ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

4 ODI Performances That Couldn’t Win Matches But Won Many Hearts

ಬೆಂಗಳೂರು: ಒಮ್ಮಿಂದೊಮ್ಮೆ ಹೃದಯವನ್ನೇ ಛಿದ್ರಗೊಳಿಸಬಲ್ಲ ಆಟವಾಗಿ ಕ್ರಿಕೆಟ್ ಬದಲಾಗಬಲ್ಲದು. ಒಬ್ಬ ಆಟಗಾರ ಪಂದ್ಯ ಗೆಲ್ಲುವುದಕ್ಕಾಗಿ ಅವಿರತ ಸೆಣಸಾಡಿದ ಹೊರತಾಗಿಯೂ ತಂಡ ಪಂದ್ಯ ಸೋತುಬಿಡುತ್ತದೆ. ವಿಜಯಕ್ಕಾಗಿ ಏಕಾಂಗಿ ಹೋರಾಟ ನಡೆಸಿದ ಆಟಗಾರನಷ್ಟೇ ಅಲ್ಲ, ಆತನ ತಂಡ, ತಂಡದ ಅಭಿಮಾನಿಗಳಿಗೂ ಕುಸಿದು ಕೂರುವಷ್ಟು ಬೇಸರವಾಗಿಬಿಡುತ್ತದೆ. ಆದರೆ ಒಮ್ಮೆ ಆಟ ಮುಗಿದ ಮೇಲೆ ಮುಗಿಯಿತು. ಬಂದ ಫಲಿತಾಂಶವನ್ನು ಮತ್ತೆ ಬದಲಾಯಿಸಲಾಗೋಲ್ಲ.

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!

ಹಾಗಂತ ಪಂದ್ಯ ಸೋತರೂ ತಂಡದ ಗೆಲುವಿಗಾಗಿ ತನ್ನ ಕೈ ಮೀರಿ ಹೋರಾಟ ನಡೆಸಿರುತ್ತಾನಲ್ಲ? ಆ ಆಟಗಾರ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿರುತ್ತಾನೆ. ಕ್ರಿಕೆಟ್‌ ಇತಿಹಾಸದಲ್ಲಿ ಇಂಥ ಅನೇಕ ಪಂದ್ಯಗಳು ಕಾಣಸಿಕ್ಕಿವೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿರುವ 5 ಅತೀ ಕೆಟ್ಟ ಬೌಲಿಂಗ್ ದಾಖಲೆಗಳು!ಟಿ20 ವಿಶ್ವಕಪ್ ಇತಿಹಾಸದಲ್ಲಿರುವ 5 ಅತೀ ಕೆಟ್ಟ ಬೌಲಿಂಗ್ ದಾಖಲೆಗಳು!

ಪಂದ್ಯ ಸೋತರೂ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿರುವ ಏಕದಿನ ಕ್ರಿಕೆಟ್‌ನ 4 ಅದ್ಭುತ ಪ್ರದರ್ಶನಗಳ ಕುತೂಹಲಕಾರಿ ಮಾಹಿತಿ ಇಲ್ಲಿದೆ.

