ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡದ ಪ್ರಮುಖ ಆಟಗಾರರು

IPL 2020: Six released players who may go unsold in the IPL 2020 auction | Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ರ ಆವೃತ್ತಿಯ ಹರಾಜು ಕೆಲವೇ ವಾರಗಳಲ್ಲಿ ನಡೆಯಲಿದೆ. ಎಲ್ಲಾ ಎಂಟು ತಂಡಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್ 15 ರಂದು ಘೋಷಿಸಿದ್ದವು. ಆ ಪಟ್ಟಿಯಲ್ಲಿ ಸಾಕಷ್ಟು ನಿರೀಕ್ಷಿತ ಹೆಸರುಗಳ ಜೊತೆಗೆ ಒಂದಷ್ಟು ಅನಿರೀಕ್ಷಿತ ಹೆಸರುಗಳೂ ಇದ್ದವು. ಇದು ಅಭಿಮಾನಿಗಳಿಗೆ ಸ್ವಲ್ಪಮಟ್ಟಿನ ಶಾಕ್ ಕೂಡ ನೀಡಿದೆ.

ಆಟಗಾರರನ್ನು ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಹೆಚ್ಚಿನ ಆಶ್ಚರ್ಯ ನೀಡಿದ್ದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್. ಅಭಿಮಾನಿನಗಳ ನೆಚ್ಚಿನ ಆರ್‌ಸಿಬಿ ತಂಡ ಕಳೆದ ಬಾರಿ ತಂಡದಲ್ಲಿದ್ದ 12 ಆಟಗಾರರನ್ನು ಹರಾಜಿಗಿಟ್ಟು ಶಾಕ್ ನೀಡಿದರೆ, ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡ ಪ್ರಮುಖ ಆಟಗಾರರಾದ ರಾಬಿನ್ ಉತ್ತಪ್ಪ, ಪಿಯೂಷ್ ಚಾವ್ಲಾ, ಮತ್ತು ಕ್ರಿಸ್ ಲೇನ್ ಅವರನ್ನು ಬಿಡುಗಡೆಗೊಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಹೀಗೆ ತಂಡಗಳು ಬಿಡುಗಡೆ ಮಾಡಿರುವ ಆಟಗಾರರನ್ನು ಮುಂದಿನ ತಿಂಗಳು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ತಂಡಗಳಿಗೂ ಆಯ್ಕೆ ಮಾಡಿಕೊಳ್ಳುವ ಅವಕಾಶಗಳು ಇರುತ್ತವೆ. ಆದರೆ ಕೆಲವೊಂದು ಪ್ರಮುಖ ಆಟಗಾರರು ಬಿಡುಗಡೆಗೊಂಡಿದ್ದರೂ ಮುಂದಿನ ಹರಾಜು ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಕೆಲವರು ವೈಯಕ್ತಿಕ ಕಾರಣಗಳಿಂದ ಮುಂದಿನ ಆವೃತ್ತಿಗೆ ಲಭ್ಯವಾಗದಿದ್ದರೆ ಇನ್ನು ಕೆಲವರು ತಾಂತ್ರಿಕ ಕಾರಣಗಳಿಂದ ದೂರವಿರಬೇಕಾದ ಅನಿವಾರ್ಯತೆಗಳು ಇದೆ. ಅಂತಾ ಪ್ರಮುಖ ಆಟಗಾರರು ಯಾರು? ಯಾರ್ಯಾರು ಮುಂದಿನ ಐಪಿಎಲ್ ನಲ್ಲಿ ಪಾಲ್ಗೊಳ್ಳುವುಲ್ಲ? ಅದಕ್ಕೆ ಕಾರಣ ಏನು? ಮುಂದೆ ನೋಡೋಣ:

#1 ಯುವರಾಜ್‌ಸಿಂಗ್:

#1 ಯುವರಾಜ್‌ಸಿಂಗ್:

