ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1983ರ ವಿಶ್ವಕಪ್‌ ಗೆಲುವಿಗೆ 39 ವರ್ಷ: ಕಪಿಲ್ ದೇವ್‌ಗೆ ಒಲಿದು ಬಂದಿರುವ ಪ್ರಶಸ್ತಿಗಳೆಷ್ಟು ಗೊತ್ತಾ?

Kapil dev 1983

ಕ್ರಿಕೆಟ್​ ಲೋಕದ ದಿಗ್ಗಜರಲ್ಲಿ ಒಬ್ಬರಾದ ಕಪಿಲ್​ ದೇವ್​​.. ಕ್ರಿಕೆಟ್ ಅಂಗಳದಲ್ಲಿ ಅದೆಷ್ಟೋ ದಾಖಲೆಗಳನ್ನ ಉಳಿಸಿ ಹೋಗಿದ್ದಾರೆ.. ದೇಶಕ್ಕೆ ಮೊಟ್ಟ ಮೊದಲ ವಿಶ್ವಕಪ್​ ಗೆದ್ದು ಕೊಟ್ಟ ಕೀರ್ತಿ ಸಹ ಇವರಿಗಿದೆ. ಜೂನ್ 25 ಪ್ರತಿ ವರ್ಷ ಬಂದಾಗಲೆಲ್ಲಾ ಇವರನ್ನ ಇಡೀ ಭಾರತದ ಕ್ರಿಕೆಟ್ ಲೋಕ ನೆನಪಿಸಿಕೊಳ್ಳುತ್ತದೆ. ಇದಕ್ಕೆ ಕಾರಣ 1983ರ ಮೊಟ್ಟ ಮೊದಲ ವಿಶ್ವಕಪ್ ಗೆಲುವು.

ಜೂನ್ 25, 2022ಕ್ಕೆ ಸರಿಯಾಗಿ ಭಾರತ ವಿಶ್ವಕಪ್ ಗೆದ್ದು 39 ವರ್ಷಗಳನ್ನೇ ಕಳೆದಿದೆ. ಆದ್ರೆ ಆಂಗ್ಲರ ನಾಡದಲ್ಲಿ ವಿಂಡೀಸ್ ತಂಡವನ್ನ ಮಟ್ಟ ಹಾಕಿ ಗೆದ್ದು ಬಂದ ರೀತಿ ಇನ್ನೂ ಎಲ್ಲರ ಮನದಲ್ಲಿ ಹಚ್ಚ ಹಸುರಾಗಿದೆ. ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದು ಭಾರತ ಕಂಡ ಶ್ರೇಷ್ಟ ಆಲ್‌ರೌಂಡರ್‌ ಕಪಿಲ್ ದೇವ್‌ಗೆ ಇದುವರೆಗೂ ಒಲಿದು ಬಂದ ಪ್ರಶಸ್ತಿ ಮತ್ತು ಅವರ ಖಾಸಗಿ ಜೀವನದ ಕುರಿತು ಮಾಹಿತಿ ಇಲ್ಲಿದೆ.

ಹರಿಯಾಣದ ಹರಿಕೇನ್ ಕಪಿಲ್‌ದೇವ್‌

ಹರಿಯಾಣದ ಹರಿಕೇನ್ ಕಪಿಲ್‌ದೇವ್‌

ಹರಿಯಾಣ ಹರಿಕೇನ್​ ಎಂಬ ಪೆಟ್​ನೇಮ್​ ಉಳ್ಳ ಕಪಿಲ್​ದೇವ್​​ ಕ್ರಿಕೆಟ್​ ಅಂಗಳದಂತೆ ಖಾಸಗಿ ಜೀವನದಲ್ಲೂ ಉತ್ತಮ ವ್ಯಕ್ತಿ. ದೇಶದ ಮೊಟ್ಟ ಮೊದಲ ವಿಶ್ವಕಪ್​ ವಿಜೇತ ಕಪಿಲ್, ಕ್ರಿಕೆಟ್​ ಪ್ರವೇಶದಂತೆ ದಾಂಪತ್ಯ ಜೀವನದ ಪ್ರವೇಶವೂ ಸೊಗಸಾಗಿತ್ತು. 1978ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಕಪಿಲ್​ಗೆ 1979ರಲ್ಲಿ ಕಪಿಲ್​ ಸ್ನೇಹಿತರೊಬ್ಬರಿಂದ ರೋಮಿ ಬಾಟಿಯ ಎಂಬುವರನ್ನ ಪರಿಚಯ ಮಾಡಿಸುತ್ತಾರೆ.