1. ಸಚಿನ್ ತೆಂಡೂಲ್ಕರ್

1. ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ಅನೇಕ ಬಾರಿ ಟೀಮ್ ಇಂಡಿಯಾ ಗೆಲ್ಲಿಸಲು ಕೊಸರಾಡಿದ್ದನ್ನು ಕ್ರಿಕೆಟ್ ಜಗತ್ತು ಕಂಡಿದೆ. ಇದಕ್ಕೆ ಒಳ್ಳೆ ನಿದರ್ಶನವೆಂದರೆ 2009ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಭಾರತ vs ಆಸ್ಟ್ರೇಲಿಯಾ ಪಂದ್ಯ. ಆವತ್ತು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕಾಂಗರೂ ಪಡೆ ಶೇನ್ ವಾಟ್ಸನ್ 93, ಶಾನ್ ಮಾರ್ಷ್ 112 ರನ್‌ನೊಂದಿಗೆ 50 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ ಭರ್ಜರಿ 350 ರನ್ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ ಭಾರತ ಪರ ಸಚಿನ್ 141 ಎಸೆತಗಳಿಗೆ 175 ರನ್ ಸಿಡಿಸಿದ್ದರು. ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ಸಚಿನ್ ಆವತ್ತು 47.1ನೇ ಓವರ್‌ವರೆಗೆ ಅಂದರೆ ತಂಡದ ಮೊತ್ತ 332 ರನ್ ಬರುವವರೆಗೂ ಸೆಣಸಾಡಿ ಮತ್ತೆ ಔಟಾಗಿದ್ದರು. ಭಾರತ ಆ ಪಂದ್ಯದಲ್ಲಿ 49.4ನೇ ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 347 ರನ್ ಬಾರಿಸಿ ಕೇವಲ 3 ರನ್‌ನಿಂದ ಸೋತಿತ್ತು.

2. ನ್ಯೂಜಿಲೆಂಡ್

2. ನ್ಯೂಜಿಲೆಂಡ್

ಈ ಪಂದ್ಯದಲ್ಲಿ ಒಬ್ಬನೇ ಒಬ್ಬ ಆಟಗಾರನನ್ನು ಮೆಚ್ಚಿಕೊಳ್ಳುವುದಕ್ಕಿಂತ ಇಡೀ ತಂಡವನ್ನೇ ಶ್ಲಾಘಿಸಿದರೆ ಹೆಚ್ಚು ಸಮಂಜಸ. ಅಂದ್ಹಾಗೆ ಇದು 2019ರ ವಿಶ್ವಕಪ್ ಫೈನಲ್ ಕತೆ. ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ 241/8 (50 Ov) ಸ್ಕೋರ್ ಮಾಡಿತ್ತು. ಚೇಸಿಂಗ್ ಮಾಡಿದ್ದ ಇಂಗ್ಲೆಂಡ್ ಕೂಡ 241-10 (50) ಸ್ಕೋರ್‌ ಮಾಡಿ ಪಂದ್ಯವನ್ನು ಟೈ ಮಾಡಿಕೊಂಡಿತು. ಅನಂತರ ನಡೆದ ಸೂಪರ್ ಓವರ್‌ ಕೂಡ ಸಮಬಲಗೊಂಡಿತು. ಕೊನೆಗೆ ಬೌಂಡರಿ ಕೌಂಟ್‌ ಆಧಾರದಲ್ಲಿ ಇಂಗ್ಲೆಂಡ್ ಅನ್ನು ವಿಜಯಿ ಎಂದು ಘೋಷಿಸಲಾಯ್ತು. ಆವತ್ತು ಟ್ರೋಫಿಯೇನೋ ಇಂಗ್ಲೆಂಡ್ ಗೆದ್ದಿತ್ತು. ಆದರೆ ಅಭಿಮಾನಿಗಳ ಪ್ರಕಾರ ಆವತ್ತು ನ್ಯೂಜಿಲೆಂಡ್ ಗೆದ್ದಿತ್ತು. ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಆ ದಿನ ಕೇನ್ ವಿಲಿಯಮ್ಸನ್ ಪಡೆ ಗೆದ್ದಿತ್ತು.

