ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ - ನ್ಯೂಜಿಲೆಂಡ್‌ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ

4000 Fans to be allowed for World Test Championship final between India and New Zealand

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ 20 ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ. ಅತ್ತ 20 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಈಗಾಗಲೇ ಇಂಗ್ಲೆಂಡ್ ತಲುಪಿದೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್: ಭಾರತದ ವಿರುದ್ಧ ಕನ್ನಡಿಗ ರಚಿನ್ ಕಣಕ್ಕಿಳಿಯುವ ಸಾಧ್ಯತೆವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್: ಭಾರತದ ವಿರುದ್ಧ ಕನ್ನಡಿಗ ರಚಿನ್ ಕಣಕ್ಕಿಳಿಯುವ ಸಾಧ್ಯತೆ

ಜೂನ್ 18ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವೀಕ್ಷಿಸಲು ವೀಕ್ಷಕರಿಗೆ ಅವಕಾಶ ನೀಡುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಇಂಗ್ಲೆಂಡ್‌ನಲ್ಲಿ ಕೊರೊನಾವೈರಸ್ ಹಾವಳಿ ತಗ್ಗಿರುವ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವೀಕ್ಷಿಸಲು 4000 ವೀಕ್ಷಕರಿಗೆ ಅನುಮತಿ ನೀಡುವುದಾಗಿ ಹ್ಯಾಂಪ್‌ಶೈರ್ ಕೌಂಟಿ ಕ್ಲಬ್ ಮುಖ್ಯಸ್ಥ ರಾಡ್ ಬ್ರಾನ್ಸ್‌ಗ್ರೋವ್ ತಿಳಿಸಿದ್ದಾರೆ.

'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ

ಏಗಾಸ್ ಬೌಲ್‌ನಲ್ಲಿ ಲೀಸೆಸ್ಟರ್‌ಶೈರ್ ಮತ್ತು ಹ್ಯಾಂಪ್‌ಶೈರ್ ನಡುವೆ ನಡೆಯುತ್ತಿರುವ ಕೌಂಟಿ ಕ್ರಿಕೆಟ್ ಪಂದ್ಯ ವೀಕ್ಷಿಸಲು 1500 ಜನರಿಗೆ ಅವಕಾಶವನ್ನು ನೀಡಲಾಗಿದ್ದು, 2019ರ ಸೆಪ್ಟೆಂಬರ್ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶವನ್ನು ನೀಡಲಾಗಿದೆ. ಈ ಕುರಿತು ಮಾತನಾಡಿರುವ ಹ್ಯಾಂಪ್‌ಶೈರ್ ಕೌಂಟಿ ಕ್ಲಬ್ ಮುಖ್ಯಸ್ಥ ರಾಡ್ ಬ್ರಾನ್ಸ್‌ಗ್ರೋವ್ 'ಪ್ರಸ್ತುತ ನಡೆಯುತ್ತಿರುವ ಕೌಂಟಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶವನ್ನು ನೀಡಲಾಗಿದ್ದು ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ವೀಕ್ಷಿಸಲು ಸುಮಾರು 4000 ವೀಕ್ಷಕರಿಗೆ ಅವಕಾಶ ನೀಡಲಾಗುವುದು' ಎಂದು ತಿಳಿಸಿದ್ದಾರೆ.

Story first published: Thursday, May 20, 2021, 14:39 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X