ಮೊದಲ ನೋಟದಲ್ಲೇ ರೋಮಿ ಬಾಟಿಯಾರನ್ನ ಇಷ್ಟ ಪಟ್ಟ ಕಪಿಲ್​ ಆಕೆ ಪರಿಚಯವಾದ ಒಂದೇ ವರ್ಷದಲ್ಲಿ ಪ್ರೊಪೋಸ್ ಮಾಡುತ್ತಾರೆ. ಅಲ್ಲದೇ ಅದೇ ವರ್ಷ 1980ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಪಿಲ್‌ಗಿರುವುದು ಏಕೈಕ ಮುದ್ದಿನ ಮಗಳು ಅಮಿಯಾ ದೇವ್

ಕಪಿಲ್‌ಗಿರುವುದು ಏಕೈಕ ಮುದ್ದಿನ ಮಗಳು ಅಮಿಯಾ ದೇವ್

ಕಪಿಲ್​ ಹಾಗೂ ರೋಮಿ ಬಾಟಿಯ ಸುಖ ದಾಂಪತ್ಯಕ್ಕೆ 1996 ಜನವರಿ 16ರಂದು ಹೆಣ್ಣು ಮಗು ಜನನವಾಯಿತು. ಅಮಿಯಾ ದೇವ್​​ ಎಂಬ ಈ ಮಗು ಕಪಿಲ್ ಹಾಗೂ ರೋಮಿ ಬಾಟಿಯ ದಾಂಪತ್ಯ ಜೀವನವನ್ನ ಮತ್ತಷ್ಟು ಗಟ್ಟಿಗೊಳಿಸಿತು.

1994ರಲ್ಲಿ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಕಪಿಲ್​ 1999 ರಿಂದ 2000ನೇ ಇಸವಿಯವರೆಗೂ ಒಟ್ಟು 10 ತಿಂಗಳ ಕಾಲ ನ್ಯಾಷ್​ನಲ್ ಕ್ರಿಕೆಟ್​ ಕೋಚ್​ ಆಗಿ ಸೇವೆ ಸಲ್ಲಿಸಿದ್ರು. ಆನಂತರ ಗಾಲ್ಫ್​ ಕ್ರೀಡೆಯ ಕಡೆ ತಮ್ಮ ಮನಹರಿಸಿದ್ರು..

T20 ವಿಶ್ವಕಪ್‌ಗೂ ಮುನ್ನ ಕೊಹ್ಲಿ, ರೋಹಿತ್ ಮತ್ತು ರಾಹುಲ್‌ನೊಂದಿಗೆ ಆಯ್ಕೆಗಾರರು ಮಾತನಾಡಲಿ: ಸಾಬಾ ಕರೀಂ

ಕಪಿಲ್‌ ಆಫ್ ದಿ ಫೀಲ್ಡ್ ಅಧಿಕಾರ

ಕಪಿಲ್‌ ಆಫ್ ದಿ ಫೀಲ್ಡ್ ಅಧಿಕಾರ

2000ರಲ್ಲಿ ಲಾರೆಸ್​ ಫೌಂಡೇಶನ್​​ ಸದಸ್ಯರಾದ ಕಪಿಲ್, ಇಯಾನ್​ ಬಾಥಮ್​, ವಿವ್​ ರಿಚರ್ಡ್ಸ್‌​ ರಂತಹ 40 ಖ್ಯಾತ ನಾಮರುಗಳ ಜೊತೆಯಲ್ಲಿ ಲಾರೆಸ್​ ಫೌಂಡೇಶನ್ ಸದಸ್ಯನಾದ ಏಕೈಕ ಏಷ್ಯಾದ ಕ್ರಿಕೆಟಿಗ ಎಂಬ ಹೊಗಳಿಕೆಯು ಈವರಿಗಿದೆ. ಈಗ ಸದ್ಯ 42 ಸದಸ್ಯರನ್ನುಗಳನ್ನು ಈ ಫೌಂಡೇಶನ್​ ಹೊಂದಿದೆ.

ಇನ್ನು ಕಪಿಲ್​ ತಮ್ಮ ಜೀವನದ ಕುರಿತಾದ ಮೂರು ಆಟೋಬಯೋಗ್ರಫಿಗಳನ್ನ ಸಹ ಬರೆದಿದ್ದಾರೆ. 1985ರಲ್ಲಿ ಬೈ ಗಾಡ್ಸ್​ ಡಿಕ್ರಿ ಹಾಗೂ 1987ರಲ್ಲಿ ಕ್ರಿಕೆಟ್​ ಮೈ ಸ್ಟೈಲ್​. 2004ರಲ್ಲಿ ಸ್ಟ್ರೈಟ್​ ಫ್ರಮ್​ ದಿ ಹಾರ್ಟ್‌​ ಎಂಬ ಮೂರು ಆಟೋಬಯೋಗ್ರಫಿಗಳನ್ನ ಬರೆದಿದ್ದಾರೆ.

