ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!

4 Players Who Have Scored Most Odi Hundreds While Chasing

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕದ ಸಾಧನೆಯನ್ನು ಮಾಡುವುದು ಸುಲಭದ ಸವಾಲಲ್ಲ. ಶ್ರೇಷ್ಠ ಬೌಲರ್‌ಗಳನ್ನು ಎದುರಿಸುವ ಕೌಶಲ್ಯ ಮತ್ತು ಬ್ಯಾಟಿಂಗ್ ತಂತ್ರದ ಜೊತೆಗೆ ಬ್ಯಾಟ್ಸ್‌ಮನ್‌ನ ಮನೋಸ್ಥೈರ್ಯ ಮತ್ತು ಏಕಾಗ್ರತೆ ಅತ್ಯುತ್ತಮ ಮಟ್ಟದಲ್ಲಿದ್ದರೆ ಮಾತ್ರವೇ ಸಾಧ್ಯವಾಗುತ್ತದೆ.

ಇನ್ನು ರನ್ ಬೆನ್ನಟ್ಟುವ ಸಂದರ್ಭದಲ್ಲಿ ಶತಕವನ್ನು ಬಾರಿಸುವುದು ಮತ್ತಷ್ಟು ಕಠಿಣ. ಅದಕ್ಕೆ ಕಾರಣ ತಂಡದ ಮುಂದೆ ರನ್ ಗುರಿ ನಿಗದಿಯಾಗಿರುತ್ತದೆ. ಹಾಗಾಗಿ ಮತ್ತಷ್ಟು ಒತ್ತಡ ಬ್ಯಾಟ್ಸ್‌ಮನ್‌ಗಳ ಮೇಲೆ ಇರುತ್ತದೆ. ಆದರೆ ಕೆಲ ಬ್ಯಾಟ್ಸ್‌ಮನ್‌ಗಳು ಇದನ್ನೆಲ್ಲಾ ಮೀರಿ ತಮ್ಮ ಸಾಧನೆಯನ್ನು ಮಾಡಿದ್ದಾರೆ. ರನ್ ಚೇಸಿಂಗ್ ಸಂದರ್ಭದಲ್ಲಿ ಅತಿ ಹೆಚ್ಚು ಶತಕವನ್ನು ಬಾರಿಸಿದ ಟಾಪ್ ನಾಲ್ವರು ಆಟಗಾರರು ಬಗ್ಗೆ ಈ ವರದಿಯಲ್ಲಿ ನೋಡೋಣ... ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಟಾಪ್ ನಾಲ್ವರು ಆಟಗಾರ ಪೈಕಿ ಮೂವರು ಭಾರತೀಯರೇ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಟಾಪ್-1 ವಿರಾಟ್ ಕೊಹ್ಲಿ-26 ಶತಕ

ಟಾಪ್-1 ವಿರಾಟ್ ಕೊಹ್ಲಿ-26 ಶತಕ

ಚೇಸಿಂಗ್ ಮಾಸ್ಟರ್ ಎಂದೇ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿರಾಟ್ ತಮ್ಮ ಹೆಚ್ಚಿನ ಶತಕ ಗಳಿಕೆಯನ್ನು ಚೇಸಿಂಗ್ ಸಂದರ್ಭದಲ್ಲೇ ಮಾಡಿದ್ದಾರೆ ಎಂಬುದು ಮತ್ತೊಂದು ಮಹತ್ವದ ಸಂಗತಿಯಾಗಿದೆ. ಒಟ್ಟಾರೆ 43 ಏಕದಿನ ಶತಕ ಬಾರಿಸಿರುವ ವಿರಾಟ್ ಚೇಸಿಂಗ್‌ನಲ್ಲಿ 26 ಶತಕ ಬಾರಿಸಿದ್ದಾರೆ ಈ ಪಟ್ಟಿಯಲ್ಲಿ ದಾಖಲೆಯನ್ನು ಬರೆದುಕೊಂಡಿದ್ದಾರೆ. ಕೊಹ್ಲಿಯ ರನ್ ಚೇಸಿಂಗ್ ಶತಕದ 22 ಸಂದರ್ಭದಲ್ಲಿ ಟೀಮ್ ಇಂಡಿಯಾ ಗೆಲುವು ಕಂಡಿದೆ.

