ರಾಜಸ್ಥಾನ್‌ ರಾಯಲ್ಸ್ ಪರ 3D ಪ್ಲೇಯರ್ ಬೆನ್‌ ಸ್ಟೋಕ್ಸ್‌ ಮಿಂಚು

ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಕಿಂಗ್ಸ್‌ ಇಲವೆನ್ ಪಂಜಾಬ್ ಪರ ರಾಜಸ್ಥಾನ್ ರಾಯಲ್ಸ್ ಅಬ್ಬರದ ಗೆಲುವು ದಾಖಲಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿತು. ಪಂಜಾಬ್ ನೀಡಿದ 186ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ ಸುಲಭವಾಗಿ ಗುರಿ ಮುಟ್ಟಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ಪ್ರಮುಖ ಕಾರಣ ಓಪನರ್ ಬೆನ್‌ಸ್ಟೋಕ್ಸ್‌. ತಂಡಕ್ಕೆ ಅಗತ್ಯವಾದ ರೀತಿಯಲ್ಲಿ ಸ್ಫೋಟಕ ಆರಂಭ ಒದಗಿಸಿಕೊಟ್ಟ ಇಂಗ್ಲೀಷ್ ಆಲ್‌ರೌಂಡರ್ 23 ಎಸೆತಗಳಲ್ಲಿ 50 ರನ್ ಸಿಡಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

1000 ಸಿಕ್ಸರ್ ಸಿಡಿಸಿದ ಕ್ರಿಸ್‌ಗೇಲ್: ಯಾವ ತಂಡದ ಪರ ಎಷ್ಟು?

ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲದೆ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಬೆನ್‌ಸ್ಟೋಕ್ಸ್ ಮಿಂಚು ಹರಿಸಿದ್ದರು. ಓಪನರ್ ಆಗಿ ಕಣಕ್ಕಿಳಿಯುವ ಮುನ್ನ ರಾಯಲ್ಸ್ ಪರ ನಾಲ್ಕು ಓವರ್ ಬೌಲ್ ಮಾಡಿದ್ದ ಸ್ಟೋಕ್ಸ್ 32ರನ್‌ ನೀಡಿ ಕೆ.ಎಲ್ ರಾಹುಲ್ ಮತ್ತು ನಿಕೋಲಸ್ ಪೂರನ್‌ನಂತಹ ಪ್ರಮುಖ ಬ್ಯಾಟ್ಸ್‌ಮನ್ ವಿಕೆಟ್ ಪಡೆದರು.

ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ ತನ್ನ ಖದರ್ ಪ್ರದರ್ಶಿಸಿದ ಬೆನ್‌ಸ್ಟೋಕ್ಸ್ ಜೊಫ್ರಾ ಆರ್ಚರ್‌ ಮೊದಲ ಓವರ್‌ನಲ್ಲಿ ಮಂದೀಪ್‌ ಸಿಂಗ್‌ರ ಅದ್ಭುತ ಕ್ಯಾಚ್ ಹಿಡಿದು ತಂಡಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟಿದ್ದರು.

ಹೀಗಿ ಬ್ಯಾಟಿಂಗ್, ಬೌಲಿಂಗ್ , ಫೀಲ್ಡಿಂಗ್ ಮೂರರಲ್ಲೂ ಅದ್ಭುತ ಪ್ರದರ್ಶನ ನೀಡಿದ, ಮತ್ತು ನೀಡಬಲ್ಲ ಕಂಪ್ಲೀಟ್ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಓರ್ವ 3D ಪ್ಲೇಯರ್ ಎಂದರೆ ತಪ್ಪಾಗಲಾರದು. ರಾಯಲ್ಸ್‌ ಪರ ಮೈದಾನದಲ್ಲಿ ತಮ್ಮ ಅತ್ಯಂತ ಉತ್ತಮವಾದ ಪ್ರದರ್ಶನಕ್ಕೆ ಸ್ಟೋಕ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡ್ರು.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, October 31, 2020, 0:26 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X