ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!

4 West Indian players who could get big bids in the auction

ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರು ಅಂದರೆ ಬಿಗ್‌ ಹಿಟ್ಟಿಂಗ್‌ಗೆ ಹೇಳಿ ಮಾಡಿಸಿರುವ ಆಟಗಾರರು. ಅದರಲ್ಲೂ ಟಿ20 ಮಾದರಿಯಲ್ಲಿ ವಿಂಡಿಸ್ ಆಟಗಾರರನ್ನು ಮೀರಿಸುವವರೇ ಇಲ್ಲ ಎಂಬಂತಾಗಿದೆ. ಬಿಗ್ ಶಾಟ್‌ಗಳು ವಿಂಡೀಸ್ ಆಟಗಾರರಿಂದ ಸುಲಭವಾಗಿ ಸಿಡಿಯುತ್ತವೆ. ಇದೇ ಕಾರಣಕ್ಕೆ ವಿಶ್ವದ ಯಾವುದೇ ಲೀಗ್ ಪಂದ್ಯಗಳಲ್ಲೂ ವಿಂಡೀಸ್ ಆಟಗಾರರೇ ಮಿಂಚುತ್ತಿರುತ್ತಾರೆ.

ಐಪಿಎಲ್‌ನಲ್ಲೂ ಕೂಡ ಇಲ್ಲಿಯವರೆಗಿನ ಆವೃತ್ತಿಯಲ್ಲಿ ವಿಂಡೀಸ್ ಆಟಗಾರರು ನಿರಾಸೆಮಾಡಿದ್ದು ಕಡಿಮೆಯೇ. ಪ್ರತೀ ತಂಡಗಳಲ್ಲೂ ಒಬ್ಬರಲ್ಲಾ ಒಬ್ಬರು ವಿಂಡೀಸ್ ಆಟಗಾರರು ಇದ್ದೇ ಇರಬೇಕು ಅನ್ನುವಷ್ಟು ಬಲಾಢ್ಯರಾಗಿದ್ದಾರೆ. ಡ್ವೇಯ್ನ್ ಬ್ರಾವೋ, ಕಿರಾನ್ ಪೊಲಾರ್ಡ್, ಕ್ರಿಸ್ ಗೇಲ್ ಐಪಿಎಲ್ ಆವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಟಗಾರರು. ಹಾಗಾಗಿಯೇ ಇವರೆಲ್ಲಾ ಅತ್ಯುತ್ತಮ ಮೊತ್ತಕ್ಕೆ ಖರೀದಿಯಾಗಿದ್ದಾರೆ.

ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?

ವಿಂಡೀಸ್‌ನ ಆಟಗಾರರಲ್ಲಿ ಹೆಚ್ಚಿನ ಆಟಗಾರರು ತಮ್ಮ ತಂಡಗಳಿಂದ ರೀಟೇನ್ ಆಗಿದ್ದಾರೆ. ರೀಟೇನ್ ಆಗದ ಆಟಗಾರರಲ್ಲಿ ಕೆಲವರು ಇತ್ತೀಚಿನ ಅತ್ಯುತ್ತಮ ಪ್ರದರ್ಶನಗಳಿಂದಾಗಿ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆಲ ವಿಂಡೀಸ್ ಆಟಗಾರರು ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಭಾಗಿಯಾಗಲಿದ್ದು ಅವರ ಮೇಲೂ ನಿರಿಕ್ಷೆ ಹೆಚ್ಚಿಸಿದೆ. ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಮೂಡಿಸಿರುವ ನಾಲ್ವರು ಆಟಗಾರರು ಯಾರು ಅನ್ನೋದನ್ನು ಬನ್ನಿ ನೋಡೋಣ;

ಶೆಲ್ಡನ್ ಕಾಟ್ರೆಲ್;

ಶೆಲ್ಡನ್ ಕಾಟ್ರೆಲ್;

ವೆಸ್ಟ್‌ ಇಂಡೀಸ್‌ನ ಪ್ರಮುಖ ವೇಗಿ ಶೆಲ್ಡನ್ ಕಾಟ್ರೆಲ್ ತನ್ನ ವಿಭಿನ್ನ ಶೈಲಿಯ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್‌ಮನ್‌ಗಳನ್ನು ಕಂಗೆಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೊಸ ಚೆಂಡಿನಲ್ಲಿ ಉತ್ತಮ ಸ್ವಿಂಗ್ ಮಾಡುವ ಜೊತೆಗೆ ಡೆತ್‌ ಒವರ್‌ಗಳಲ್ಲಿ ನಿಖರ ಯಾರ್ಕರ್‌ಗಳನ್ನೂ ಎಸೆಯುವ ಮೂಲಕ ತಂಡಕ್ಕೆ ನೆರವಾಗುತ್ತಾರೆ. ಈ ಆಟಗಾರನ ಮೇಲೆ ಚೆನ್ನೈ ಮತ್ತು ಡೆಲ್ಲಿ ತಂಡಗಳು ಕಣ್ಣಿಟ್ಟಿದ್ದು ಉತ್ತಮ ಮೊತ್ತಕ್ಕೆ ಹರಾಜಾಗುವುದರಲ್ಲಿ ಸಂಶಯವಿಲ್ಲ.

