ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ನಿವೃತ್ತಿ ಬಳಿಕ ಸುರೇಶ್ ರೈನಾ ಆಡಬಲ್ಲ 4 ವಿದೇಶಿ ಟಿ20 ಲೀಗ್‌ ಫ್ರಾಂಚೈಸಿಗಳು

Suresh raina

ಟೀಂ ಇಂಡಿಯಾ ಸೂಪರ್ ಸ್ಟಾರ್, ಎಡಗೈ ಬ್ಯಾಟರ್ ಸುರೇಶ್‌ ರೈನಾ ಮಂಗಳವಾರ ದೇಶೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ. ಐಪಿಎಲ್‌ 2022ರ ಸೀಸನ್‌ನಲ್ಲಿ ಯಾವ ತಂಡಕ್ಕೂ ಬಿಕರಿಯಾಗದ ರೈನಾ, ವಿದೇಶಿ ಟಿ20 ಲೀಗ್‌ ಆಡಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ರೈನಾ ಭರ್ಜರಿ ಅಭ್ಯಾಸ ಶುರು ಮಾಡಿದ್ದರು. ತನ್ನ ನಾಯಕ ಹಾಗೂ ಪ್ರಾಣ ಸ್ನೇಹಿತ ಎಂ.ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಾನೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್‌ಗೆ ಗುಡ್‌ಬೈ ಹೇಳಿದ ರೈನಾ ಕಳೆದ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದಿಂದ ಹೊರಬಿದ್ದಿದ್ದಲ್ಲದೆ ಯಾವುದೇ ಫ್ರಾಂಚೈಸಿಯ ಮನ ಗೆಲ್ಲುವಲ್ಲಿ ವಿಫಲಗೊಂಡರು.

ಕಳೆದ ಐಪಿಎಲ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗೂ ಬೇಡವಾಗದ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಬೇಕೆನ್ನುವ ಹೊತ್ತಿನಲ್ಲಿ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಐಪಿಎಲ್ ಆಡದೇ ಇದ್ದರೆ ಏನು ವಿದೇಶ ಟಿ20 ಲೀಗ್‌ಗಳಲ್ಲಿ ಕಾಣಿಸಿಕೊಳ್ಳಲು ಈ ಎಡಗೈ ಬ್ಯಾಟರ್‌ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.

ಸುರೇಶ್ ರೈನಾ ಹೆಸರಲ್ಲಿದೆ ಅನೇಕ ದಾಖಲೆಗಳು

ಸುರೇಶ್ ರೈನಾ ಹೆಸರಲ್ಲಿದೆ ಅನೇಕ ದಾಖಲೆಗಳು

ಟಿ20 ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಅನೇಕ ದಾಖಲೆಗಳ ಒಡೆಯನಾಗಿದ್ದಾನೆ. ಅದ್ರಲ್ಲೂ ಐಪಿಎಲ್‌ನಲ್ಲಂತೂ ಈತ ಸಾರ್ವಕಾಲಿಕ ಬೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬಾತ. ನಾಲ್ಕು ಬಾರಿ ಐಪಿಎಲ್ ಟ್ರೋಫಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸದಸ್ಯರಾಗಿದ್ದರು.

ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 6000 ಮತ್ತು 7000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಐಪಿಎಲ್‌ನಲ್ಲಿ 5,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ. 205 ಐಪಿಎಲ್ ಪಂದ್ಯಗಳಲ್ಲಿ 5528 ರನ್ ಕಲೆಹಾಕಿರುವ ರೈನಾ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಅರ್ಧಶತಕ ಹಾಗೂ ಒಂದು ಶತಕ ಈತನ ಹೆಸರಿನಲ್ಲಿದೆ.