ಈತ ಕಣಕ್ಕಿಳಿದರೆ ಹಾರ್ದಿಕ್, ದಿನೇಶ್ ಕಾರ್ತಿಕ್ ಮೇಲಿನ ಒತ್ತಡ ಕಡಿಮೆಯಾಗಲಿದೆ: ಸಂಜಯ್ ಮಂಜ್ರೇಕರ್

ಕಪಿಲ್​ ಸಾಧನೆಗೆ ಒಲಿದು ಬಂದ ಪ್ರಶಸ್ತಿಗಳು

ಕಪಿಲ್​ ಸಾಧನೆಗೆ ಒಲಿದು ಬಂದ ಪ್ರಶಸ್ತಿಗಳು

ಕ್ರಿಕೆಟ್ ಅಂಗಳದಲ್ಲಿ ಹಲವು ದಾಖಲೆಗಳನ್ನ ಬರೆದಿದ್ದ ಕಪಿಲ್​ದೇವ್​​ ಸಾಧನೆಗೆ ಪ್ರಶಸ್ತಿ ಸಹ ಒಲಿದುಬಂದಿವೆ. ಸಾಧಕನ ಸಾಧನೆಯನ್ನ ಗುರುತಿಸಿರುವ ಭಾರತ ಸರ್ಕಾರ ಕಪಿಲ್​ರನ್ನ ಸನ್ಮಾನಿಸಿದೆ.
ಪ್ರಶಸ್ತಿ (ವರ್ಷ)
ಅರ್ಜುನ ಪ್ರಶಸ್ತಿ : 1979
ಪದ್ಮ ಶ್ರೀ : 1982
ವಿಸ್ಡಂನ್​ ಕ್ರಿಕೆಟರ್ ಆಫ್​ ದಿ ಇಯರ್: 1983
ಪದ್ಮ ಭೂಷಣ್​ : 1991
ವಿಸ್ಡಂನ್​ ಇಂಡಿಯನ್ ಕ್ರಿಕೆಟರ್​ ಆಫ್​ ದಿ ಸೆಂಚೂರಿ: 2002
ಐಸಿಸಿ ಕ್ರಿಕೆಟ್​ ಹಾಲ್​ ಆಫ್ ಫೇಮ್​: 2010
ಸಿ.ಕೆ. ನಾಯ್ಡು ಲೈಫ್​​ಟೈಮ್​​ ಅಚೀವ್​ಮೆಂಟ್​ ಅವಾರ್ಡ್‌: ​ 2013

ಇಷ್ಟಲ್ಲದೆ 2008 ಸೆಪ್ಟೆಂಬರ್​ 24ರಂದು ಇಂಡಿಯನ್​ ಆರ್ಮಿಯಲ್ಲಿ ಲೆಫ್ಟಿನೆಂಟ್​ ಕೊಲೊನೆಲ್​ ಗೌರವಕ್ಕೂ ಕಪಿಲ್​ ಪಾತ್ರರಾಗಿದ್ದಾರೆ.

ಕಪಿಲ್ ದೇವ್ ವ್ಯವಹಾರಿಕ ಜೀವನ

ಕಪಿಲ್ ದೇವ್ ವ್ಯವಹಾರಿಕ ಜೀವನ

ಇನ್ನು ಬ್ಯುಸಿನೆನ್​​ ವಿಚಾರಕ್ಕೆ ಬಂದ್ರೆ ಕಪಿಲ್​​ ಅಲ್ಲೂ ತಮ್ಮ ಹೆಜ್ಜೆ ಇಟ್ಟಿದ್ದಾರೆ. 2006ರಲ್ಲಿ ಚಂಡೀಘಡದಲ್ಲಿ ಕ್ಯಾಪ್ಟನ್​ ಇಲೆವೆನ್ ಹೋಟೆಲ್​ ಖರೀದಿಸಿದರು. 2002ರಲ್ಲಿ ರಿನೋವೆಟ್​ ಹೋಟೆಲ್​ ಆದ ಕ್ಯಾಪ್ಟನ್ಸ್​ ರಿಟ್ರೀಟ್​ ಹೋಟೆಲ್​ ಸಹ ಇವರ ಒಡೆತನದಲ್ಲಿದೆ. ಇಷ್ಟಲ್ಲದೆ ದೇವ್​ ಮುಸ್ಕೋ ಲೈಟಿಂಗ್ ಪ್ರವೇಟ್​ ಲಿಮಿಟಿಡ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ಭಾರತದಲ್ಲಿ ನಡೆಯುವ ಪ್ರತಿಷ್ಟೀತ ಇವೆಂಟ್ಸ್​ಗಳಿಗೆ ಫ್ಲಡ್​ಲೈಟ್​ ವ್ಯವಸ್ಥೆ ಮಾಡುತ್ತದೆ.