2011ರ ವಿಶ್ವಕಪ್ ಗೆಲುವಿಗೆ ಕಾರಣರಾದ ಪಂಜಾಬ್ ಮೂಲದ ಆಲ್‌ರೌಂಡರ್ ಐಪಿಎಲ್‌ನಲ್ಲಿ ಸಾಕಷ್ಟು ಬೇಡಿಕೆಯ ಆಟಗಾರನಾಗಿದ್ದರು. ಕಳೆದ ಸೀಸನ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಯುವಿಗೆ ನಿರೀಕ್ಷಿತ ಅವಕಾಶವೇ ಸಿಕ್ಕಿರಲಿಲ್ಲ. ಈ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಯುವರಾಜ್ ನಿವೃತ್ತಿಯನ್ನು ಪಡೆದರು. ನಿವೃತ್ತಿಯ ಬಳಿಕ ವಿದೇಶಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಬಿಸಿಸಿಐನಿಂದ ನಿರಪೇಕ್ಷಣಾ ಪತ್ರವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಯುವರಾಜ್ ಸಿಂಗ್ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಸಧ್ಯ ಯುವರಾಜ್ ಸಿಂಗ್ ಗ್ಲೋಬಲ್ ಟಿ-20 ಕೆನಡಾ ಟೂರ್ನಮೆಂಟ್‌ ಮತ್ತು ಅಬುದಾಬಿ ಟಿ-10 ಲೀಗ್‌ನಲ್ಲಿ ಪಾಲ್ಗೊಂಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಬಿಸಿಸಿಐ ಕರಾರುವಿನ ಪ್ರಕಾರ ವಿದೇಶಿ ಟೂರ್ನಿಯಲ್ಲಿ ಪಾಲ್ಗೊಂಡರೆ ಐಪಿಎಲ್ ಹಾಗೂ ಭಾರತೀಯ ತಂಡವನ್ನು ಪ್ರತಿನಿಧಿಸುವಂತಿಲ್ಲ. ಹೀಗಾಗಿ ಯುವರಾಜ್ ಮುಂದಿನ ಐಪಿಎಲ್ ನಲ್ಲಿ ಯಾವುದೇ ತಂಡವನ್ನೂ ಪ್ರತಿನಿಧಿಸುವುದಿಲ್ಲ.

#2 ಶಕಿಬ್ ಅಲ್ ಹಸನ್:

#2 ಶಕಿಬ್ ಅಲ್ ಹಸನ್:

ಬಾಂಗ್ಲಾದೇಶದ ಶ್ರೇಷ್ಠ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅಂತರಾಷ್ಟ್ರೀಯ ಹಾಗೂ ಟಿ-ಟ್ವೆಂಟಿ ಟೂರ್ನಿಗಳಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದಿಂದ ಗಮನಸೆಳೆದಿದ್ದಾರೆ. ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನವನ್ನು ನೀಡಿರುವ ಶಕೀಬ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಹೈದ್ರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.

ಆದರೆ ಐಪಿಎಲ್ ಸರಣಿಯ ಸಂದರ್ಭದಲ್ಲಿ ಬುಕ್ಕಿಗಳು ಶಕೀಬ್ ಅಲ್ ಹಸನ್ ಅವರನ್ನು ಸಂಪರ್ಕಿಸಿದ್ದು ಆ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳದ ಗಮನಕ್ಕೆ ತಂದಿರಲಿಲ್ಲ ಅನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಶಕಿಬ್ ಅಲ್ ಹಸನ್ ಅವರನ್ನು ಮುಂದಿನ ಒಂದು ವರ್ಷಗಳ ಕಾಲ ಕ್ರಿಕೆಟ್‌ನ ಎಲ್ಲಾ ಚಟುವಟಿಕೆಯಿಂದ ನಿಶೇಧಿಸಿದೆ. ಹೀಗಾಗಿ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಶಕೀಬ್ ಅಲ್ ಹಸನ್ ಕೂಡ ಪಾಲ್ಗೊಳ್ಳುತ್ತಿಲ್ಲ.