ಐಪಿಎಲ್‌ನ ಮೊದಲ ಏಳು ಸೀಸನ್‌ಗಲ್ಲಿ ಸ್ಥಿರವಾಗಿ 400ಕ್ಕೂ ಹೆಚ್ಚು ರನ್ ಕಲೆಹಾಕಿರುವ ಸುರೇಶ್ ರೈನಾ, ಮಿಸ್ಟರ್ ಐಪಿಎಲ್ ಎಂಬ ಬಿರುದನ್ನ ಸಹ ಪಡೆದಿದ್ದಾರೆ. ಹೀಗಿರುವಾಗ 35 ವರ್ಷದ ರೈನಾ ವಿದೇಶಿ ಟಿ20 ಲೀಗ್ ಆಡುವ ಸಲುವಾಗಿಯೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ. ಏಕೆಂದರೆ ಬಿಸಿಸಿಐ ನಿಯಮಗಳ ಪ್ರಕಾರ ಭಾರತದ ಪರ ಯಾವುದೇ ಮಾದರಿಯ ಕ್ರಿಕೆಟ್‌ ಆಡುವ ಪ್ಲೇಯರ್‌ ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗಿಯಾಗುವಂತಿಲ್ಲ. ಆದ್ರೀಗ ವಿದೇಶಿ ಟಿ20 ಲೀಗ್‌ಗಳಲ್ಲಿ ರೈನಾ ಭಾಗಿಯಾಗಲು ಎಲ್ಲಾ ದಾರಿಗಳು ಸುಗಮಗೊಂಡಿವೆ.

ಹಾಗಿದ್ರೆ ಸುರೇಶ್ ರೈನಾ ಆಡಬಲ್ಲ ನಾಲ್ಕು ವಿದೇಶಿ ಟಿ20 ಲೀಗ್‌ ಫ್ರಾಂಚೈಸಿಗಳು ಯಾವು ಇರಬಹುದು? ಎಂಬುದನ್ನ ಈ ಕೆಳಗೆ ಕಾಣಬಹುದು.

ಜಫ್ನಾ ಕಿಂಗ್ಸ್‌

ಜಫ್ನಾ ಕಿಂಗ್ಸ್‌

ಸುರೇಶ್ ರೈನಾ ಆಡಬಲ್ಲ ವಿದೇಶಿ ಟಿ20 ಫ್ರಾಂಚೈಸಿಗಳಲ್ಲಿ ಶ್ರೀಲಂಕಾ ಪ್ರೀಮಿಯರ್ ಲೀಗ್‌(ಎಲ್‌ಪಿಎಲ್‌) ತಂಡ ಜಫ್ನಾ ಕಿಂಗ್ಸ್‌ ಕೂಡ ಒಂದಾಗಿದೆ. ಜಫ್ನಾ ಟೀಂ ಉತ್ತಮವಾಗಿದ್ದು ಮಧ್ಯಮ ಕ್ರಮಾಂಕದ ಉತ್ತಮ ಬ್ಯಾಟರ್ ಜೊತೆಗೆ ನಾಯಕನ ಹುಡುಕಾಟದಲ್ಲಿದೆ. ಶೋಯೆಬ್ ಮಲ್ಲಿಕ್ ಮತ್ತು ಧನಂಜಯ ಡಿ ಸಿಲ್ವಾ ಮಾತ್ರ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿದ್ದು, ಸುರೇಶ್ ರೈನಾ ಈ ತಂಡವನ್ನ ಸೇರಿಕೊಂಡರೆ ಮಧ್ಯಮ ಕ್ರಮಾಂಕ ಬಲಿಷ್ಟಗೊಳ್ಳುವುದರ ಜೊತೆಗೆ ತಂಡವನ್ನ ಮುನ್ನಡೆಸಬಹುದಾಗಿದೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ; ಗೌರವ ಸಲ್ಲಿಸಿದ ಶುಭ್‌ಮನ್ ಗಿಲ್

ಕ್ಯಾಂಡಿ ಫಾಲ್ಕನ್ಸ್‌

ಕ್ಯಾಂಡಿ ಫಾಲ್ಕನ್ಸ್‌

ಲಂಕಾ ಪ್ರೀಮಿಯರ್ ಲೀಗ್‌ನ ಮತ್ತೊಂದು ಫ್ರಾಂಚೈಸಿ ಕ್ಯಾಂಡಿ ಫಾಲ್ಕನ್ಸ್‌ ಕೂಡ ಸುರೇಶ್ ರೈನಾರನ್ನ ತಂಡಕ್ಕೆ ಕರೆತರುವ ಪ್ರಯತ್ನ ನಡೆಸಬಹುದು. ಜಫ್ಣಾ ಕಿಂಗ್ಸ್‌ ರೀತಿಯಲ್ಲಿ ಈ ತಂಡದಲ್ಲೂ ಗುಣಮಟ್ಟದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಹೊಂದಿಲ್ಲ. ಪ್ರಸ್ತುತ ವಹಿಂದು ಹಸರಂಗ ತಂಡವನ್ನ ಮುನ್ನಡೆಸಲಿದ್ದಾರೆ. ತಂಡದಲ್ಲಿ ಆಲ್‌ರೌಂಡರ್‌ಗಳಿದ್ದರೂ ಸಹ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್‌ ಅನ್ನು ತಂಡ ಎದುರು ನೋಡುತ್ತಿದ್ದು, ರೈನಾ ಆ ಸ್ಥಾನ ತುಂಬಬಹುದು.