ಸಿನಿಮಾಗಳಲ್ಲೂ ಕಾಣಿಸಿಕೊಂಡಿರುವ ಕಪಿಲ್ ದೇವ್

ಸಿನಿಮಾಗಳಲ್ಲೂ ಕಾಣಿಸಿಕೊಂಡಿರುವ ಕಪಿಲ್ ದೇವ್

ಇನ್ನು ಬೆಳ್ಳಿ ಪರದೆ ಮೇಲು ಕಾಣಿಸಿಕೊಂಡಿರುವ ಕಪಿಲ್​ ದಿಲ್ಲಗಿ ಹೇ ದಿಲ್ಲಗಿ , ಇಕ್ಬಾಲ್​​, ಮುಜ್​ ಸೇ ಶಾದಿ ಕರೋಗಿ ಎಂಬ ಹಿಂದಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲ ತಿಂಗಳುಗಳ ಹಿಂದಷ್ಟೇ ಕಪಿಲ್ ಹಾಗೂ 1983ರ ವಿಶ್ವಕಪ್ ಗೆಲುವಿನ ತಂಡದ ಕುರಿತಾಗಿ ನಟ ರಣವೀರ್ ಸಿಂಗ್ ನಟನೆಯ 83 ಚಿತ್ರವು ಬಿಡುಗಡೆಗೊಂಡು ಯಶಸ್ವಿಯಾಗಿದೆ.

ಒಟ್ಟಿನಲ್ಲಿ ವರ್ಣರಂಜಿತ ಜೀವನವನ್ನ ಸಾಗಿಸುತ್ತಿರುವ ಕಪಿಲ್ ಸಾಧನೆ ಎಂದಿಗೂ ಅಜರಾಮರ. ಕ್ರಿಕೆಟ್​​ ಲೋಕದಲ್ಲಿ ಆತನ ಸಾಧನೆಗಳು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಭಾರತ ಕ್ರಿಕೆಟ್​​​ ರಂಗದಲ್ಲಿ ಬಹು ಎತ್ತರದ ಸ್ಥಾನ ಪಡೆದಿರುವ ಕಪಿಲ್ ದೇವ್ ಹೆಸರು ಕ್ರಿಕೆಟ್​ ಇರುವವರೆಗೂ ಮರೆಯಲು ಸಾಧ್ಯವಿಲ್ಲ.

ಕಪಿಲ್ ದೇವ್ ಸಾಧನೆಯನ್ನ ನೆನಪಿಸಿಕೊಂಡ ಸಚಿನ್

1983ರ ವಿಶ್ವಕಪ್ ಗೆದ್ದು ಜೂನ್ 25ಕ್ಕೆ 39 ವರ್ಷ ತುಂಬುತ್ತಿದ್ದಂತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಕಪಿಲ್ ದೇವ್ ವಿಶ್ವಕಪ್ ಎತ್ತಿಹಿಡಿದ ಫೋಟೋ ಜೊತೆಗೆ, ಅದೇ ಸಮಯದಲ್ಲಿ ತನ್ನ ಬಾಲ್ಯದ ಜೀವನದ ಕುರಿತಾದ ಚಿತ್ರದ ಫೋಟೋವನ್ನ ಹಂಚಿಕೊಂಡಿದ್ದಾರೆ.

''ಜೀವನದ ಕೆಲವು ಕ್ಷಣಗಳು ನಿಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಕನಸು ಕಾಣಲು ನಿಮಗೆ ಧೈರ್ಯವನ್ನು ನೀಡುತ್ತವೆ. 1983ರ ವಿಶ್ವಕಪ್ ಈ ದಿನ ನಾವು ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದ್ದೇವೆ. ಭವಿಷ್ಯದಲ್ಲಿ ನಾನು ಏನು ಮಾಡಬೇಕೆಂದು ನನಗೆ ಆಗ ತಿಳಿದಿತ್ತು'' ಎಂದು ಸಚಿನ್ ತೆಂಡೂಲ್ಕರ್ ಭಾರತದ ಮೊದಲ ವಿಶ್ವಕಪ್ ಗೆಲುವನ್ನು ಮೆಲುಕು ಹಾಕಿದ್ದಾರೆ.

Story first published: Saturday, June 25, 2022, 17:53 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X