ಟಾಪ್-2 ಸಚಿನ್ ತೆಂಡೂಲ್ಕರ್-17 ಶತಕ

ಟಾಪ್-2 ಸಚಿನ್ ತೆಂಡೂಲ್ಕರ್-17 ಶತಕ

ಈ ಪಟ್ಟಿಯಲ್ಲಿರುವ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಆಟಗಾರ ಸಚಿನ್ ತೆಂಡೂಲ್ಕರ್. ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಬಾರಿಸಿ ಸರ್ವಾಧಿಕ ದಾಖಲೆ ಹೊಂದಿರುವ ಸಚಿನ್ ಚೇಸಿಂಗ್‌ನಲ್ಲಿ 17 ಬಾರಿ ಶತಕದ ಸಾಧನೆಯನ್ನು ಮಾಡಿದ್ದಾರೆ. ಸಚಿನ್ ಚೇಸಿಂಗ್ ವೇಳೆ ಶತಕ ಬಾರಿಸಿದ 14 ಪಂದ್ಯಗಳಲ್ಲಿ ಭಾರತ ಗೆಲುವನ್ನು ಸಾಧಿಸಿದೆ.

ಟಾಪ್-3 ರೋಹಿತ್ ಶರ್ಮಾ- 14 ಶತಕ

ಟಾಪ್-3 ರೋಹಿತ್ ಶರ್ಮಾ- 14 ಶತಕ

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಓರ್ವ ಎನಿಸಿಕೊಂಡಿರುವ ರೋಹಿತ್ ಶರ್ಮಾ ಕೂಡ ಈ ಪಟ್ಟಯಲ್ಲಿದ್ದಾರೆ. ರನ್ ಚೇಸಿಂಗ್ ಸಂದರ್ಭದಲ್ಲಿ ರೋಹಿತ್ ಶರ್ಮಾ 14 ಶತಕವನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಒಟ್ಟಾರೆಯಾಗಿ ರೋಹಿತ್ ಶರ್ಮಾ ಹೆಸರಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 29 ಶತಕಗಳು ದಾಖಲಾಗಿದೆ.

ಟಾಪ್-4 ಕ್ರಿಸ್ ಗೇಲ್- 12 ಶತಕ

ಟಾಪ್-4 ಕ್ರಿಸ್ ಗೇಲ್- 12 ಶತಕ

ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿರವ ಏಕೈಕ ವಿದೇಶಿ ಆಟಗಾರ. ಕ್ರಿಸ್ ಗೇಲ್ ರನ್ ಬೆನ್ನಟ್ಟುವ ಸಂದರ್ಭದಲ್ಲಿ 12 ಬಾರಿ ಶತಕವನ್ನು ದಾಖಲಿಸಿ ಈ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸ್ಪೋಟಕವಾಗಿ ಬ್ಯಾಟ್‌ಬೀಸುವ ಸಾಮರ್ಥ್ಯ ಹೊಂದಿರುವ ಗೇಲ್ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಶತಕದ ಸಾಧನೆ ಮಾಡಿದ 8 ಪಂದ್ಯಗಳಲ್ಲಷ್ಟೇ ವಿಂಡೀಸ್ ಗೆಲುವು ಕಂಡಿದೆ.

ಭಾರತೀಯರದ್ದೇ ಪಾರುಪತ್ಯ

ಭಾರತೀಯರದ್ದೇ ಪಾರುಪತ್ಯ

ರನ್ ಚೇಸಿಂಗ್ ಸಂದರ್ಭದಲ್ಲಿ ಶತಕ ಗಳಿಸಿದವರ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರೇ ಪಾರಮ್ಯ ಮೆರೆದಿದ್ದಾರೆ. ನಾಲ್ವರು ಆಟಗಾರರ ಒಟ್ಟಿಯಲ್ಲಿ ಭರ್ಜರಿ ಮೂವರು ಭಾರತೀಯರಿದ್ದಾರೆ. ಅದರಲ್ಲೂ ಮೊದಲನೇ ಸ್ಥಾನದಲಲ್ಲಿರುವ ವಿರಾಟ್ ಕೊಹ್ಲಿ ಮತ್ತು ಮೂರನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಸಕ್ರಿಯ ಆಟಗಾರರಾಗಿದ್ದು ತಮ್ಮ ಉತ್ಕೃಷ್ಟ ಫಾರ್ಮ್‌ನಲ್ಲಿದ್ದಾರೆ. ತಮ್ಮ ದಾಖಲೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Story first published: Wednesday, June 24, 2020, 13:50 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X