ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯಿಲ್ಲ, ಆದರೆ ನಾಲ್ವರು ಭಾರತೀಯರು: ಹಾಗ್ ಹೆಸರಿಸಿದ ಹಾಲಿ ವಿಶ್ವ ಬೆಸ್ಟ್ ಟೆಸ್ಟ್ ತಂಡ ಹೇಗಿದೆ ನೋಡಿ!

4 Indians But No Virat Kohli In Brad Hogg’s Current World Test Xi

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವುದೇ ಮಾದರಿಯಲ್ಲಿ ಪ್ರಸಕ್ತ ವಿಶ್ವ ಆಡುವ ಬಳಗವನ್ನು ಹೆಸರಿಸಿದರು ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿಮ್ಮ ಅನಿಸಿಕೆಯಾ? ನಿಮ್ಮ ಅನಿಸಿಕೆ ತಪ್ಪು. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಆಯ್ಕೆಗಾರರಾದರೆ ಕೊಹ್ಲಿಗೆ ವಿಶ್ವ ಹಾಲಿ ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲ.

ಹಾಲಿ ಹಾಗೂ ಮಾಜಿ ಆಟಗಾರರು ತಮ್ಮ ಬೆಸ್ಟ್ ಆಡುವ ಬಳಗವನ್ನು ಹೆಸರಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಬ್ರಾಡ್ ಹಾಗ್ ಕೂಡ ತಮ್ಮ ಅನಿಸಿಕೆಯ ಪ್ರಸಕ್ತ ಬೆಸ್ಟ್ ತಂಡವನ್ನು ಹೆಸರಿಸಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರಿಗೆ ಅವಕಾಶವನ್ನು ನೀಡಿದ್ದಾರೆ ಹಾಗ್. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿಲ್ಲ.

ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್

ಈ ತಂಡದಿಂದ ಕೊಹ್ಲಿಯನ್ನು ಹೊರಗಿಡಲು ಹಾಗ್ ಬಳಿ ಪ್ರಮುಖ ಕಾರಣಗಳು ಇವೆ. ಈ ತಂಡದ ಬಗ್ಗೆ ಬ್ರಾಡ್ ಹಾಗ್ ಏನು ಹೇಳುತ್ತಾರೆ. ಯಾಕೆ ಕೊಹ್ಲಿ ಸ್ಥಾನ ಪಡೆದುಕೊಂಡಿಲ್ಲ ಮುಂದೆ ಓದಿ.

ಭಾರತೀಯರು ಮತ್ತು ಆಸಿಸ್ ಆಟಗಾರರೇ ಹೆಚ್ಚು

ಭಾರತೀಯರು ಮತ್ತು ಆಸಿಸ್ ಆಟಗಾರರೇ ಹೆಚ್ಚು

ಬ್ರಾಡ್ ಹಾಜ್ ಹೆಸರಿಸಿದ ಪ್ರಸಕ್ತ ಅತ್ಯುತ್ತಮ ತಂಡದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತೀಯ ಆಟಗಾರರೇ ತುಂಬಿಕೊಂಡಿದ್ದಾರೆ. ಈ ತಂಡದಲ್ಲಿ ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಮತ್ತು ಭಾರತದ ನಾಲ್ವರು ಆಟಗಾರರು ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ತಲಾ ಒಬ್ಬರಂತೆ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಆಟಗಾರರಿದ್ದಾರೆ.

ಹಾಜ್ ತಂಡದಲ್ಲಿ ಸ್ಥಾನ ಪಡೆದ ಭಾರತೀಯರು?

ಹಾಜ್ ತಂಡದಲ್ಲಿ ಸ್ಥಾನ ಪಡೆದ ಭಾರತೀಯರು?

ಬ್ರಾಡ್ ಹಾಜ್ ಹೆಸರಿಸಿದ ಈ ತಂಡದಲ್ಲಿ ಆರಂಭಿಕರಿಬ್ಬರೂ ಭಾರತೀಯರೇ ಆಗಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಅವಕಾಶವನ್ನು ಗಿಟ್ಟಸಿಕೊಂಡಿದ್ದಾರೆ. ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡದುಕೊಂಡಿದ್ದರೆ ವೇಗದ ಬೌಲರ್‌ ಮೊಹಮದ್ ಶಮಿ ಬೌಲಿಂಗ್ ವಿಭಾಗಕ್ಕೆ ಹೆಸರಿಸಲ್ಪಟ್ಟಿದ್ದಾರೆ.