#3 ಲಿಯಾಮ್ ಲಿಂಗ್ವಿಸಟನ್

#3 ಲಿಯಾಮ್ ಲಿಂಗ್ವಿಸಟನ್

ಇಂಗ್ಲೆಂಡ್ ಮೂಲದ ಆಲ್‌ರೌಂಡರ್ ಕಳೆದ ವರ್ಷವಷ್ಟೇ ಐಪಿಎಲ್‌ನಲ್ಲಿ ತಮ್ಮ ಪಯಣವನ್ನು ಆರಂಭಿಸಿದ್ದರು. ಕಳೆದ ಸೀಸನ್‌ನಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಲಿಯಾಮ್ ಪಡೆದಿದ್ದರು. ಸಿಕ್ಕ ಅವಕಾಶದಲ್ಲಿ ಲಿಯಾಮ್ ಡೀಸೆಂಟ್ ಸರಾಸರಿ 23.66 ಹೊಂದಿದ್ದರೆ 147.91 ಸ್ಟ್ರೈಕ್ ರೇಟ್‌ಹೊಂದಿದ್ದಾರೆ. ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ 2017ಕ್ಕೇ ಪದಾರ್ಪಣೆ ಮಾಡಿದ್ದರೂ ಈ ಆಟಗಾರನಿಗೆ ಅಲ್ಲಿ ತನ್ನ ಸ್ಥಾನವನ್ನು ಭಧ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ವಾಪಾಸ್ಸಾಗುವ ದೃಷ್ಟಿಯಿಂದ ಆಯ್ಕೆಗಾರರ ಗಮನ ಸೆಲೆಯಲು ಕೌಂಟಿ ಚಾಂಪಿಯನ್ಸ್‌ಶಿಪ್ ಕಡೆಗೆ ಗಮನ ನೀಡಲು ಮುಂದಾಗಿದ್ದು ಐಪಿಎಲ್‌ನಿಂದ ಹಿಂದಕ್ಕೆ ಸರಿದಿದ್ದಾರೆ.

4# ರಸಿಕ್ ಸಲಾಮ್:

4# ರಸಿಕ್ ಸಲಾಮ್:

ರಸಿಕ್ ಸಲಾಮ್ ಐಪಿಎಲ್‌ನಲ್ಲಿ ಮುಂಬೈ ತಂಡ ಪರಿಚಯಿಸಿದ ಪ್ರತಿಭೆ. ಜಮ್ಮು ಕಾಶ್ಮೀರ ಮೂಲದ ಈ ಯುವ ಆಟಗಾರನನ್ನು ಕಳೆದ ವರ್ಷದ ಹರಾಜಿನಲ್ಲಿ ಮುಂಬೈ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ ಕೇವಲ ಒಂದು ಪಂದ್ಯದಲ್ಲಷ್ಟೇ ಆಡುವ ಅವಕಾಶ ಪಡೆದಿದ್ದರು. ಈ ಪಂದ್ಯದಲ್ಲಿ 4 ಓವರ್‌ಗಳಲ್ಲಿ 42 ರನ್‌ ನೀಡಿ ದುಬಾರಿ ಎನಿಸಿದರು. ಬಳಿಕ ಭಾರತೀಯ ಅಂಡರ್19 ತಂಡದಲ್ಲಿ ಆಡುವ ಆವಕಾಶವನ್ನು ರಸಿಕ್ ಸಲಾಮ್ ಅಡೆದುಕೊಂಡರು. ಆದರೆ ನಕಲಿ ಬರ್ತ್‌ಸರ್ಟಿಫಿಕೇಟ್‌ ನೀಡಿ ಅವಕಾಶವನ್ನು ಪಡೆದುಕೊಂಡರು ಎಂಬ ಕಾರಣಕ್ಕೆ ಬಿಸಿಸಿಐ ಅಸಿಕ್ ಸಲಾಮ್ ಅವರನ್ನು ಎರಡು ವರ್ಷಗಳ ನಿಶೇಧಕ್ಕೆ ಗುರಿಪಡಿಸಿದೆ. ಹೀಗಾಘಿ ಯುವ ಆಟಗಾರ ಮುಂದಿನ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

Story first published: Monday, November 25, 2019, 14:24 [IST]
Other articles published on Nov 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X