Asia Cup 2022: ಭಾರತದ ವಿರುದ್ಧದ ಪಂದ್ಯದಲ್ಲೂ ಕೋಡ್ ಸಿಗ್ನಲ್ ಬಳಸುತ್ತೇವೆ ಎಂದು ಶ್ರೀಲಂಕಾ ಕೋಚ್

ಎಂಐ ಕೇಪ್‌ ಟೌನ್‌

ಎಂಐ ಕೇಪ್‌ ಟೌನ್‌

ಐಪಿಎಲ್ ಮಾದರಿಯಲ್ಲಿ ಹುಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಫ್ರಾಂಚೈಸಿ ಗಿಟ್ಟಿಸಿಕೊಂಡಿರುವ ಭಾರತ ಮೂಲದ ಫ್ರಾಂಚೈಸಿಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡ ಒಂದಾಗಿದೆ. ಆರು ಫ್ರಾಂಚೈಸಿಗಳಲ್ಲಿ ಒಂದಾಗಿರುವ ಮುಂಬೈ ಕೇಪ್‌ಟೌನ್‌ನಲ್ಲಿ ಭಾರತದ ಬ್ಯಾಟರ್ ಸುರೇಶ್ ರೈನಾಗೆ ಮಣೆ ಹಾಕಿದ್ರು ಆಶ್ಚರ್ಯವಿಲ್ಲ. ಪ್ರಸ್ತುತ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್‌ ಬ್ರೆವಿಸ್ ಮಾತ್ರ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಆಗಿದ್ದು, ಇಂಗ್ಲೆಂಡ್ ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್, ಅಫ್ಘಾನಿಸ್ತಾನದ ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಮುಂಬೈ ಕೇಪ್‌ಟೌನ್ ಫ್ರಾಂಚೈಸಿಗೆ ಸಹಿ ಮಾಡಿದ್ದಾರೆ. ಹೀಗಾಗಿ ಸುರೇಶ್ ರೈನಾ ಕೂಡ ತಂಡ ಸೇರಿಕೊಂಡರೆ ಉತ್ತಮ ಆ್ಯಡ್ ಆನ್ ಆಗಬಹುದು.

Virat Kohli ಹೇಳಿಕೆ ಬಗ್ಗೆ BCCI ಪ್ರತಿಕ್ರಿಯೆ | *Cricket | OneIndia Kannada
ಜೋಬರ್ಗ್‌ ಸೂಪರ್ ಕಿಂಗ್ಸ್‌

ಜೋಬರ್ಗ್‌ ಸೂಪರ್ ಕಿಂಗ್ಸ್‌

ಸುರೇಶ್ ರೈನಾ ತಲುಪಬಲ್ಲ ಮತ್ತೊಂದು ತಂಡವೆಂದ್ರೆ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೋಬರ್ಗ್‌ ಸೂಪರ್ ಕಿಂಗ್ಸ್‌ ಸೇರಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಸಾಕಷ್ಟು ಸೇವೆ ಸಲ್ಲಿಸಿರುವ ರೈನಾ ಸಿಎಸ್‌ಕೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಿರುವಾಗ ಸಿಎಸ್‌ಕೆ ಫ್ರಾಂಚೈಸಿಯ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ತಂಡದಲ್ಲಿ ರೈನಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರೈನಾ ಮಧ್ಯಮ ಕ್ರಮಾಂಕದ ಉತ್ತಮ ಬ್ಯಾಟರ್ ಆಗಿ ಕಾಣಿಸಿಕೊಳ್ಳಬಹುದು. ಆದರೆ, ರೈನಾ ಮತ್ತು ಸಿಎಸ್‌ಕೆ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಯನ್ನು ಗಮನಿಸಿದರೆ ಈ ಬಗ್ಗೆ ಅನುಮಾನ ಮೂಡಿದೆ.

Story first published: Tuesday, September 6, 2022, 18:41 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X