ಡಿ ಕಾಕ್ ನಾಯಕ, ಪಾಕ್‌ನ ಬಾಬರ್ ಅಜಮ್‌ಗೆ 5ನೇ ಕ್ರಮಾಂಕ

ಡಿ ಕಾಕ್ ನಾಯಕ, ಪಾಕ್‌ನ ಬಾಬರ್ ಅಜಮ್‌ಗೆ 5ನೇ ಕ್ರಮಾಂಕ

ವಿಕೆಟ್ ಕೀಪಿಂಗ್ ಮತ್ತು ನಾಯಕತ್ವದ ಜವಾಬ್ಧಾರಿಯನ್ನು ಬ್ರಾಡ್ ಹಾಜ್ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್‌ಗೆ ನೀಡಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ ಸೀಮಿತ ಓವರ್‌ಗಳ ನಾಯಕ ಬಾಬಲ್ ಅಜಮ್ ಐದನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ನೀಲ್ ವ್ಯಾಗ್ನರ್ ಮಧ್ಯಮ ವೇಗದ ಬೌಲರ್ ಅಗಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಆಸಿಸ್ ಆಟಗಾರರು ಯಾರೆಲ್ಲಾ?

ಆಸಿಸ್ ಆಟಗಾರರು ಯಾರೆಲ್ಲಾ?

ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಜ್ ಈ ತಂಡದಲ್ಲಿ ನಾಲ್ವರು ಆಸ್ಟ್ರೇಲಿಯಾ ಆಟಗಾರರನ್ನು ಹೆಸರಿಸಿದ್ದಾರೆ. ಆಸಿಸ್ ಕ್ರಿಕೆಟ್‌ನ ಹೊಸ ಸೆನ್ಸೇಶನ್ ಮರ್ನಾಸ್ ಲ್ಯಾಬುಶೈನ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ವೇಗದ ಬೌಲಿಂಗ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವಕಾಶ ಪಡೆದರೆ ಸ್ಪಿನ್ನರ್ ನಥನ್ ಲಯನ್ ಅವರನ್ನು ಏಕೈಕ ಸ್ಪಿನ್ನರ ್ಆಗಿ ಆಯ್ಕೆ ಮಾಡಲಾಗಿದೆ.

ಕೊಹ್ಲಿಗೆ ಯಾಕಿಲ್ಲ ಅವಕಾಶ?

ಕೊಹ್ಲಿಗೆ ಯಾಕಿಲ್ಲ ಅವಕಾಶ?

ಈ ತಂಡದಲ್ಲಿ ಕೊಹ್ಲಿಯನ್ನು ಯಾಕೆ ಕೈ ಬಿಡಲಾಗಿದ ಎಂಬುದು ನನ್ನನ್ನು ಹಲವರು ಪ್ರಶ್ನಿಸುತ್ತಿದ್ದಾರೆ ಎಂದು ಬ್ರಾಡ್ ಹಾಜ್ ಹೇಳಿಕೊಂಡಿದ್ದು ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. ಸದ್ಯದ ಫಾರ್ಮ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತಂಡವನ್ನು ಹೆಸರಿಸಲಾಗಿದೆ. ಕಳೆದ 15 ಇನ್ನಿಂಗ್ಸ್‌ಗಳಲ್ಲಿ ಕೇವಲ ನಾಲ್ಕರಲ್ಲಿ ಮಾತ್ರವೇ ಕೊಹ್ಲಿ 31ರ ಗಡಿ ದಾಟಿದ್ದಾರೆ ಎಂದು ಕಾರಣವನ್ನು ಬಿಚ್ಚಿದ್ದಾರೆ.

ಬ್ರಾಜ್ ಹಾಜ್ ಹೆಸರಿಸಿದ ಪ್ರಸಕ್ತ ಬೆಸ್ಟ್ ಟೆಸ್ಟ್ ತಂಡ ಹೀಗಿದೆ

ಬ್ರಾಜ್ ಹಾಜ್ ಹೆಸರಿಸಿದ ಪ್ರಸಕ್ತ ಬೆಸ್ಟ್ ಟೆಸ್ಟ್ ತಂಡ ಹೀಗಿದೆ

ಮಾಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಮಾರ್ನಸ್ ಲಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಬಾಬರ್ ಅಜಮ್, ಅಜಿಂಕ್ಯ ರಹಾನೆ, ಕ್ವಿಂಟನ್ ಡಿ ಕಾಕ್ (ನಾಯಕ ಮತ್ತು ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮೊಹಮ್ಮದ್ ಶಾಮ್, ನೀಲ್ ವ್ಯಾಗ್ನರ್, ನಾಥನ್ ಲಿಯಾನ್.

Story first published: Sunday, May 24, 2020, 12:22 [IST]
Other articles published on May 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X