ ಚಚ್ಚಿದ್ದರು.ಇದು ಐಪಿಎಲ್ ತಂಡಗಳ ಕಣ್ಣು ಬ್ಯಾಂಟನ್ ಮೇಲೆ ಬೀಳಲು ಕಾರಣವಾಗಿದೆ. ಹಾಗಾದರೆ ಯಾವ ತಂಡಗಳು ಬ್ಯಾಂಟನ್‌ಗಾಗಿ ಕಸರತ್ತು ನಡೆಸಲಿದೆ ಅನ್ನೋದನ್ನು ನೋಡೋಣ

#1 ಮುಂಬೈ ಇಂಡಿಯನ್ಸ್‌

#1 ಮುಂಬೈ ಇಂಡಿಯನ್ಸ್‌

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ. ಕಳೆದ 12 ಆವೃತ್ತಿಗಳಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗು ಹೊರಹೊಮ್ಮಿದೆ. ಈಗಾಗಲೇ ಬಲಿಷ್ಠ ಆಟಗಾರರನ್ನು ಮುಂಬೈ ಹೊಂದಿದೆ. ಇತ್ತೀಚೆಗೆ ಸ್ಪೋಟಕ ಆಟಗಾರ ಇವಿನ್ ಲಿವೀಸ್ ಅವರನ್ನು ತಂಡದಿಂದ ಕೈ ಬಿಟ್ಟಿತ್ತು. ಈ ಜಾಗಕ್ಕೆ ಟಾಮ್ ಬ್ಯಾಟಮ್ ಅವರನ್ನು ಸೇರ್ಪಡೆಗೊಳಿಸಿ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ಮುಂಬೈ ಇಂಡಿಯನ್ಸ್ ಪಣತೊಟ್ಟಿದೆ.

#2 ಕಿಂಗ್ಸ್‌ XI ಪಂಜಾಬ್

#2 ಕಿಂಗ್ಸ್‌ XI ಪಂಜಾಬ್

ಮೊಹಾಲಿ ಮೂಲದ ಕಿಂಗ್ಸ್‌ XI ಪಂಜಾಬ್ ಇಲ್ಲಿಯ ವರೆಗೆ ಒಂದು ಬಾರಿಯೂ ಟೂರ್ನಿಯಲ್ಲಿ ಗೆಲುವನ್ನು ಕಂಡಿಲ್ಲ. ಈ ಬಾರಿಯ ಬಿಟ್ಟಿಂಗ್‌ನಲ್ಲಿ ಅತ್ಯುತ್ತಮ ತಂಡವನ್ನು ಸಿದ್ಧಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರಿಗೇ ತಂಡದಿಂದ ಖೋಕ್ ಕೊಟ್ಟಿದೆ ಕಿಂಗ್ಸ್‌ ಮ್ಯಾನೇಜ್‌ಮೆಂಟ್. ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಟಾಮ್ ಬ್ಯಾಟಮ್ ಬ್ಯಾಟಿಂಗ್ ಶೈಲಿ ಸಹಕಾರಿಯಾಗಲಿದೆ ಎಂದು ನಿರ್ಧರಿಸಿರುವ ಕಿಂಗ್ಸ್‌ ಟಾಮ್ ಬ್ಯಾಟಮ್ ಸೇರ್ಪಡೆಗೊಳೊಸಲು ನಿರ್ಧರಿಸಿದೆ.

#3 ಚೆನ್ನೈ ಸೂಪರ್‌ ಕಿಂಗ್ಸ್‌

#3 ಚೆನ್ನೈ ಸೂಪರ್‌ ಕಿಂಗ್ಸ್‌

ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಖಾತೆಯಲ್ಲಿ ಈಗ 14.6 ಕೋಟಿ ರೂಪಾಯಿ ಹೊಂದಿದೆ. ಈಗಾಗಲೇ ತಂಡದ ಎಲ್ಲಾ ಆಟಗಾರರೂ 30 ವರ್ಷ ದಾಟಿರುವವರೇ ಆಗಿದ್ದಾರೆ. ಹೀಗಾಗಿ ಯುವ ಕ್ರಿಕೆಟಿಗನನ್ನು ತಂಡಕ್ಕೆ ಸೇರ್ಒಡೆಗೊಳಿಸಬೇಕೆಂಬ ಆಲೋಚನೆಯನ್ನು ಚೈನ್ನೈ ಮಾಲೀಕರು ಮಾಡಿದ್ದಾರೆ. ಬ್ಯಾಟಮ್ ಕೌಂಟಿಯಲ್ಲಿ ಪ್ರತಿನಿಧಿಸುತ್ತಿರುವ ಸೊಮರ್ಸೆಟ್ ತಮಡವನ್ನು ಈಗಾಗಲೇ ಚೈನ್ನೈ ಸಂಪರ್ಕಿಸಿ 13ನೇ ಸೀಸನ್ ಐಪಿಎಲ್‌ಗೆ ಲಭ್ಯತೆಗೆ ಸಂಬಂಧಿಸಿದಂತೆ ವಿಚಾರಿಸಿದೆ ಎಂದೂ ತಿಳಿದುಬಂದಿದೆ. ಬ್ಯಾಟಮ್ ವಿಕೆಟ್ ಕೀಪರ್ ಕೂಡ ಆಗಿರುವುದರಿಂದ ಚೆನ್ನೈ ನಾಯಕ ಎಂ ಎಸ್ ಧೋನಿಗೆ ಸಹಕಾರಿಯಾಗಬಹುದು ಎಂಬುದು ತಂಡದ ಆಲೋಚನೆಯಾಗಿದೆ.

Story first published: Sunday, November 24, 2019, 16:45 [IST]
Other articles published on Nov 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X