ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಹೈಲೈಟ್ಸ್: ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ

3rd T20i: Pakistan Won By 5 Runs Against England; Draw Series 1-1

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಗೆಲುವು ಸಾಧಿಸಿದ್ದು ಸರಣಿ ಸಮಬಲಗೊಂಡಿದೆ. ಸರಣಿಯ ಮೊದಲ ಪಂದ್ಯ ಮಳೆಯ ಕಾರಣದಿಣದಾಗಿ ಫಲಿತಾಂಶ ಪಡೆಯದೆ ರದ್ದಾಗಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ದೊರೆಯದಿದ್ದರೂ ಮಧ್ಯಮ ಕ್ರಮಾಂಕದ ಆಟಗಾರರಾದ ಹೈದರ್ ಅಲಿ ಹಾಗೂ ಮೊಹಮದ್ ಹಫೀಜ್ ಭರ್ಜರಿ ಪ್ರದರ್ಶನ ನೀಡಿದರು. ಸ್ಪೋಟಕ ಆಟವನ್ನಾಡಿದ ಈ ಜೋಡಿ 3ನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ವಿಕೆಟ್ ಒಪ್ಪಿಸಿದರು.

ಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರುಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರು

ಮಿಂಚಿದ ಹೈದರ್-ಹಫೀಜ್

ಮಿಂಚಿದ ಹೈದರ್-ಹಫೀಜ್

ಪದಾರ್ಪಣಾ ಪಂದ್ಯವನ್ನಾಡಿದ ಯುವ ಆಟಗಾರ ಹೈದರ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯದಲ್ಲೇ ಭರವಸೆಯನ್ನು ಮೂಡಿಸಿದರು. 33 ಎಸೆತಗಳನ್ನು ಎದುರಿಸಿದ ಹೈದರ್ ಅಲಿ 54 ರನ್ ಗಳಿಸಿದರೆ ಮೊಹಮ್ಮದ್ ಹಫೀಜ್ ಈ ಪಂದ್ಯದಲ್ಲೂ ಅರ್ಧ ಶತಕವವನ್ನು ಸಿಡಿಸಿ ಪಾಕಿಸ್ತಾನದ ಇನ್ನಿಂಗ್ಸ್‌ಗೆ ಆಧಾರವಾದರು. 52 ಎಸೆತ ಎದುರಿಸಿದ ಹಫೀಜ್ 86 ರನ್ ಗಳಿಸಿ ಅಜೇಯವಾಗುಳಿದರು. ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡ ಪಾಕಿಸ್ತಾನ 190 ರನ್ ಗಳಿಸಿತು.

ಗೆಲ್ಲುವ ಭರವಸೆ ಹೊಂದಿದ್ದ ಇಂಗ್ಲೆಂಡ್

ಗೆಲ್ಲುವ ಭರವಸೆ ಹೊಂದಿದ್ದ ಇಂಗ್ಲೆಂಡ್

ಪಾಕಿಸ್ತಾನ ನೀಡಿದ 191 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಈ ಪಂದ್ಯದಲ್ಲೂ ಭರ್ಜರಿಯಾಗಿ ಗೆಲ್ಲುವ ಭರವಸೆಯನ್ನು ಹೊಂದಿತ್ತು. ಆದರೆ ಪಾಕ್ ಬೌಲರ್‌ಗಳು ಅದಕ್ಕೆ ಹೆಚ್ಚಿನ ಅವಕಾಶವನ್ನು ಕೊಡಲಿಲ್ಲ. ಒಂದು ಹಂತದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುತ್ತದೆ ಎಂಬ ಸ್ಥಿತಿಗೆ ತಲುಪಿದ್ದರೂ 19ನೇ ಓವರ್‌ನಲ್ಲಿ ಪಾಕ್ ಪಂದ್ಯವನ್ನು ಇಂಗ್ಲೆಂಡ್ ಕಡೆಯಿಂದ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

19ನೇ ಓವರ್‌ ಟರ್ನಿಂಗ್ ಪಾಯಿಂಟ್

19ನೇ ಓವರ್‌ ಟರ್ನಿಂಗ್ ಪಾಯಿಂಟ್

18 ಓವರ್‌ ಪೂರ್ಣ ಗೊಳ್ಳುವ ವೇಳೆ ಇಂಗ್ಲೆಂಡ್ ತಂಡ 171 ರನ್‌ಗಳಿಸಿ 6 ವಿಕೆಟ್ ಕಳೆದುಕೊಂಡಿತ್ತು. ಮುಂದಿನ 2 ಎಸೆತಗಳಲ್ಲಿ ಇಂಗ್ಲೆಂಡ್‌ಗೆ ಅಗತ್ಯವಿದ್ದಿದ್ದು 20 ರನ್‌ಗಳು. ಸೆಟ್ಲ್ ಬ್ಯಾಟ್ಸ್‌ಮನ್ ಮೊಯೀನ್ ಅಲಿ ಭರ್ಜರಿ ಅರ್ಧ ಶತಕವನ್ನು ದಾಟಿ ಮುನ್ನಗ್ಗುತ್ತಿದ್ದರು. ಆದರೆ 19 ನೇ ಓವರ್‌ನಲ್ಲಿ ಆಗಷ್ಟೇ ಕ್ರೀಸ್‌ಗೆ ಬಂದಿದ್ದ ಜೋರ್ಡನ್ ರನ್‌ಔಟ್ ಬಲೆಗೆ ಬಿದ್ದರೆ ಮೊಯೀನ್ ಅಲಿ ರಿಯಾಜ್ ಎಸೆತಕ್ಕೆ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಎನಿಸಿತು.

5 ರನ್‌ಗಳಿಂದ ಪಾಕ್‌ಗೆ ಶರಣು

5 ರನ್‌ಗಳಿಂದ ಪಾಕ್‌ಗೆ ಶರಣು

ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್‌ಗೆ 17 ರನ್‌ಗಳ ಅಗತ್ಯವಿತ್ತು. ಅಂತಿಮವಾಗಿ ಇಂಗ್ಲೆಂಡ್ 185 ರನ್ ಗಳಿಸಲಷ್ಟೇ ಶಕ್ತವಾಗಿ ಪಾಕಿಸ್ತಾನಕ್ಕೆ 5 ರನ್‌ಗಳ ಅಂತರದಿಂದ ಶರಣಾಯಿತು. ಈ ಮೂಲಕ ಟಿ20 ಸರಣಿಯನ್ನು ಪಾಕಿಸ್ತಾನ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

Story first published: Wednesday, September 2, 2020, 15:22 [IST]
Other articles published on Sep 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X