3. ಮಿಚೆಲ್ ಸ್ಟಾರ್ಕ್

3. ಮಿಚೆಲ್ ಸ್ಟಾರ್ಕ್

2015ರ ವಿಶ್ವಕಪ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅದ್ಭುತ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ನಡುವಿನ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಆಸೀಸ್ ವೇಗಿ ಸ್ಟಾರ್ಕ್ ಮನ ಗೆದ್ದಿದ್ದರು. ಆ ದಿನಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳ ಬೌಲಿಂಗ್ ಬಣ ಬಲಿಷ್ಠವಾಗಿತ್ತು. ಹೀಗಾಗಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವನ್ನು ನ್ಯೂಜಿಲೆಂಡ್ 151 ರನ್‌ಗೆ ಆಲ್ ಔಟ್ ಮಾಡಿತು. ಚೇಸಿಂಗ್‌ಗೆ ಇಳಿದ ಕಿವೀಸ್ ತಂಡವನ್ನೂ ಆಸ್ಟ್ರೇಲಿಯಾ ಬೌಲರ್‌ಗಳು ಕಾಡಹತ್ತಿದ್ದರು. ಮುಖ್ಯವಾಗಿ ವೇಗಿ ಮಿಚೆಲ್ ಸ್ಟಾರ್ಕ್ ದಾಳಿ ನಡೆಸಿದ್ದರು. ಆವತ್ತು ಸ್ಟಾರ್ಕ್ ಕೇವಲ 28 ರನ್ನಿಗೆ ನ್ಯೂಜಿಲೆಂಡ್‌ನ 6 ವಿಕೆಟ್‌ಗಳನ್ನು ಕೆಡವಿದ್ದರು. ಪಂದ್ಯ ಕೂಡ ರೋಚಕ ಹಂತಕ್ಕೆ ತಲುಪಿತ್ತು. ಆದರೆ ಕೊನೇ ಕ್ಷಣದಲ್ಲಿ ನ್ಯೂಜಿಲೆಂಡ್ ರೋಚಕ 1 ವಿಕೆಟ್‌ನಿಂತ ಪಂದ್ಯ ಗೆದ್ದಿತು.

4. ರವೀಂದ್ರ ಜಡೇಜಾ

4. ರವೀಂದ್ರ ಜಡೇಜಾ

ಈ ಪಂದ್ಯ ಕೂಡ ಭಾರತೀಯರ ಕ್ರಿಕೆಟ್‌ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ನೆನಪಾಗಿ ಉಳಿದಿರುತ್ತದೆ. ಈ ಪಂದ್ಯವೂ 2019ರ ವಿಶ್ವಕಪ್‌ನದ್ದು. ಆವತ್ತು ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮೈದಾನಕ್ಕಿಳಿದಿತ್ತು. ನ್ಯೂಜಿಲೆಂಡ್ ನೀಡಿದ್ದ 239 ರನ್ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿ 5 ರನ್ ಬಾರಿಸಿದ್ದಾಗ 3 ಪ್ರಮುಖ ವಿಕೆಟ್‌ಗಳನ್ನು ಕಳೆದು ಆಘಾತ ಅನುಭವಿಸಿತ್ತು. 8ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಆಲ್ ರೌಂಡರ್ ಜಡೇಜಾ ಸೋಲಿನಂಚಿನಲ್ಲಿದ್ದ ಭಾರತ ಗೆಲ್ಲಿಸುವ ನಿರೀಕ್ಷೆ ಮೂಡಿಸಿದ್ದರು. 59 ಎಸೆತಗಳಿಗೆ 77 ರನ್ ಬಾರಿಸಿದ್ದ ಜಡೇಜಾ ತಂಡ ಗೆಲ್ಲಿಸುವ ಪಣ ತೊಟ್ಟಂತೆ ಆಡುತ್ತಿದ್ದರು. ಆದರೆ 47.5ನೇ ಓವರ್‌ನಲ್ಲಿ ಜಡ್ಡು ವಿಕೆಟ್ ಪತನಗೊಂಡಿತು. 49.3 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 221 ರನ್ ಬಾರಿಸಿದ್ದ ಭಾರತ ಕೇವಲ 18 ರನ್‌ನಿಂದ ಶರಣಾಗಿತ್ತು. ಭಾರತ ಪಂದ್ಯ ಸೋತಿತಾದರೂ ಜಡೇಜಾ ಆ ಪಂದ್ಯದಲ್ಲಿ ಹೀರೋ ಆಗಿ ಮಿನುಗಿದ್ದರು.

Story first published: Tuesday, June 9, 2020, 12:46 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X