ಎವಿನ್ ಲೆವೀಸ್;

ಎವಿನ್ ಲೆವೀಸ್;

ಸದ್ಯ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಕ ಆಟಗಾರರಲ್ಲಿ ಎವಿನ್ ಲೆವೀಸ್ ಕೂಡ ಒಬ್ಬರು. ಆದರೆ ಕಳೆದ ಬಾರಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಲೆವೀಸ್ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮುಂಬೈ ರಿಟೇನ್ ಮಾಡಿಕೊಳ್ಳದಿರುವುದೇ ಇಲ್ಲಿ ಆಶ್ಚರ್ಯ ತಂದಿದೆ. ಆದೇನೆ ಇದ್ದರೂ ಲೇವೀಸ್ ಗೆ ಈ ಬಿಡ್ಡಿಂಗ್ ಮತ್ತಷ್ಟು ಲಾಭಕಾರಿಯಾಗಿರುವುದರಲ್ಲಿ ಅನುಮಾನವಿಲ್ಲ.

ಬ್ರಾಂಡನ್ ಕಿಂಗ್;

ಬ್ರಾಂಡನ್ ಕಿಂಗ್;

ಕೆರೇಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಬಾರಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಇರೋದು ಇದೇ ಬ್ರಾಂಡನ್ ಕಿಂಗ್ ಹೆಸರಿನಲ್ಲಿ. 12 ಪಂದ್ಯಗಳನ್ನಾಡಿದ ಬ್ರಾಂಡನ್ ಕಿಂಗ್ 55.11ಯಷ್ಟು ಸರಾಸರಿಯನ್ನು ಹೊಂದಿದ್ದಾರೆ. 148.94 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕಿದ್ದಾರೆ ಇದು ಸಹಜವಾಗಿಯೇ ಐಪಿಎಲ್ ಫ್ರಾಂಚೈಸಿಗಳ ಕಣ್ಣು ಕಿಂಗ್ ಮೇಲೆ ಬೀಳಲು ಕಾರಣವಾಗಿದೆ. ಟಿ20ಯಲ್ಲಿ ಆರಂಭಿಕ ಆಟಗಾರನಾಗಿರುವ ಕಿಂಗ್ ಮೇಲೆ ರಾಜಸ್ತಾನ ರಾಯಲ್ಸ್‌ ಹಾಗೂ ಕೆಕೆಆರ್ ತಂಡಗಳು ಚಿತ್ತ ನೆಟ್ಟಿದ್ದು ಉತ್ತಮ ಮೊತ್ತ ಪಡೆಯಲಿದ್ದಾರೆ.

ರೇಮನ್ ರೈಫರ್:

ರೇಮನ್ ರೈಫರ್:

ಅಷ್ಟೇನು ಪರಿಚಿತನಲ್ಲದ ಆಟಗಾರ ರೈಮನ್ ರೈಫರ್. ಆದರೆ ಈತನ ಸಾಮರ್ಥ್ಯ ಏನು ಅನ್ನೋದನ್ನು 'ಕೆರೇಬಿಯನ್ ಪ್ರೀಮಿಯರ್ ಲೀಗ್‌'(ಸಿಪಿಎಲ್)ನಲ್ಲಿ ಈತ ತೋರಿಸಿದ್ದಾನೆ. ಈ ವರ್ಷ ಬಾರ್ಬಡೋಸ್ ಟ್ರಿನಿಡಾಡ್ ತಂಡ ಸಿಪಿಎಲ್‌ನಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಲು ಈತ ಪ್ರಮುಖ ಕಾರಣ. ಲೋ ಸ್ಕೋರಿಂಗ್ ಮ್ಯಾಚ್‌ನಲ್ಲಿ ಎದುರಾಳಿಯನ್ನು ಕೂಡ ಕಡಿಮೆ ಮೊತ್ತಕ್ಕೆ ಕಟ್ದಟಿಹಾಕುವ ಚಾಕಚಕ್ಯತೆ ರೈಫರ್‌ಗಿದೆ. ಅಷ್ಟೇನು ವೇಗದಿಂದ ಬಾಲ್ ಮಾಡದಿದ್ದರೂ ನಿಖರತೆ ಮತ್ತು ವೈವಿದ್ಯತೆ ಎದುರಾಳಿಯನ್ನು ಕಟ್ಟಿಹಾಕುವಂತೆ ಮಾಡುತ್ತದೆ. ಈ ಆಟಗಾರ ಕೂಡ ಅತ್ಯುತ್ತಮ ಬೆಲೆಗೆ ಈ ಬಾರಿಯ ಐಪಿಎಲ್‌ನಲ್ಲಿ ಹರಾಜಾವುದು ಬಹುತೇಕ ಪಕ್ಕಾ

Story first published: Wednesday, December 11, 2019, 13:10 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X